ಯೋಜನಾ ವರದಿ ಅನುಸಾರ ಬೈಪಾಸ್ ರಸ್ತೆ ನಿರ್ಮಿಸಿ

Untitled design (2)
ಹಟ್ಟಿ-ರಾಯಚೂರು ಮುಖ್ಯ ರಸ್ತೆಯ ಕಾಕಾನಗರ ಸೇತುವೆ ಬಳಿ ಶ್ರೀರಾಮ ಸೇನೆ ತಾಲೂಕು ಘಟಕ ಹಾಗೂ ನವಭಾರತ ದಲಿತ ಸಂಘಟನೆ ಜಿಲ್ಲಾ ಘಟಕ ಜಂಟಿಯಾಗಿ ಅನಿರ್ಧಿಷ್ಟಾ ಧರಣಿ ನಡೆಸಿದವು. ಪ್ರಮುಖರಾದ ರಘುಗೌಡ ನಾಯಕ್, ವಿನೋದ್ ಕುಮಾರ್, ಎನ್.ಸ್ವಾಮಿ ನಾಯಿಕೋಡಿ, ಹನುಮಂತರೆಡ್ಡಿ, ಬಸವರಾಜ್ ಪೈ ನಾಯಕ್, ಯೋಕೋಬ್ ಪವಾಡೆ, ಶಿವು ಕುರುಬರ್, ಅಮರೇಶ್, ವೆಂಕಟೇಶ್, ನಿಂಗಪ್ಪ ಸೇರಿದಂತೆ ಇತರರಿದ್ದರು.
Published on

ಹಟ್ಟಿಚಿನ್ನದಗಣಿ: ಬೈಪಾಸ್ ರಸ್ತೆಯನ್ನು ಗುಣಮಟ್ಟದಿಂದ ನಿರ್ಮಿಸಲು ಆಗ್ರಹಿಸಿ ಶ್ರೀರಾಮ ಸೇನೆ ತಾಲೂಕು ಘಟಕ ಹಾಗೂ ನವಭಾರತ ದಲಿತ ಸಂಘಟನೆ ಜಿಲ್ಲಾ ಘಟಕ ಜಂಟಿಯಾಗಿ ಹಟ್ಟಿ-ರಾಯಚೂರು ಮುಖ್ಯ ರಸ್ತೆಯ ಕಾಕಾನಗರ ಸೇತುವೆ ನಿರ್ಮಾಣದ ಬಳಿ ಸೋಮವಾರ ಅರ್ನಿದಿಷ್ಟಾವಧಿ ಧರಣಿ ನಡೆಸಿದವು.

ಬೈಪಾಸ್ ಕಾಮಗಾರಿ ಸಂಪೂರ್ಣ ಕಳಪೆ

ಕಾಕಾನಗರ ಸೇತುವೆಯನ್ನು 4.30 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಆದರೆ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ. ಕೂಡಲೇ ತನಿಖೆ ನಡೆಸಿ ಯೋಜನಾ ವರದಿ ಅನುಸಾರ ಬೈಪಾಸ್ ರಸ್ತೆ ನಿರ್ಮಿಸಿಕೊಡಬೇಕೆಂದು ಶ್ರೀರಾಮ ಸೇನೆ ಸಂಘಟನೆ ತಾಲೂಕು ಅಧ್ಯಕ್ಷ ರಘುಗೌಡ ನಾಯಕ್ ಒತ್ತಾಯಿಸಿದರು.

ಕಾಮಗಾರಿ ಪ್ರಾರಂಭವಾಗಿ ಆರು ತಿಂಗಳು ಕಳೆದಿದೆ. ಆದರೆ ಗುತ್ತಿಗೆದಾರ ಒಂದು ದಿನವು ಸ್ಥಳಕ್ಕೆ ಬಂದಿಲ್ಲ. ಅಲ್ಲದೆ ಯಾವೊಬ್ಬ ಅಧಿಕಾರಿ ಗುಣಮಟ್ಟ ಪರಿಶೀಲನೆ ಮಾಡಿಲ್ಲ. ಕಾಮಗಾರಿ ಕಳಪೆಯಿಂದ ಕೂಡಿದ್ದು, ಆಮೆಗತಿಯಲ್ಲಿ ಸಾಗಿದೆ. ಪರ್ಯಾಯ ರಸ್ತೆ ನಿರ್ಮಿಸಿಲ್ಲದಿರುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಬೈಪಾಸ್ ರಸ್ತೆ ನಿರ್ಮಿಸುವವರೆಗೆ ಹೋರಾಟ ನಿರಂತರವೆಂದು ಎಚ್ಚರಿಸಿದರು.

ಮಾತಿನ ಚಕಮಕಿ

ಧರಣಿ ಸ್ಥಳಕ್ಕೆ ಭೇಟಿ ನೀಡಿದ ರಾಯಚೂರಿನ ಲೋಕೋಪಯೋಗಿ ಇಲಾಖೆಯ ತಾಂತ್ರಿಕ ಸಹಾಯಕ ಅಧಿಕಾರಿ ಚಂದ್ರಶೇಖರ್ ಹಾಗೂ ಜೆಇ ಬಸವರಾಜ್ ಬಸ್ತಾನಿಗೆ ಹೋರಾಟಗಾರರು ತೀವ್ರ ತರಾಟೆಗೆ ತೆಗೆದುಕೊಂಡರು. ನಂತರ ಮಾತಿನ ಚಕಮಕಿ ನಡೆದು ಮೇಲಧಿಕಾರಿಗಳು ಹಾಗೂ ಗುತ್ತಿಗೆದಾರರು ಸ್ಥಳಕ್ಕೆ ಬರಬೇಕೆಂದು ಹೋರಾಟಗಾರರು ಪಟ್ಟು ಹಿಡಿದರು. ಜಿಪಂ ಸಿಇಒರನ್ನು ಕರೆಸುವುದಾಗಿ ಹೇಳಿ ಅಧಿಕಾರಿಗಳು ತೆರಳಿದರು.
ನವಭಾರತ ದಲಿತ ಸಂಘಟನೆ ಜಿಲ್ಲಾ ಅಧ್ಯಕ್ಷ ವಿನೋದ್ ಕುಮಾರ್, ಪ್ರಮುಖರಾದ ಎನ್.ಸ್ವಾಮಿ ನಾಯಿಕೋಡಿ, ಹನುಮಂತರೆಡ್ಡಿ, ಬಸವರಾಜ್ ಪೈ ನಾಯಕ್, ಯೋಕೋಬ್ ಪವಾಡೆ, ಶಿವು ಕುರುಬರ್, ಅಮರೇಶ್, ವೆಂಕಟೇಶ್, ನಿಂಗಪ್ಪ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net