

ಈಗಾಗಲೇ ಬಹುತೇಕ ಶೂಟಿಂಗ್ ಕೆಲಸಗಳನ್ನು ಮುಗಿಸಿಕೊಂಡಿರುವ ಶ್ರೇಯಸ್ ಮಂಜು ನಾಯಕತ್ವದ ವಿಷ್ಣು ಪ್ರಿಯಾ ಸಿನಿಮಾ ಓಣಂ ಹಬ್ಬದ ಪ್ರಯುಕ್ತ ಹೊಸ ಸುದ್ದಿಯನ್ನು ಹಂಚಿಕೊಂಡಿದೆ.
ಅಂದರೆ, ವಿಷ್ಣು ಪ್ರಿಯಾ ಸಿನಿಮಾ ಈ ಮೊದಲು ಕನ್ನಡದಲ್ಲಷ್ಟೇ ತೆರೆಕಾಣಲಿದೆ ಎನ್ನಲಾಗಿತ್ತು. ಇದೀಗ ಕನ್ನಡದ ಜತೆಗೆ ಮಲಯಾಳಂನಲ್ಲಿಯೂ ಸಿನಿಮಾ ರಿಲೀಸ್ ಆಗಲಿದೆಯಂತೆ. ಈ ವಿಚಾರವನ್ನು ಸ್ವತಃ ಚಿತ್ರದ ನಾಯಕ ಶ್ರೇಯಸ್ ಮಂಜು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಒರು ಅಡಾರ್ ಲವ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪ್ರವೇಶ ಪಡೆದಿದ್ದ ಕಣ್ಸನ್ನೇ ಹುಡುಗಿ ಪ್ರಿಯಾ ವಾರಿಯರ್, ವಿಷ್ಣುಪ್ರಿಯಾ ಸಿನಿಮಾದಲ್ಲಿ ಶ್ರೇಯಸ್ ಮಂಜುಗೆ ನಾಯಕಿಯಾಗಿದ್ದಾರೆ. ‘ಈ ವಿಚಾರವನ್ನು ಹಂಚಿಕೊಳ್ಳು ಖುಷಿ ಎನಿಸುತ್ತಿದೆ. ನನ್ನ ಮುಂದಿನ ಸಿನಿಮಾ ವಿಷ್ಣುಪ್ರಿಯಾ ಚಿತ್ರ ಕನ್ನಡದ ಜತೆಗೆ ಮಲಯಾಳಂನಲ್ಲಿಯೂ ಬಿಡುಗಡೆಯಾಗಲಿದೆ. ಅದರ ಫಸ್ಟ್ಲುಕ್ ಇಲ್ಲಿದೆ’ ಎಂದಿದ್ದಾರೆ.
ಶಬ್ಬೀರ್ ಪಠಾಣ್ ಚಿತ್ರಕ್ಕೆ ನಿರ್ಮಾಪಕರಾಗಿದ್ದು, ವಿಕೆ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ಗೋಪಿ ಸುಂದರ್ ಸಂಗೀತ ನೀಡಿದ್ದು, ಕೆ. ಮಂಜು ಅರ್ಪಿಸಿದ್ದಾರೆ. ಸದ್ಯ ಲಾಕ್ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದ್ದು, ಯಾವಾಗ ಎಂಬುದನ್ನು ಶೀಘ್ರದಲ್ಲಿ ಬಹಿರಂಗಪಡಿಸಲಿದೆ ಚಿತ್ರತಂಡ.