

ಮುಂಬೈ: ತಮ್ಮ ಗಾಯನದ ಮೂಲಕವೇ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ (Sherya Ghoshal) ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ಇವರ ಧ್ವನಿಗೆ ಫಿದಾ ಆಗಿದ್ದು, ತಮ್ಮ ಧ್ವನಿಯ ಮೂಲಕವೇ ಗಾಯನ ಲೋಕದಲ್ಲಿ ದೊಡ್ಡ ಮ್ಯಾಜಿಕ್ ಮಾಡಿದ್ದಾರೆ ಎಂದರೆ ತಪ್ಪಾಗಲಾರದು.
ಹಿಂದಿ ಕಿರುತೆರೆಯ ಪ್ರಖ್ಯಾತ ರಿಯಾಲಿಟಿ ಶೋ ಇಂಡಿಯನ್ಸ್ ಐಡಲ್ನಲ್ಲಿ ಶ್ರೇಯಾ ಘೋಷಾಲ್ ಅತಿಥಿಯಾಗಿ ಭಾಗಿಯಾಗಿದ್ದು, ತಮ್ಮ ಮಾತುಗಳ ಮೂಲಕವೇ ಹೊಸ ಪ್ರತಿಭೆಗಳಿಗೆ ಸ್ಫೂರ್ತಿ ತುಂಬಿದ್ದಾರೆ. ಇದೀಗ ಶ್ರೇಯಾ ಘೋಷಾಲ್ (Shreya Ghoshal) ಅವರ ಮಧುರ ಧ್ವನಿಗೆ ಖ್ಯಾತ ರ್‍ಯಾಪರ್ ಬಾದ್ ಷಾ (Rapper Badshah) ಭಾವುಕರಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ದಢಕ್ ಚಿತ್ರದ ಹಾಡನ್ನು ಶ್ರೇಯಾ ಘೋಷಾಲ್ (Shrya Ghoshal) ಹಾಡಿದ್ದು, ಅಲ್ಲೇ ಪಕ್ಕದಲ್ಲೇ ಕುಳಿತಿರುವ ಖ್ಯಾತ ರ್‍ಯಾಪರ್ ಬಾದ್ ಷಾ (Badshah) ಕಣ್ಣಲ್ಲಿ ನೀರು ಬರುತ್ತಿರುವುದನ್ನು ನೋಡಬಹುದಾಗಿದೆ. ಜಡ್ಜ್ಗಳಾದ ಗೀತಾ ಕಪೂರ್, ಕರಿಷ್ಮಾ ಕಪೂರ್ ಶ್ರೇಯಾ ಅವರನ್ನು ಹಾಡಿ ಹೊಗಳುತ್ತಿರುವುದನ್ನು ನೋಡಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನೂ ಇತ್ತೀಚಿಗೆ ಕಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಪ್ರದರ್ಶನ ನೀಡಿದ್ದ ಗಾಯಕಿ ಶ್ರೇಯಾ ಘೋಷಾಲ್ (Shreya Ghoshal) ಪ್ರೇಕ್ಷಕರಿಗೆ ಚಪ್ಪಾಳೆ ಹೊಡೆಯದಂತೆ ಮನವಿ ಮಾಡಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಗಾಯಕಿ ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ಖಂಡಿಸಲು ತಾವು ಈ ರೀತಿ ಮಾಡಿದ್ದಾಗಿ ಹೇಳಿಕೊಂಡಿದ್ದರು. ಈ ವಿಚಾರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು.