

ಸೊರಬ: ಚಂದ್ರಗುತ್ತಿ ಗ್ರಾಮದ ಮರಳೋಣಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗುರುವಾರ ಶ್ರಾವಣ ಮಾಸದ ಸಂಕಷ್ಟಿ ನಿಮಿತ್ತ ವಿಶೇಷ ಪೂಜೆಗಳು ನಡೆದವು.
ದೇಗುಲದಲ್ಲಿ ಶ್ರೀ ಮಹಾಗಣಪತಿ ದೇವರಿಗೆ ವಿಶೇಷ ಅಲಂಕಾರ ಪೂಜೆ, ಅಭಿಷೇಕ, ಹೋಮ-ಹವನ, ಮಹಾಮಂಗಳಾರತಿ ಪೂಜಾ ವಿಧಿವಿಧಾನ ನಡೆದವು. ಭಕ್ತರಿಗೆ ಶ್ರಾವಣ ಸಂಕಷ್ಟಿ ನಿಮಿತ್ತ ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು. ಅರ್ಚಕ ನಿರಂಜನ್ ಭಟ್ ನೇತೃತ್ವ ವಹಿಸಿದ್ದರು. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ದರ್ಶನ ಪಡೆದರು. ಮಹಾಗಣಪತಿ ಸೇವಾ ಸಮಿತಿ ಪದಾಧಿಕಾರಿಗಳು ಹಾಗೂ ಸ್ಥಳೀಯರು ಇದ್ದರು.