ಟೈಟಲ್​ ಬದಲಾಯಿಸಿ ಅಷ್ಟೇ... ಶ್ರದ್ಧಾ ಕಪೂರ್​ ನಟನೆಯ ಬಯೋಪಿಕ್​ಗೆ ಕಲಾವಿದೆಯ ಕುಟುಂಬದಿಂದಲೇ ವಿರೋಧ!

ಶ್ರದ್ಧಾ ಕಪೂರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ
ಶ್ರದ್ಧಾ ಕಪೂರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ
Published on

ಪ್ರಮುಖ ಮುಖ್ಯಾಂಶಗಳು

  • ಬಹುನಿರೀಕ್ಷಿತ ಬಯೋಪಿಕ್​ ಚಿತ್ರಕ್ಕೆ (Eetha) ಈಗ ಟೈಟಲ್​ ವಿವಾದ
  • ಸ್ವತಃ ಕಲಾವಿದೆಯೇ ಕುಟುಂಬಸ್ಥರೇ ಬದಲಾವಣೆಗೆ ಒತ್ತಾಯ
ಮುಂಬೈ: ಬಾಲಿವುಡ್​ನ ಸ್ಟಾರ್​ ನಟಿ ಶ್ರದ್ಧಾ ಕಪೂರ್ ಅಭಿನಯದ ಬಹುನಿರೀಕ್ಷಿತ ಬಯೋಪಿಕ್​ ಚಿತ್ರಕ್ಕೆ (Eetha) ಈಗ ಟೈಟಲ್​ ಬದಲಾವಣೆಯ ಕೂಗು ಕೇಳಿಬಂದಿದೆ. ಆರಂಭದಲ್ಲಿ, ಎನ್​ಸಿಪಿ ಇದಕ್ಕೆ ತೀವ್ರ ಆಕ್ಷೇಪಣೆ ಸಲ್ಲಿಸಿತ್ತು. ಆದರೀಗ, ಕಲಾವಿದೆಯ ಕುಟುಂಬವೇ ವಿರೋಧ ವ್ಯಕ್ತಪಡಿಸಿರುವುದು ಸದ್ಯ ಅಚ್ಚರಿಯ ಬೆಳವಣಿಗೆಯಾಗಿದೆ.
'ಈಥ' ಚಿತ್ರವು ಬಿಡುಗಡೆಗೂ ಮುನ್ನವೇ ಟೈಟಲ್​ನಿಂದ ಭಾರಿ ವಿವಾದಕ್ಕೆ ಸಿಲುಕಿದ್ದು, ಹೆಸರಾಂತ ಲಾವಣಿ ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಪಾತ್ರದಲ್ಲಿ ಶ್ರದ್ಧಾ ಸಿನಿಪ್ರಿಯರ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ನೋಡುಗರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಈ ಮಧ್ಯೆಯೇ, ಚಿತ್ರದ ಶೀರ್ಷಿಕೆಗೆ ಕಲಾವಿದೆಯ ಕುಟುಂಬಸ್ಥರು ಕೂಡಲೇ ಬದಲಾಯಿಸಿ ಎಂದು ಒತ್ತಾಯಿಸಿದ್ದಾರೆ.
ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಬಯೋಪಿಕ್ ಚಿತ್ರಕ್ಕೆ​ ಪ್ರಸಿದ್ಧ ಜಾನಪದ ಕಲಾವಿದೆಯ ಹೆಸರನ್ನೇ ಇಡಬಹುದಿತ್ತು ಅಲ್ಲವೇ? ಅದನ್ನು ಬಿಟ್ಟು ಇನ್ಯಾವುದನ್ನೋ ಟೈಟಲ್​ ಆಗಿ ಇಟ್ಟಿರುವುದು ಸರಿಯಲ್ಲ ಎಂದಿತು. ಇದೇ ವಿಚಾರಕ್ಕೆ ಈಗ ಸ್ವತಃ ವಿಠಾಬಾಯಿ ಕುಟುಂಬ ದನಿಗೂಡಿಸಿದ್ದು, ನಿರ್ಮಾಪಕರು ಗೌರವಾರ್ಥವಾಗಿ ಸಿನಿಮಾಗೆ ಅವರ ಹೆಸರನ್ನೇ ಇಡುವುದು ಒಳ್ಳೆಯ ನಿರ್ಧಾರ ಎಂದಿದ್ದಾರೆ.

'ಈಥ' ಏಕೆ ಟೀಕೆಗಳನ್ನು ಎದುರಿಸುತ್ತಿದೆ?

ವರದಿಗಳ ಪ್ರಕಾರ, ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನವನ್ನು ಆಧರಿಸಿ ಸಿನಿಮಾ ಮಾಡುತ್ತಿದ್ದೀರಾ ಅಂದಮೇಲೆ ಅವರ ಹೆಸರನ್ನೇ ಚಿತ್ರಕ್ಕೆ ಇಡುವುದು ಸೂಕ್ತ ಎಂದು ಎನ್​ಸಿಪಿ ಬಲವಾಗಿ ವಾದಿಸಿದೆ. 'ವಿಠಾ' ಅಥವಾ 'ವಿಠಾಬಾಯಿ' ಎಂದು ಸಿನಿಮಾ ಟೈಟಲ್ ಬದಲಾಯಿಸುವುದು ಉತ್ತಮ.​ ಮಹಾರಾಷ್ಟ್ರದ ಲಾವಣಿ ಮತ್ತು ತಮಾಷಾ ಸಂಪ್ರದಾಯಗಳಿಗೆ ಮಿಠಾಬಾಯಿ ಅವರು ಲೆಜೆಂಡ್ರಿ ಕಲಾವಿದೆ. ಅವರ ಕೊಡುಗೆಗಳನ್ನು ಸ್ಮರಿಸುವ ಚಿತ್ರತಂಡ ಈ ಕೆಲಸವನ್ನು ಮೊದಲು ಮಾಡಲಿ ಎಂದಿದೆ ಎನ್​ಸಿಪಿ.
ವರದಿಗಳ ಪ್ರಕಾರ, ದಿಗ್ಗಜ ಕಲಾವಿದೆಯ ಪುತ್ರರಾದ ಕೈಲಾಶ್ ಮತ್ತು ರಾಜೇಶ್ ನಾರಾಯಣಗಾಂವ್ಕರ್ ಮತ್ತು ಅವರ ಮೊಮ್ಮಗ ಮೋಹಿತ್ ನಾರಾಯಣಗಾಂವ್ಕರ್ ಚಿತ್ರದ ಟೈಟಲ್​ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟೈಟಲ್​ನಲ್ಲಿ ಜಾನಪದ ಕಲೆಯನ್ನು ಉತ್ತುಂಗಕ್ಕೆ ಕೊಂಡೊಯ್ದ ಸಾಧಕಿಯ ಹೆಸರಿರಲಿ. ಸದ್ಯ ಕುಟುಂಬಸ್ಥರ ವಿರೋಧಕ್ಕೆ ಸಿನಿಮಾದ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಮತ್ತು ನಿರ್ಮಾಣ ಸಂಸ್ಥೆ ಮ್ಯಾಡಾಕ್ ಫಿಲ್ಮ್ಸ್ ಆಗಲಿ, ವಿವಾದಕ್ಕೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸಿಲ್ಲ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net