ಸ್ನೇಹಿತೆಯ ಮದುವೆಯಲ್ಲಿ ಶ್ರದ್ಧಾ ಸ್ಟೆಪ್ಸ್​: ನೆಟ್ಟಿಗರು ಫಿದಾ..

shrsdha kapur
Published on

ಮುಂಬೈ​: ಬಾಲಿವುಡ್ ಸ್ಟಾರ್ ನಟಿ ಶ್ರದ್ಧಾ ಕಪೂರ್ ತನ್ನ ಸ್ನೇಹಿತೆಯ ಮದುವೆಯಲ್ಲಿ ಸದ್ದು ಮಾಡಿದ್ದು, ವೀಡಿಯೋ ವೈರಲ್​ ಆಗುತ್ತಿದೆ.

ಬಾಲಿವುಡ್ ಸ್ಟಾರ್ ನಟಿ ಶ್ರದ್ಧಾ ಕಪೂರ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಶಕ್ತಿ ಕಪೂರ್ ಅವರ ಉತ್ತರಾಧಿಕಾರಿಯಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಈ ಚೆಲುವೆ ತನ್ನ ಅಭಿನಯದ ಮೂಲಕ ಒಳ್ಳೆಯ ಹೆಸರು ತಂದುಕೊಂಡಿದ್ದಾಳೆ.

ಪ್ರೇಮಕಥೆಯ ಸರಣಿ ಚಿತ್ರಗಳಲ್ಲಿ ನಟಿಸಿ ಸ್ಟಾರ್ ಹೀರೋಯಿನ್ ಎಂದು ಹೆಸರು ಗಳಿಸಿದ್ದಾಳೆ ಶ್ರದ್ಧಾ. ಈ ನಟಿ ಅಭಿನಯದ ಆಶಿಕಿ-2 ಚಿತ್ರ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದು, ಈ ಸಿನಿಮಾದ ಹಾಡುಗಳಿಗೆ ಪ್ರೇಕ್ಷಕರು ತುಂಬಾ ಕನೆಕ್ಟ್ ಆಗಿದ್ದರು.

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಸಾಹೋ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ ಈ ನಟಿ ತನ್ನ ಸ್ನೇಹಿತೆಯ ಮದುವೆಯಲ್ಲಿ ಸದ್ದು ಮಾಡಿದ್ದಾಳೆ. ಶ್ರದ್ಧಾ ಸ್ನೇಹಿತೆ ನಿಕಿತಾ ಮೆನನ್ ಮದುವೆ ಗೋವಾದಲ್ಲಿ ಅದ್ದೂರಿಯಾಗಿ ನಡೆದಿದ್ದು, ಈ ಸಂದರ್ಭದಲ್ಲಿ ಮದುವೆಯಲ್ಲಿ ಪಾಲ್ಗೊಂಡಿದ್ದ ಶ್ರದ್ಧಾ ಅಲ್ಲಿ ಹವಾ ಎಬ್ಬಿಸಿದ್ದಾಳೆ. ಗುಲಾಬಿ ಬಣ್ಣದ ಡ್ರೆಸ್ ಧರಿಸಿ ಗೆಳೆಯರೊಂದಿಗೆ ಡ್ಯಾನ್ಸ್ ಮಾಡಿದ್ದಾಳೆ. ಡೋಲುಗಳ ಮುಂದೆ ಆಕೆಯ ಸ್ಟೆಪ್ಸ್​ ಆಕರ್ಷಕವಾಗಿದ್ದು, ಇದಕ್ಕೆ ಸಂಬಂಧಿಸಿದ ದೃಶ್ಯಗಳು ಈಗ ವೈರಲ್ ಆಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net