

ಮುಂಬೈ: ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಮದುವೆ ಮನೆ, ಜಗ್ಗೇಶ್ ನಟನೆಯ ಡಬಲ್ ಡೆಕ್ಕರ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ಶ್ರದ್ಧಾ ಆರ್ಯ(Shraddha Arya ) ಅವರು ಸಿನಿಮಾದಲ್ಲಿ ಯಶಸ್ಸು ಪಡೆಯದಿದ್ದರೂ ಕೂಡ ಕಿರುತೆರೆಯ ಮೂಲಕ ಬಹಳ ಜನಪ್ರಿಯತೆ ಗಳಿಸಿದ್ದಾರೆ. ಶ್ರದ್ಧಾ ಆರ್ಯ ಅವರ ಮನೆಯಲ್ಲಿ ಡಬಲ್ ಸಂಭ್ರಮಾಚರಣೆ ನಡೆಯುತ್ತಿದೆ. ನಟಿ ಶ್ರದ್ಧಾ ಆರ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಶ್ರದ್ಧಾ ಅವಳಿ ಮಕ್ಕಳ ತಾಯಿಯಾಗಿದ್ದಾರೆ. ಈ ಕುರಿತು ಸ್ವತಃ ನಟಿಯೇ ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಅನ್ನ ಹಂಚಿಕೊಂಡಿದ್ದಾರೆ. ರಾಹುಲ್ ನಾಗಲ್ ಮತ್ತು ನಾನು ಮಗಳು ಮತ್ತು ಮಗನ ಪಾಲಕರಾಗಿದ್ದೇವೆ. ಈಗ ನಮ್ಮ ಕುಟುಂಬ ಸಂಪೂರ್ಣವಾಗಿದೆ ಎಂದು ಬರೆದಿದ್ದಾರೆ. ಪೋಸ್ಟ್ ವೈರಲ್ ಆಗುತ್ತಿದ್ದಂತೆ ಶ್ರದ್ಧಾ ಆರ್ಯ ಹಾಗೂ ರಾಹುಲ್ ನಾಗಲ್ ಮನೆಯಲ್ಲಿನ ಸಂತಸಕ್ಕೆ ಅಭಿಮಾನಿಗಳಿಂದ ಹಿಡಿದು ಸ್ಟಾರ್ ಗಳವರೆಗೆ ಶುಭಾಶಯದ ಮಹಾಪೂರವೇ ಹರಿದುಬಂದಿದೆ.
ವೈರಲ್ ಪೋಸ್ಟ್‌ನಲ್ಲಿ ಶ್ರದ್ಧಾ ಇಬ್ಬರೂ ಮಕ್ಕಳೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ನಟಿ ತನ್ನ ಮಡಿಲಲ್ಲಿ ಎರಡೂ ಶಿಶುಗಳನ್ನು ಹಿಡಿದಿದ್ದಾರೆ, ಬಾಯ್ ಆ್ಯಂಡ್ ಗರ್ಲ್ ಎಂದು ಬಲೂನ್ಗಳನ್ನು ನೋಡಬಹುದು. ಆ ವಿಡಿಯೋ ಮೇಲೆ 29 ನವೆಂಬರ್ 2024 ಎಂದು ಬರೆಯಲಾಗಿದೆ.
ನಟಿ ಶ್ರದ್ಧಾ ಆರ್ಯ ಮತ್ತು ರಾಹುಲ್ ನಾಗಲ್ ನವೆಂಬರ್ 2021ರಲ್ಲಿ ವಿವಾಹವಾದರು. ಇಬ್ಬರೂ ಸೆಪ್ಟೆಂಬರ್‌ನಲ್ಲಿ ನಾವಿಬ್ಬರೂ ಪಾಲಕರಾಗುತ್ತಿದ್ದೇವೆ ಎಂದು ಘೋಷಿಸಿದ್ದಾರೆ. ಇದಕ್ಕೂ ಮುನ್ನವೇ ಶ್ರದ್ಧಾ ಪ್ರೆಗ್ನೆಂಟ್ ಎಂಬ ಕಾರಣಕ್ಕೆ ತಾವು ಅಭಿನಯಿಸುತ್ತಿದ್ದ ಧಾರಾವಾಹಿಗೆ ವಿದಾಯ ಹೇಳಿದರೂ ಎಂಬ ವದಂತಿಗಳು ಜಾಲತಾಣದಲ್ಲಿ ಹರಿದಾಡುತಿತ್ತು. (ಏಜೆನ್ಸೀಸ್)