ಮಹಿಳೆಯರಿಗಿಂತ ಪುರುಷರು ಏಕೆ ಎತ್ತರವಾಗಿರುತ್ತಾರೆ? ಕೊನೆಗೂ ಅಚ್ಚರಿ ಉತ್ತರ ಕಂಡುಕೊಂಡ ವಿಜ್ಞಾನಿಗಳು! SHOX gene

SHOX gene
Published on

SHOX gene : ಪ್ರಪಂಚದಾದ್ಯಂತ ಸಾಮಾನ್ಯವಾಗಿ ಪುರುಷರು ಮಹಿಳೆಯರಿಗಿಂತ ಎತ್ತರವಾಗಿರುತ್ತಾರೆ. ಪುರುಷರಿಗಿಂತ ಮಹಿಳೆಯರು ಎತ್ತರವಾಗಿರುವುದು ತುಂಬಾನೇ ಅಪರೂಪ. ಇದಕ್ಕೆ ಕಾರಣವೇನು ಎಂಬ ಕೂತೂಹಲ ಮೂಡದೇ ಇರದು. ಈ ದೈಹಿಕ ವ್ಯತ್ಯಾಸದ ಹಿಂದಿರುವ ಪ್ರಮುಖ ಆನುವಂಶಿಕ ಕಾರಣವನ್ನು ಇದೀಗ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಪೆನ್ಸಿಲ್ವೇನಿಯಾದ ಗೈಸಿಂಗರ್ ಕಾಲೇಜ್ ಆಫ್ ಹೆಲ್ತ್ ಸೈನ್ಸಸ್‌ನ ತಂಡವು ಮೂರು ದೊಡ್ಡ ಆರೋಗ್ಯ ಡೇಟಾಬೇಸ್‌ಗಳನ್ನು ಅಧ್ಯಯನ ಮಾಡಿದೆ. ಪುರುಷರು ಮತ್ತು ಮಹಿಳೆಯರ ನಡುವಿನ ಎತ್ತರದ ವ್ಯತ್ಯಾಸಕ್ಕೆ SHOX (ಶಾರ್ಟ್-ಸ್ಟಾಮಿನಾ ಹೋಮಿಯೋಬಾಕ್ಸ್) ಜೀನ್ ಮುಖ್ಯ ಕಾರಣ ಎಂಬುದನ್ನು ಕಂಡುಕೊಂಡಿದ್ದಾರೆ. ಈ ಆವಿಷ್ಕಾರವು ಎತ್ತರದ ರಹಸ್ಯವನ್ನು ಪರಿಹರಿಸಿರುವುದಲ್ಲದೆ, ಭವಿಷ್ಯದಲ್ಲಿ ಲಿಂಗ ಆಧಾರಿತ ಕಾಯಿಲೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಲಿದೆ.

ವಾಸ್ತವವಾಗಿ, ಪುರುಷರು ಮತ್ತು ಮಹಿಳೆಯರ ನಡುವಿನ ಸರಾಸರಿ ಎತ್ತರದಲ್ಲಿ ಸುಮಾರು 5 ಇಂಚುಗಳಷ್ಟು ವ್ಯತ್ಯಾಸವಿದೆ ಎಂದು ಸಂಶೋಧನೆ ತೋರಿಸುತ್ತದೆ. ಅಮೆರಿಕ ಮತ್ತು ಬ್ರಿಟನ್‌ನ ವಿಜ್ಞಾನಿಗಳ ತಂಡವು 1 ಮಿಲಿಯನ್‌ಗಿಂತಲೂ ಹೆಚ್ಚು ಜನರ ಡಿಎನ್‌ಎ ಡೇಟಾವನ್ನು ವಿಶ್ಲೇಷಿಸಿ ಇದನ್ನು ಬಹಿರಂಗಪಡಿಸಿದೆ. ವಿಶ್ಲೇಷಣೆಯ ಫಲಿತಾಂಶಗಳನ್ನು ಅಂತಾರಾಷ್ಟ್ರೀಯ ಜರ್ನಲ್ "ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್" ನಲ್ಲಿ ಪ್ರಕಟಿಸಲಾಗಿದೆ.

ಪುರುಷರು XY ಕ್ರೋಮೋಸೋಮ್‌ಗಳನ್ನು ಹೊಂದಿದ್ದರೆ, ಮಹಿಳೆಯರು XX ಕ್ರೋಮೋಸೋಮ್‌ಗಳನ್ನು ಹೊಂದಿರುತ್ತಾರೆ. ಇದರಲ್ಲಿ, Y ಕ್ರೋಮೋಸೋಮ್‌ನಲ್ಲಿರುವ SHOX ಎಂಬ ವಿಶೇಷ ಜೀನ್ ಮೂಳೆ ಬೆಳವಣಿಗೆ ಮತ್ತು ದೇಹದ ಉದ್ದದ ಮೇಲೆ ಪರಿಣಾಮ ಬೀರುತ್ತದೆ. ಪುರುಷರಲ್ಲಿ XY ಕ್ರೋಮೋಸೋಮ್‌ಗಳಿವೆ. ಆದರೆ, ಮಹಿಳೆಯರಿಗೆ XX ಕ್ರೋಮೋಸೋಮ್‌ಗಳು ಮಾತ್ರ ಇರುತ್ತವೆ.

ಅಂದಹಾಗೆ, ಈ SHOX ಜೀನ್ ಮಹಿಳೆಯರಲ್ಲೂ ಇರುತ್ತದೆ, ಆದರೆ ಇದು ಪುರುಷರಲ್ಲಿ ಹೆಚ್ಚು ಸಕ್ರಿಯವಾಗಿರುತ್ತದೆ. ಪುರುಷರಲ್ಲಿ Y ಕ್ರೋಮೋಸೋಮ್ ಇರುವಿಕೆಯು SHOX ಜೀನ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ. ಆದ್ದರಿಂದ, ಪುರುಷರಲ್ಲಿ ಎತ್ತರವು ಹೆಚ್ಚು ಹೆಚ್ಚಾಗುತ್ತದೆ. ಪುರುಷರಲ್ಲಿ ಸುಮಾರು 25 ಪ್ರತಿಶತದಷ್ಟು ಎತ್ತರದ ಹೆಚ್ಚಳಕ್ಕೆ ಈ ಜೀನ್ ಕಾರಣವಾಗಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಅನುವಂಶಿಕ ಅಂಶಗಳ ಜೊತೆಗೆ, ಹಾರ್ಮೋನುಗಳ ಅಂಶಗಳು, ಪ್ರೌಢಾವಸ್ಥೆಯಲ್ಲಿ ದೇಹದ ಬೆಳವಣಿಗೆ ಮತ್ತು ಮೂಳೆ ಸಾಂದ್ರತೆಯು ಕೂಡ ಎತ್ತರದ ಮೇಲೆ ಪರಿಣಾಮ ಬೀರುವ ಅಂಶಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net