ಮಳೆಗಾಲ ಆರಂಭವಾಗಿದೆ ಈ ಐದು ಹಾವುಗಳು ಬಗ್ಗೆ ಎಚ್ಚರವಿರಲಿ... ಇಲ್ಲದಿದ್ರೆ ಪ್ರಾಣ ಹೋಗಬಹುದು! Snakes

Snakes
Published on

Snakes : ಮುಂಗಾರು ಮಳೆ ಆರ್ಭಟದೊಂದಿಗೆ ರಾಜ್ಯದಲ್ಲಿ ಮಳೆಗಾಲ ಆರಂಭವಾಗಿದೆ. ಇನ್ನು ಮೂರ್ನಾಲ್ಕು ತಿಂಗಳ ಕಾಲ ಆಗಾಗ ಮಳೆರಾಯ ಬಂದು ಹೋಗುತ್ತಿರುತ್ತಾನೆ. ಹೀಗಾಗಿ ಎಲ್ಲೆಡೆ ತೇವಯುಕ್ತ ಅಥವಾ ತಂಪಾದ ವಾತಾವರಣ ನಿರ್ಮಾಣವಾಗಲಿದೆ. ಈ ಮಳೆಗಾಲದಲ್ಲಿ ಹಾವುಗಳು ಬೆಚ್ಚಗಿನ ವಾತಾವರಣ ಅಥವಾ ಒಣ ಪ್ರದೇಶವನ್ನು ಹುಡುಕಿಕೊಂಡು ಜನವಸತಿ ಪ್ರದೇಶಗಳತ್ತ ಬರುವುದು ಸಾಮಾನ್ಯ. ಅಲ್ಲದೆ, ಈ ಮಳೆಗಾಲದಲ್ಲಿ ಹಾವುಗಳ ಸಂತಾನೋತ್ಪತಿಯು ಕೂಡ ಹೆಚ್ಚು. ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಟ್ಟುಕೊಟ್ಟಲು ಮಳೆಗಾಲದಲ್ಲಿ ಬೆಚ್ಚನೆಯ ಸ್ಥಳಗಳನ್ನು ಹುಡುಕಿಕೊಂಡು ಬರುತ್ತವೆ. ಇದೀಗ ಮಳೆಗಾಲ ಆರಂಭವಾಗಿರುವುದಿಂದ ಜನರು ತುಂಬಾ ಜಾಗರೂಕರಾಗಿರಬೇಕು ಎಂಬುದು ಉರಗ ತಜ್ಞರ ಎಚ್ಚರಿಕೆಯಾಗಿದೆ.

ಹಾವುಗಳು ಅತ್ಯಂತ ಭಯಭೀತ ಪ್ರಾಣಿಗಳಲ್ಲಿ ಒಂದಾಗಿದೆ. ವಾಹನಗಳ ಒಳಗೆ, ವಿದ್ಯುತ್​ ಮೀಟರ್​ ಬಾಕ್ಸ್​ ಒಳಗೆ ಮತ್ತು ಶೂಗಳ ಒಳಗೆ ಅಡಗಿಕೊಂಡಿರುವ ವಿಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೀರಿ. ಮಳೆಗಾಲದಲ್ಲಿ ತಮ್ಮ ಬಿಲಗಳಿಗೆ ನೀರು ಪ್ರವೇಶಿಸಿದಾಗ ಸುರಕ್ಷಿತ ಆಶ್ರಯವನ್ನು ಹುಡುಕುತ್ತಾ ಹಾವುಗಳು ಹೊರಬರುತ್ತವೆ. ಆದ್ದರಿಂದ, ಮಳೆಗಾಲದಲ್ಲಿ ಹಾವುಗಳನ್ನು ಹೆಚ್ಚಾಗಿ ಕಾಣಬಹುದು.

ಮನೆಯೊಳಗೆ ಬೆಚ್ಚಗಿನ ಸ್ಥಳಗಳನ್ನು ಹುಡುಕುವ ಮೂಲಕ ಅವು ಹೊರಗಿನ ಚಳಿಯಿಂದ ಆಶ್ರಯ ಪಡೆಯುತ್ತವೆ. ಎಲೆಗಳು ರಾಶಿಯಾಗಿರುವ ಸ್ಥಳಗಳು ಮತ್ತು ಮರದ ತುಂಡುಗಳು, ಹುಲ್ಲು, ಕೊಂಬೆಗಳು ಮತ್ತು ಕಲ್ಲುಗಳನ್ನು ರಾಶಿ ಹಾಕಿರುವ ಸ್ಥಳಗಳು ಹಾವುಗಳ ನೆಚ್ಚಿನ ತಾಣಗಳಾಗಿವೆ. ಈ ಸ್ಥಳಗಳಲ್ಲಿ ಮಲಗಿರುವ ಹಾವು ಹೆಚ್ಚಿನ ಜನರ ಗಮನಕ್ಕೆ ಬಾರದಿರುವುದು ಅಪಾಯವನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಕೋಳಿ ಗೂಡುಗಳು ಅಥವಾ ಸಾಕು ಪ್ರಾಣಿಗಳಿರುವ ಸ್ಥಳಗಳಲ್ಲಿಯೂ ಹೆಚ್ಚುವರಿ ಕಾಳಜಿ ವಹಿಸಬೇಕು. ಇನ್ನು ಮಳೆಗಾಲದಲ್ಲಿ ಈ ಐದು ವಿಧದ ವಿಷಕಾರಿ ಹಾವುಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಹೀಗಾಗಿ ಇವುಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು.

ಮೊದಲನೆಯದು ನಾಗರಹಾವು. ಕೇರಳದಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಷಕಾರಿ ಹಾವು ನಾಗರಹಾವು. ದೇಹದ ಹಿಂಭಾಗದಲ್ಲಿರುವ 'R' ಗುರುತು ನಾಗರಹಾವನ್ನು ಗುರುತಿಸುವ ಪ್ರಮುಖ ಮಾರ್ಗವಾಗಿದೆ. ನಾಗರಹಾವು ತಿಳಿ ಕಂದು ಮತ್ತು ಕಪ್ಪು ಬಣ್ಣಗಳಲ್ಲಿ ಕಂಡುಬರುತ್ತದೆ. ಅವುಗಳನ್ನು ಹಗಲು ಮತ್ತು ರಾತ್ರಿಯಲ್ಲಿ ಕಾಣಬಹುದು. ನಾಗರಹಾವಿನ ಕಡಿತವು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ತೀವ್ರ ಎಚ್ಚರಿಕೆ ವಹಿಸಬೇಕು.

ಎರಡನೆಯದು ವೈಪರ್. ವೈಪರ್ ತುಂಬಾ ಅಪಾಯಕಾರಿ ವಿಷಪೂರಿತ ಹಾವು. ಇದರ ದೇಹದ ಮೇಲೆ ಕಂದು, ದುಂಡಗಿನ ಅಥವಾ ಅಂಡಾಕಾರದ ಚುಕ್ಕೆಗಳನ್ನು ಹೊಂದಿರುತ್ತವೆ. ವೈಪರ್‌ಗಳು ಸಾಮಾನ್ಯವಾಗಿ ದಪ್ಪ ದೇಹವನ್ನು ಹೊಂದಿರುತ್ತವೆ ಮತ್ತು ತ್ರಿಕೋನ ತಲೆಯನ್ನು ಹೊಂದಿರುತ್ತವೆ.

ಮೂರನೆಯದು ಶಂಖ ಮಂಡಲ. ಇದನ್ನು ಬೆಳ್ಳಿ ಮಂಡಲ ಎಂದೂ ಕರೆಯುತ್ತಾರೆ. ಇದು ಮುಖ್ಯವಾಗಿ ರಾತ್ರಿಯಲ್ಲಿ ಕಂಡುಬರುತ್ತದೆ. ಇದರ ದೇಹವು ತೆಳುವಾದ ಬಿಳಿ ಪಟ್ಟೆಗಳೊಂದಿಗೆ ಹೊಳೆಯುವ ಕಪ್ಪು ಬಣ್ಣದ್ದಾಗಿದೆ. ಇದರ ಕಡಿತವು ನೋವುರಹಿತವಾಗಿರುವುದರಿಂದ, ಜನರಿಗೆ ಕಚ್ಚಿದ ಅನುಭವವಾಗುವುದಿಲ್ಲ. ಶಂಖ ಮಂಡಲ ಮಂಡಲದ ವಿಷವು ನೇರವಾಗಿ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ.

ನಾಲ್ಕನೆಯದು ಗೂನು ಮೂಗಿನ ಪಿಟ್ ವೈಪರ್. ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಅವು ಮಾರಕ ವಿಷವನ್ನು ಹೊಂದಿರುತ್ತವೆ. ಇವು ಕಂದು ಮತ್ತು ಹಳದಿ ಮಿಶ್ರಿತ ಕಂದು ಬಣ್ಣಗಳಲ್ಲಿ ಕಂಡುಬರುತ್ತವೆ. ಇವುಗಳ ದೇಹದ ಮೇಲೆ ಸ್ಪಷ್ಟವಾದ ಬಿಳಿ ಅಥವಾ ಗಾಢವಾದ ಬಾಗಿದ ರೇಖೆಗಳು ಅಥವಾ ಚುಕ್ಕೆಗಳಿವೆ.

ಐದನೇಯದು ಕಟ್ಟು ಹಾವು. ಕಟ್ಟು ಹಾವು ಅಥವಾ ಕ್ರೈಟ್ ತುಂಬಾ ಡೇಂಜರಸ್​ ಹಾವು. ಇದು ಕಡಿಯುವುದು ಗೊತ್ತಾಗುವುದೇ ಇಲ್ಲ. ಇದನ್ನು ಸೈಲೆಂಟ್​ ಕಿಲ್ಲರ್​​ ಅಂತಾನೇ ಕರಿಯುತ್ತಾರೆ.​ ಈ ಹಾವು ಪ್ರತಿ ಕಡಿತಕ್ಕೆ 5 ರಿಂದ 10 ಮಿಲಿಗ್ರಾಂ ವಿಷವನ್ನು ಬಿಡುಗಡೆ ಮಾಡುತ್ತೆ. ಈ ವಿಷವು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದು ತುಂಬಾ ಅಪಾಯಕಾರಿ. ಹೀಗಾಗಿ ಮಳೆಗಾಲದಲ್ಲಿ ಬೆಚ್ಚನೆಯ ಪ್ರದೇಶವನ್ನು ಸೇರುವ ಈ ಹಾವಿನ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net