ಹಳೆ ಲವ್ ಸ್ಟೋರಿಯನ್ನು ಸಂಗಾತಿಗೆ ಹೇಳ್ಬೇಕಾ ಬೇಡ್ವಾ? ಈ ಡೌಟ್ ನಿಮ್ಗೂ ಇದ್ರೆ, ಈ ಸಿಂಪಲ್ ಸಲಹೆ ಮಿಸ್ ಮಾಡ್ಬೇಡಿ! | Past Relationship

Should you tell your partner about a past love story?
ಸಂಗಾತಿಗೆ ಹಳೆಯ ಪ್ರೇಮ ಜೀವನದ ಕಥೆ ಹೇಳಬೇಕಾ?
Published on: 
Summary

ಹಳೆಯ ಸಂಬಂಧದ ಬಗ್ಗೆ ಎಲ್ಲವನ್ನೂ ಬಿಚ್ಚಿಟ್ಟರೆ ಹೊಸ ಬಂಧನ ಗಟ್ಟಿಯಾಗಿ ಉಳಿಯುತ್ತಾ?

ಪಾಸ್ಟ್ ರಿಲೇಶನ್‌ಶಿಪ್ ಬಗ್ಗೆ ಅತಿಯಾದ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವುದು ಒಳ್ಳೆಯದೇ?

ಸರಿಯಾದ ಸಂದರ್ಭ ನೋಡಿ ಮುಕ್ತವಾಗಿ ಮಾತನಾಡಿದರೆ ಮಾತ್ರ ಸಂಬಂಧ ಉಳಿಯಲು ಸಾಧ್ಯವಿಲ್ಲವೇ?

ಸಂಗಾತಿಯ ಗತಕಾಲವನ್ನೂ ಗೌರವಿಸುವ ದೊಡ್ಡ ಮನೋಭಾವ ನಮ್ಮಲ್ಲಿ ಇರಲೇಬೇಕಲ್ವಾ?

Past Love: ಮದುವೆಯಾಗೋ ಸಂಗಾತಿಗೆ ಅಥವಾ ಪ್ರೀತಿಸ್ತಿರೋರಿಗೆ ನಮ್ಮ ಹಳೆಯ ಪ್ರೇಮ ಜೀವನ ಅಂದ್ರೆ ಪಾಸ್ಟ್ ರಿಲೇಶನ್‌ಶಿಪ್ ಬಗ್ಗೆ ಹೇಳಬೇಕೋ ಬೇಡ್ವೋ ಅನ್ನೋ ಟೆನ್ಷನ್ ಎಲ್ಲರಿಗೂ ಇದ್ದೇ ಇರುತ್ತೆ. ಹೇಳಿದ್ರೆ ಎಲ್ಲಿ ಕೈಬಿಟ್ಟು ಹೋಗ್ತಾರೋ? ಹೇಳ್ದೆ ಇದ್ರೆ ಮೋಸ ಮಾಡಿದಂಗೆ ಆಗ್ತದಾ ಅಂತ ಮನಸ್ಸಲ್ಲಿ ನಾವೇ ನೂರು ಸಲ ಯೋಚನೆ ಮಾಡ್ತಿರ್ತೀವಿ.

ಆದ್ರೆ, ಈ ಬಗ್ಗೆ ಒಂದು ನಿರ್ಧಾರಕ್ಕೆ ಬರಬೇಕು ಅಂದ್ರೆ ಕೆಲವು ಮುಖ್ಯವಾದ ವಿಷ್ಯಗಳನ್ನು ತಿಳಿದುಕೊಳ್ಳೋದು ಉತ್ತಮ. ಸರಿಯಾದ ಸಮಯ ನೋಡ್ಕೊಂಡು, ಯಾವುದೇ ಮುಚ್ಚುಮರೆ ಇಲ್ಲದೆ ಮುಕ್ತವಾಗಿ ಮಾತಾಡೋದು ಒಳ್ಳೆದು.

1. ಯಾವಾಗ ವಿಷಯ ತಿಳಿಸೋದು ಒಳ್ಳೇದು?

ಪ್ರಾಮಾಣಿಕತೆ ಮತ್ತು ನಂಬಿಕೆ: ಯಾವುದೇ ಗಟ್ಟಿ ಸಂಬಂಧಕ್ಕೆ ನಂಬಿಕೆನೇ ತಳಹದಿ. ಮುಂದೆಂದಾದ್ರೂ ಮೂರನೇ ವ್ಯಕ್ತಿಗಳಿಂದ ಈ ವಿಷಯ ಅವರಿಗೆ ಗೊತ್ತಾದ್ರೆ, ನಿಮ್ಮ ಮೇಲಿದ್ದ ನಂಬಿಕೆ ಮುರಿದುಹೋಗಬಹುದು. ಅದೇ ನೀವೇ ಮುಂಚಿತವಾಗಿ ಹೇಳಿದ್ರೆ ನಿಮ್ಮ ಮೇಲಿನ ಗೌರವ ಇನ್ನೂ ಜಾಸ್ತಿ ಆಗುತ್ತೆ.

ಮುಂದಿನ ದಿನಗಳ ಸುರಕ್ಷತೆ: ಹಳೆಯ ಸಂಬಂಧದಿಂದ ನಿಮ್ಮ ಈಗಿನ ಜೀವನಕ್ಕೆ ಏನಾದ್ರೂ ತೊಂದರೆ ಆಗುವ ಚಾನ್ಸ್ ಇದ್ರೆ, ಅಂದ್ರೆ ಹಳೆಯ ಸಂಗಾತಿ ಇನ್ನು ನಿಮ್ಮ ಲೈಫ್‌ನಲ್ಲಿ ತಲೆ ಹಾಕುತ್ತಿದ್ದಾರೆ ಎನ್ನುವುದಾದರೆ, ಅದನ್ನ ಮೊದಲೇ ಹೇಳೋದು ತುಂಬಾನೇ ಮುಖ್ಯ.

ಮನಸ್ಸಿಗೆ ನೆಮ್ಮದಿ: ಮನಸ್ಸಲ್ಲಿ ಯಾವುದೇ ತರಹದ ಅಪರಾಧ ಪ್ರಜ್ಞೆ ಇಲ್ಲದೆ, ಮುಕ್ತವಾಗಿ ಹೊಸ ಜೀವನನ ಶುರು ಮಾಡಲು ಇದು ಸಹಾಯ ಮಾಡುತ್ತೆ.

Relationship Advice
ಸರಿಯಾದ ಸಂದರ್ಭ ನೋಡಿ ಮುಕ್ತವಾಗಿ ಮಾತನಾಡುವುದು ಒಳಿತು

2. ಯಾವಾಗ ವಿಷಯ ಹೇಳಬಾರದು?

ಅತಿಯಾದ ವಿವರಣೆ ಕೊಡೋಕೆ ಹೋಗ್ಬೇಡಿ: ಹಿಂದೆ ಲವ್ ಮಾಡ್ತಿದ್ವಿ ಅಂತ ಹೇಳೋದು ಬೇರೆ, ಆದ್ರೆ ಆ ರಿಲೇಶನ್‌ಶಿಪ್‌ನಲ್ಲಿ ನಡೆದ ಪ್ರತಿಯೊಂದು ಸಣ್ಣಪುಟ್ಟ ವಿಷಯ, ಅತಿಯಾದ ಆಪ್ತತೆ ಅಥವಾ ಪರ್ಸನಲ್ ವಿಚಾರಗಳನ್ನು ಹೇಳೋದು ವ್ಯರ್ಥ. ಇದು ಈಗಿನ ಸಂಗಾತಿಗೆ ಇಲ್ಲದ ಅಸೂಯೆ ಅಥವಾ ಹೋಲಿಕೆ ಮಾಡೋಕೆ ದಾರಿ ಮಾಡಿಕೊಡುತ್ತೆ.

ಸಂಗಾತಿಯ ಗುಣ ನೋಡಿಕೊಳ್ಳಿ: ನಿಮ್ಮ ಸಂಗಾತಿ ಹಳೆಯ ವಿಷಯಗಳನ್ನು ಸ್ವೀಕರಿಸುವಷ್ಟು ವಿಶಾಲ ಮನಸ್ಸಿನವರಾ ಅಂತ ತಿಳಿದುಕೊಳ್ಳಿ. ಕೆಲವರು ಹಳೆಯ ಕಥೆ ಕೇಳಿ, ಪ್ರತಿ ಸಲ ಜಗಳವಾದಾಗಲೂ ಅದನ್ನೇ ತೆಗೆದು ಮಾತಾಡುತ್ತಾರೆ. ಅಂಥ ಸಮಯದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಜಾಣತನ.

Respect your partner's past as well.
ಸಂಗಾತಿಯ ಗತಕಾಲವನ್ನೂ ಗೌರವಿಸುವ ಮನೋಭಾವವಿರಬೇಕು

3. ಹೇಳುವಾಗ ಏನೆಲ್ಲಾ ನೆನಪಿನಲ್ಲಿಡಬೇಕು?

ಅದೆಲ್ಲಾ ಮುಗಿದೋದ ಅಧ್ಯಾಯ: ಹಳೆಯ ಕಥೆ ಹೇಳುವಾಗ, ಆ ವ್ಯಕ್ತಿ ಮೇಲೆ ಈಗ ತಮಗೆ ಯಾವುದೇ ಫೀಲಿಂಗ್ಸ್ ಇಲ್ಲ, ನಮ್ಮ ಪೂರ್ತಿ ಗಮನ ಈಗಿನ ಸಂಗಾತಿ ಮೇಲಷ್ಟೇ ಇದೆ ಅಂತ ಅವರಿಗೆ ಅರ್ಥ ಮಾಡಿಸಬೇಕು.

ಸರಿಯಾದ ಟೈಮ್ ನೋಡಿ ಮಾತಾಡಿ: ಸುಮ್ಮನೆ ಕ್ಯಾಶುವಲ್ ಆಗಿ ಎಲ್ಲೆಂದರಲ್ಲಿ ಅಥವಾ ಮೂಡ್ ಸರಿ ಇಲ್ಲದ ಸಮಯದಲ್ಲಿ ಈ ವಿಷಯ ತೆಗೆಯಬೇಡಿ. ಇಬ್ಬರೂ ಸಂಯಮವಾಗಿ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಇದ್ದಾಗ ಮಾತ್ರ ಮಾತಾಡಿ.

ಹಳೆಯ ಬದುಕಿಗೂ ಇರಲಿ ಗೌರವ: ನೀವು ನಿಮ್ಮ ವಿಷಯ ಹೇಳಿದಾಗ, ಅವರೂ ತಮ್ಮ ಗತಕಾಲದ ಬಗ್ಗೆ ಏನಾದ್ರೂ ಹೇಳಿದರೆ, ಅದನ್ನು ಜಡ್ಜ್ ಮಾಡುತ್ತಾ ಕೂರಬೇಡಿ, ಬದಲಾಗಿ ಅರ್ಥ ಮಾಡ್ಕೊಳ್ಳಿ.

ಇದನ್ನೂ ಓದಿ: ‘ನನಗೆ ನಿನ್ನ ಗಿಫ್ಟ್ ಬೇಡ’ ಅಂದಿದ್ದಕ್ಕೆ ಕಪಾಳಕ್ಕೆ ಬಾರಿಸಿದ ಆಸಾಮಿ: ರಸ್ತೆಯಲ್ಲೇ ವಿದ್ಯಾರ್ಥಿನಿಗೆ ಕಿರುಕುಳ | Man Slaps Student

ಪ್ರತಿಯೊಂದು ಹಳೆಯ ಕಥೆನೂ ಸಂಗಾತಿಗೆ ಹೇಳಲೇಬೇಕು ಅಂತೇನಿಲ್ಲ. ಹಾಗಂತ ಸಂಗಾತಿಯ ನಂಬಿಕೆಗೆ ದ್ರೋಹ ಬರೋತರ ಸತ್ಯ ಮುಚ್ಚಿಡೋದೂ ತಪ್ಪೇ. ಪ್ರೀತಿ ಅಂದ್ರೆ ಕೇವಲ ಈಗಿರುವುದನ್ನು ಒಪ್ಪಿಕೊಳ್ಳೋದಲ್ಲ, ಒಬ್ಬರ ಗತಕಾಲನೂ ಗೌರವಿಸುವ ದೊಡ್ಡ ಮನಸ್ಸು ಇರಬೇಕು.