ಡೆಲ್ಟಾ ಬಳಿಕ ಲಾಂಬ್ಡಾ ಆತಂಕ: ವಿವಿಧ ದೇಶಗಳಲ್ಲಿ ಕರೊನಾ ವೈರಸ್​ ಹೊಸ ರೂಪಾಂತರಿ ಪತ್ತೆ

Lambda
Published on

ನವದೆಹಲಿ: ಜಗತ್ತಿನಾದ್ಯಂತ ಜನಜೀವನವನ್ನು ಕಂಗೆಡಿಸಿರುವ ಕರೊನಾ ವೈರಸ್​ ರೂಪಾಂತರ ಹೊಂದುತ್ತಲೇ ಇದ್ದು, ಡೆಲ್ಟಾ ಪ್ರಭೇದದ ನಂತರ ಇದೀಗ "ಲಾಂಬ್ಡಾ' ಎಂಬ ರೂಪಾಂತರಿ ವಿಜ್ಞಾನಿಗಳನ್ನು ಕಾಡುತ್ತಿದೆ. 2020ರ ಡಿಸೆಂಬರ್​ನಲ್ಲಿ ಪೆರು ದೇಶದಲ್ಲಿ ಲಾಂಬ್ಡಾ ಮೊದಲ ಬಾರಿಗೆ ಪತ್ತೆಯಾಗಿದ್ದರೂ ಈಗ ಹಲವು ದೇಶಗಳಲ್ಲಿ ಹರಡಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಜೂನ್​ 14ರಂದು ಇದನ್ನು "ಆಸಕ್ತಿಕರ ಪ್ರಭೇದ' ಎಂದು ಗುರುತಿಸಿದೆ. ಆದರೆ, ಲಾಂಬ್ಡಾ ರೂಪಾಂತರಿ ವೈರಸ್​ ಇದುವರೆಗೆ ಭಾರತದಲ್ಲಿ ಪತ್ತೆಯಾಗಿಲ್ಲ ಎಂಬುದು ಸದ್ಯಕ್ಕೆ ಸಮಾಧಾನದ ಸಂಗತಿಯಾಗಿದೆ.

ಈ ಹಿಂದೆ ಸಿ.37 ಎಂದು ಗುರುತಿಸಲಾಗಿದ್ದ ಲಾಂಬ್ಡಾ ಪ್ರಭೇದ ಕಳೆದ ವರ್ಷ ಡಿಸೆಂಬರ್​ನಲ್ಲೇ ಪತ್ತೆಯಾಗಿತ್ತು ಎಂದು ಡಬ್ಲ್ಯುಎಚ್​ಒ ತಿಳಿಸಿದೆ. ನಾನಾ ದೇಶಗಳಲ್ಲಿ ಲಾಂಬ್ಡಾ ಸೋಂಕು ಏರಿಕೆಯಾಗುತ್ತಿರುವುದರಿಂದ ಕಳವಳ ಉಂಟಾಗಿದೆ. ಡೆಲ್ಟಾ ಪ್ರಭೇದದಂತೆ ಇದು ಕೂಡ ತುಂಬಾ ವೇಗವಾಗಿ ಹರಡುವ ಸಾಧ್ಯತೆಯಿದೆ ಎಂಬುದರ ಸೂಚನೆ ಇದಾಗಿದೆ.

ಬ್ರಿಟನ್​ನಲ್ಲಿ ಜೂನ್​ 22ರಂದು ಲಾಂಬ್ಡಾ ಸೋಂಕಿನ ಆರು ಪ್ರಕರಣಗಳು ಪತ್ತೆಯಾಗಿದ್ದು, ಪಬ್ಲಿಕ್​ ಹೆಲ್ತ್​ ಇಂಗ್ಲೆಂಡ್​ ಅದನ್ನು "ತನಿಖೆ ಪ್ರಕ್ರಿಯೆಯಲ್ಲಿರುವ ಪ್ರಭೇದ' ಎಂದು ವರ್ಗೀಕರಿಸಿದೆ. ಲಾಂಬ್ಡಾ ಪ್ರಭೇದ ಭಾರತದಲ್ಲಿ ಕಂಡು ಬಂದಿಲ್ಲ ಎಂದು ರಾಷ್ಟ್ರೀಯ ವೈರಾಣು ಸಂಸ್ಥೆಯ (ಎನ್​ಐವಿ) ಮ್ಯಾಕ್ಸಿಮಮ್​ ಕಂಟೇನ್​ಮೆಂಟ್​ ೆಸಿಲಿಟಿಯ ಮುಖ್ಯಸ್ಥೆ ಡಾ. ಪ್ರಜ್ಞಾ ಯಾದವ್​ ಬುಧವಾರ ತಿಳಿಸಿದ್ದಾರೆ. ವಿಜ್ಞಾನಿಗಳ ಜಾಗತಿಕ ಜಾಲವಾದ ಜಿಐಎಸ್​ಎಐಡಿ ಪ್ರಕಾರ, ಹೊಸದಾದ ಲಾಂಬ್ಡಾ ಪ್ರಭೇದ ಈ ವರೆಗೆ ಕನಿಷ್ಠ 31 ದೇಶಗಳಲ್ಲಿ ಪತ್ತೆಯಾಗಿದೆ. ಅಮೆರಿಕ, ಬ್ರಿಟನ್​, ್ರಾನ್ಸ್​, ಇಟಲಿ, ಜರ್ಮನಿ ಮತ್ತು ಸ್ವಿಜರ್​ಲ್ಯಾಂಡ್​ ಆ ಪೈಕಿ ಕೆಲವು ಪ್ರಮುಖ ರಾಷ್ಟ್ರಗಳಾಗಿವೆ.

30&40 ಲಕ್ಷ ಡೋಸ್​ ೈಜರ್​, ಮಾಡರ್ನಾ ಲಸಿಕೆ: ಕೊವ್ಯಾಕ್ಸ್​ ಜಾಲದ ಮೂಲಕ ಭಾರತಕ್ಕೆ ಆಗಸ್ಟ್​ ವೇಳೆಗೆ 30ರಿಂದ 40 ಲಕ್ಷ ಡೋಸ್​ ೈಜರ್​ ಮತ್ತು ಮಾಡರ್ನಾ ಲಸಿಕೆ ಲಭ್ಯವಾಗುವ ನಿರೀೆಯಿದೆ. ವ್ಯಾಕ್ಸಿನ್​ ಕೂಟವಾದ ಜಿಎವಿಐ ಮತ್ತು ಡಬ್ಲ್ಯುಎಚ್​ಒ ನೇತೃತ್ವದ ಕೊವ್ಯಾಕ್ಸ್​, ಭಾರತಕ್ಕೆ ಅಮೆರಿಕ ನಿರ್ಮಿತ ಲಸಿಕೆಗಳನ್ನು ರವಾನಿಸಲಿದೆ. ಇದು ಉಚಿತ ಕೊಡುಗೆಯಾಗಲಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.

ಡೆಲ್ಟಾ ವಿರುದ್ಧ ಲಸಿಕೆ ಪರಿಣಾಮಕಾರಿ

ಕೋವಿಡ್​&19 ಲಸಿಕೆಗಳು ವೈರಸ್​ನ ಡೆಲ್ಟಾ ಪ್ರಭೇದದ ವಿರುದ್ಧ ಪರಿಣಾಮಕಾರಿಯಾಗಿವೆ. ಲಸಿಕೆ ಪಡೆದವರು ಆಸ್ಪತ್ರೆ ಸೇರುವ ಅವಶ್ಯಕತೆ ಹೆಚ್ಚಾಗಿ ಬರುವುದಿಲ್ಲ ಎಂದು ವಿವಿಧ ದೇಶಗಳಲ್ಲಿನ ಅಧ್ಯಯನಗಳು ತೋರಿಸಿವೆ. ಬಹುತೇಕ ಅಧ್ಯಯನಗಳು ಇದೇ ಅಭಿಪ್ರಾಯ ವ್ಯಕ್ತಪಡಿಸಿವೆ. ಸುಮಾರು ನೂರು ದೇಶಗಳಲ್ಲಿ ಡೆಲ್ಟಾ ರೂಪಾಂತರಿ ವೈರಸ್​ ಹಾವಳಿ ನಡೆಸಿದ್ದು ಅದರ ವಿರುದ್ಧ ಲಸಿಕೆಗಳು ಹೇಗೆ ಪರಿಣಾಮ ಬೀರುತ್ತವೆ ಎಂಬ ಬಗ್ಗೆ ಅಧ್ಯಯನ ನಡೆಸಲಾಗಿದೆ. ಪರಿಣಾಮದ ಪ್ರಮಾಣದಲ್ಲಿ ಸ್ವಲ್ಪ ವ್ಯತ್ಯಾಸ ಇರುವುದು ಬಿಟ್ಟರೆ ಒಟ್ಟಾರೆಯಾಗಿ ಪರಿಣಾಮ ಬೀರುತ್ತದೆಂದು ಅವು ಹೇಳಿವೆ. ೈಜರ್​&ಬಯೋ ಎನ್​ಟೆಕ್​ ಲಸಿಕೆಯ ಎರಡು ಡೋಸ್​, ಡೆಲ್ಟಾದಿಂದ ಬರುವ ಲಕ್ಷಣ ಸಹಿತ ಸೋಂಕಿನ ವಿರುದ್ಧ ಶೇಕಡ 88ರಷ್ಟು ರಕ್ಷಣೆ ನೀಡುತ್ತದೆ ಎಂದು ಬ್ರಿಟನ್​ನ ಸಂಶೋಧಕರು ಮೇ ತಿಂಗಳಲ್ಲಿ ತಿಳಿಸಿದ್ದರು. ಶೇ. 79 ಪರಿಣಾಮಕಾರಿ ಎಂದು ಸ್ಕಾಟ್​ಲ್ಯಾಂಡ್​ ತಜ್ಞರು ಹೇಳಿದ್ದರು. ಲಸಿಕೆಗಳ ಪರಿಣಾಮ ಶೇಕಡ 87 ಎಂದು ಕೆನಡಾ ಸಂಶೋಧಕರ ತಂಡ ಶನಿವಾರವಷ್ಟೇ ಹೇಳಿದೆ. ಪರಿಣಾಮದ ಪ್ರಮಾಣ ಶೇ. 64 ಎಂದು ಸೋಮವಾರ ಇಸ್ರೇಲ್​ ಆರೊಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ವರ್​ ಯಾತ್ರೆಗೆ ಅನುಮತಿ

ಜುಲೈ 25ರಂದು ಉತ್ತರ ಪ್ರದೇಶದಲ್ಲಿ ಆರಂಭವಾಗಲಿರುವ "ಕನ್ವರ್​ ಯಾತ್ರೆ'ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಸಿರು ನಿಶಾನೆ ತೋರಿಸಿದ್ದಾರೆ. ನೆರೆಯ ಬಿಹಾರ ಮತ್ತು ಉತ್ತರಾಖಂಡದಿಂದ ಕೂಡ ಯಾತ್ರಿಗಳು ಬರಲಿರುವುದರಿಂದ ಕರೊನಾ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಸಾಂಕ್ರಾಮಿಕತೆಯ ಕಾರಣದಿಂದ ಕಳೆದ ವರ್ಷ ಯಾತ್ರೆಯನ್ನು ರದ್ದುಗೊಳಿಸಲಾಗಿತ್ತು. ಉತ್ತರಾಖಂಡ ಸರ್ಕಾರ ಈಗಾಗಲೇ ಕನ್ವರ್​ ಯಾತ್ರೆಯನ್ನು ರದ್ದುಪಡಿಸಿ ಹರಿದ್ವಾರದ ಗಡಿಗಳಲ್ಲಿ 144ನೇ ಸೆಕ್ಷನ್​ ಜಾರಿ ಮಾಡಿದೆ. ಯಾತ್ರೆ ವೇಳೆ ಅನುಸರಿಸಬೇಕಾದ ವಿಸ್ತ್ರತ ಮಾರ್ಗಸೂಚಿ ರೂಪಿಸಲು ಉತ್ತರ ಪ್ರದೇಶ ಗೃಹ ಇಲಾಖೆಗೆ ಸೂಚಿಸಲಾಗಿದೆ.

ಜೈ ಶಂಕರ್​ ವಿಶ್ವಾಸ

ಕರೊನಾ ವೈರಸ್​ ಸೋಂಕಿನ ಎರಡನೇ ಅಲೆಯಿಂದ ಭಾರತ ಸುಧಾರಿಸಿಕೊಳ್ಳುತ್ತಿದೆ. ಆರ್ಥಿಕ ಕ್ಷೇತ್ರದಲ್ಲಿ ಚೇತರಿಸಿಕೊಂಡು ಜಾಗತಿಕ ಆರ್ಥಿಕತೆ ಬೆಳವಣಿಗೆಗೆ ದೇಶ ಇಂಬು ನೀಡಲಿದೆ ಎಂದು ವಿದೇಶಾಂಗ ಸಚಿವ ಎಸ್​. ಜೈ ಶಂಕರ್​ ಹೇಳಿದ್ದಾರೆ. ಇಂಡೊ&ಪೆಸಿಫಿಕ್​ ಬಿಸಿನೆಸ್​ ಶೃಂಗ ಸಭೆಯಲ್ಲಿ ಆನ್​ಲೈನ್​ ಭಾಷಣ ಮಾಡಿದ ಅವರು, ಭಾರತವು ಹೆಚ್ಚು ಕ್ರಿಯಾಶೀಲ ಹಾಗೂ ವ್ಯವಹಾರ ಸ್ನೇಹಿ ದೇಶವಾಗಲಿದೆ. ಕೋವಿಡೋತ್ತರ ಜಗತ್ತಿನ ಅವಶ್ಯಕತೆಗಳನ್ನು ಪೂರೈಸುವಲ್ಲಿ ವಿಶ್ವಾಸಾರ್ಹ ಕೊಂಡಿಯಾಗಲಿದೆ ಎಂದಿದ್ದರು.

43000 ಹೊಸ ಪ್ರಕರಣ

ಬುಧವಾರ ದೇಶದಲ್ಲಿ ಕರೊನಾ ಸೋಂಕಿನ 43,733 ಹೊಸ ಪ್ರಕರಣ ಗಳು ದೃಢಪಟ್ಟಿವೆ. 930 ಜನರು ಮೃತಪಟ್ಟಿದ್ದಾರೆ. ಇದರೊಂದಿಗೆ ಸೋಂಕಿತರ ಒಟ್ಟು ಸಂಖ್ಯೆ 3,06,63,665ಕ್ಕೆ ಏರಿದೆ. ಒಟ್ಟು 4,04,211 ಜನರು ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಇದುವರೆಗೆ 2,97,99,534 ಜನರು ಬೇನೆಯಿಂದ ಚೇತರಿಸಿಕೊಂಡಿದ್ದಾರೆ. ಈ ವರೆಗೆ ದೇಶದಾದ್ಯಂತ 36,13,23,548 ಜನರಿಗೆ ಲಸಿಕೆ ಹಾಕಲಾಗಿದೆ.

ಲಸಿಕೆ ಪಡೆಯದವರಲ್ಲಿ ಬ್ಲಾ$್ಯಕ್​ ಂಗಸ್​ ಅಧಿಕ

ಕೋವಿಡ್​ ಲಸಿಕೆಗೂ ಮ್ಯುಕೊರ್​ಮೈಕೊಸಿಸ್​ಗೂ (ಬ್ಲಾ$್ಯಕ್​ ಂಗಸ್​) ಪರಸ್ಪರ ಸಂಬಂಧವಿದೆ ಎನ್ನುವುದನ್ನು ಹೈದರಾಬಾದ್​ನ ಸರ್ಕಾರಿ ಇಎನ್​ಟಿ ಆಸ್ಪತ್ರೆ ಸಿದ್ಧಪಡಿಸಿರುವ ಆಂತರಿಕ ವರದಿಯೊಂದು ಸ್ಪಷ್ಟಪಡಿಸಿದೆ. ಲಸಿಕೆ ಹಾಕಿಸಿಕೊಳ್ಳದ ಶೇಕಡ 86 ಜನರಲ್ಲಿ ಕೋವಿಡೋತ್ತರ ಮ್ಯುಕೊರ್​ಮೈಕೊಸಿಸ್​ ಸೋಂಕು ಕಂಡು ಬಂದಿದೆ ಎಂಬುದು ವರದಿಯ ಸಾರಾಂಶವಾಗಿದೆ. ಕೇವಲ 6% ಜನರು ಒಂದು ಡೋಸ್​ ಪಡೆದಿದ್ದರು. ಎರಡೂ ಡೋಸ್​ ಲಸಿಕೆ ಪಡೆದಿದ್ದ 8% ರೋಗಿಗಳುಲ್ಲಿ ಮ್ಯುಕೊರ್​ಮೈಕೊಸಿಸ್​ ಸೋಂಕು ಕಾಡಿದೆ. ಕಪು$್ಪ ಶಿಲೀಂಧ್ರ ಸೋಂಕು ತಗಲಿದ್ದ 300 ರೋಗಿಗಳ ಸಮಗ್ರ ವಿಶ್ಲೇಷಣೆ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ ಎಂದು ಆಸ್ಪತ್ರೆಯ ಅಧೀಕ್ಷಕ ಡಾ. ಟಿ. ಶಂಕರ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net