

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಕೆಲವೇ ದಿನಗಳಲ್ಲಿ ನಗದು ಹಣದ ಬದಲು ತಲಾ 10 ಕೆ.ಜಿ. ವಿತರಣೆಯಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಅವರು, ಅರ್ಹ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ವಿತರಿಸಲು ಮಾಡಿಕೊಂಡ ಸಿದ್ಧತೆಗಳ ಬಗ್ಗೆ ಚರ್ಚಿಸಿದರು.
ಈಗಾಗಲೇ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಛತ್ತೀಸ್‌ಘಡ ರಾಜ್ಯಗಳೊಂದಿಗೆ ಅಕ್ಕಿ ಖರೀದಿ ಸಂಬಂಧ ಚರ್ಚಿಸಲಾಗಿದೆ. ಎ್ಸಿಐ ನಿಗದಿಪಡಿಸಿದ ದರಕ್ಕೆ ಪೂರೈಕೆ ಕುರಿತು ಸರ್ಕಾರದಮಟ್ಟದಲ್ಲಿ ಮಾತುಕತೆ ಪ್ರಗತಿಯಲ್ಲಿದೆ. ಏನೇ ಆದರೂ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯಲಿದೆ ಎಂದರು.
ರಾಜ್ಯದ ಕಟ್ಟಕಡೆಯ ವ್ಯಕ್ತಿಗೆ ತಲಾ 10 ಕೆಜಿ. ಅಕ್ಕಿ ಹಂಚಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇವೆ. ಕೊಟ್ಟ ಮಾತು ಉಳಿಸಿಕೊಳ್ಳುವುದಕ್ಕಾಗಿ ಸದ್ಯಕ್ಕೆ ಹೆಚ್ಚುವರಿ ಐದು ಕೆ.ಜಿ. ಮೊತ್ತ ತಲಾ 170 ರೂ. ನಗದು ನೇರ ವರ್ಗಾವಣೆ ಮಾಡಲಾಗುತ್ತಿದೆ.
ಲಾನುಭವಿಗಳಿಗೆ ನಗದು ನೇರ ವರ್ಗಾಯಿಸಲು ಮಾಸಿಕ 600 ಕೋಟಿ ರೂ. ವೆಚ್ಚವಾಗುತ್ತಿದೆ. ಈ ಖರ್ಚು ಭರಿಸುವ ಜತೆಗೆ ಭರವಸೆಯಂತೆ ಆದಷ್ಟು ಬೇಗ ತಲಾ 10 ಕೆಜಿ ಅಕ್ಕಿ ವಿತರಣೆ ಸರ್ಕಾರ ಬದ್ಧವಾಗಿದೆ. ಇಲಾಖೆಯ ಸರ್ವರ್ ಸಮಸ್ಯೆಯನ್ನು ಪರಿಹರಿಸಲು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಅಂತ್ಯೋದಯ ಅನ್ನ, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಲಾನುಭವಿಗಳ ಖಾತೆಗೆ ನಗದು ನೇರ ವರ್ಗಾವಣೆ ಮುಂದುವರಿದಿದೆ. ಆಗಸ್ಟ್‌ಗೆ ಅನುಮೋದಿತ 9,761,414 ಪಡಿತರ ಚೀಟಿಗಳ 34,152,600 ಲಾನುಭವಿಗಳಿಗೆ ಒಟ್ಟು 565.96 ಕೋಟಿ ರೂ. ಪಾವತಿಯಾಗಿದೆ.