

ನವದೆಹಲಿ: ಬಂದೂಕೂಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ (Shootout) 20ಕ್ಕೂ ಹೆಚ್ಚು ಅಪ್ರಾಪ್ತ ವಯಸ್ಕರು ಮೃತಪಟ್ಟಿರುವ ಘಟನೆ ಪಾಕಿಸ್ತಾನದ (Pakistan) ಬಲೂಚಿಸ್ತಾನದ ದುಕಿ ಜಿಲ್ಲೆಯ ಕಲ್ಲಿದ್ದಲು ಗಣಿ ಬಳಿ ನಡೆದಿದೆ.
ಗುರುವಾರ (ಅಕ್ಟೋಬರ್ 10) ತಡರಾತ್ರಿ ದುಕಿ ಜಿಲ್ಲೆಯ ಕಲ್ಲಿದ್ದಲಿ ಗಣಿ ಬಳಿ ಬಂದೂಕೂಧಾರಿಗಳು (Gunmen) ಜನರನ್ನು ಒಟ್ಟುಗೂಡಿಸಿದರು ಮತ್ತು ನಂತರ ಅವರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ಸತ್ತವರು ಕಲ್ಲಿದ್ದಲುಗಣಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.
ರಾಷ್ಟ್ರ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ (Islamabad) ನಡೆಯಲಿರುವ ಪ್ರಮುಖ ಭದ್ರತಾ ಶೃಂಗಸಭೆಗೆ (SCO) ಕೆಲವು ದಿನಗಳ ಮೊದಲು ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ದಾಳಿ ನಡೆದಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಈ ಪ್ರಾಂತ್ಯವು ಸ್ವಾತಂತ್ರ್ಯವನ್ನು ಬಯಸುವ ಪ್ರತ್ಯೇಕತಾವಾದಿ ಗುಂಪುಗಳ ಭದ್ರಕೋಟೆಯಾಗಿದೆ.
ಈ ಶೂಟೌಟ್ ಪ್ರಕರಣವು ದೇಶದಲ್ಲಿ ಪ್ರಮುಖ ಘಟನೆಗಳು ಅಥವಾ ವಿದೇಶಿಯರನ್ನು ರಕ್ಷಿಸುವ ಪಾಕಿಸ್ತಾನಿ ಮಿಲಿಟರಿಯ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಸ್ಲಾಮಾಬಾದ್ ಮುಂದಿನ ವಾರ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯನ್ನು ಆಯೋಜಿಸುತ್ತಿದೆ.