

ವಿಜಯವಾಡ: ಆಂಧ್ರ ಪ್ರದೇಶದ ನೆಲ್ಲೂರ್ ಪಟ್ಟಣದ ವೃತ್ತ ನಿರೀಕ್ಷಕ (ಸರ್ಕಲ್ ಇನ್ಸ್ಪೆಕ್ಟರ್) ಶೇಷ ರಾವ್ ನಿಗೂಢ ಸಾವಿನ ಪ್ರಕರಣದ ರಹಸ್ಯ ಸಿಸಿಟಿವಿ ಕ್ಯಾಮೆರಾ ಸಹಾಯದಿಂದ ಬಯಲಾಗಿದೆ. ಆರಂಭದಲ್ಲಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಸಿಐಡಿಗ ಸಿಸಿಟಿವಿ ದೃಶ್ಯಾವಳಿ ಮಹತ್ವದ ತಿರುವು ನೀಡಿದೆ.
ಸಿಐ ಶೇಷ ರಾವ್ ಸಾವಿಗೆ ಹಲ್ಲಿ ಕಾರಣ ಎಂದು ತಿಳಿದುಬಂದಿದೆ. ಶೇಷ ರಾವ್ ಅವರು ತಮ್ಮ ಪರಿಚಯದ ಮಹಿಳೆ ಮನೆಗೆ ತೆರಳಿದ್ದಾರೆ. ಈ ವೇಳೆ ನಿರ್ಮಾಣ ಹಂತದಲ್ಲಿದ್ದ ಎಲೆವೇಟರ್ ಬಳಿ ಹಲ್ಲಿಯೊಂದನ್ನು ನೋಡಿದ್ದಾರೆ. ಅದನ್ನು ಓಡಿಸಲು ಎಂದು ಕಸಬರಿಕೆ ತೆಗೆದುಕೊಂಡು ಹೋಗಿ ಗುಡಿಸುವಾಗ ಕಾಲು ಜಾರಿ ಕಟ್ಟದಿಂದ ಕೆಳಗೆ ಬಿದ್ದಿದ್ದಾರೆ. ಈ ಎಲ್ಲ ಘಟನೆಯೂ ಸಿಸಿಟಿವಿಯಲ್ಲಿ ದಾಖಲಾಗಿದೆ.
ತಕ್ಷಣ ಶೇಷ ರಾವ್ ಅವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ತೀವ್ರ ಗಾಯಗೊಂಡಿದ್ದರಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆರಂಭದಲ್ಲಿ ಪ್ರಕರಣದಲ್ಲಿ ಅನುಮಾನ ಮೂಡಿತ್ತು ಬಳಿಕ ಸಿಸಿಟಿವಿಯನ್ನು ಪರಿಶೀಲಿಸಿದಾಗ ಕೆಲವು ಮಹತ್ವದ ಸುಳಿವು ಸಿಕ್ಕಿತು.
ಘಟನೆ ಹಿನ್ನೆಲೆ
ನೆಲ್ಲೂರ್ನಲ್ಲಿ ವಾಸವಿದ್ದ ಸಿಐ ಶೇಷ ರಾವ್, ಭಾನುವಾರ (ಮಾರ್ಚ್ 7) ಗುಂಟೂರಿನ ಪಂಡರಿಪುರಂನಲ್ಲಿರುವ ಮಹಿಳೆ ಮನೆಗೆ ತೆರಳಿದ್ದರು. ಮಗಳ ಮೆಡಿಕಲ್ ಸೀಟ್ ಬಗ್ಗೆ ಮಾತನಾಡಲು ಬೆಳಗ್ಗೆ 9 ಗಂಟೆ ಸುಮಾರಿಗೆ ಹೋಗಿದ್ದರು. ಈ ವೇಳೆ ನಿರ್ಮಾಣ ಹಂತದ ಎಲೆವೇಟರ್ ಬಳಿ ಹಲ್ಲಿ ಪತ್ತೆಯಾಗಿದೆ. ಅದನ್ನು ಓಡಿಸಲೆಂದು ಕಸಬರಿಕೆ ತೆಗೆದುಕೊಂಡು ಹೋಗಿ ಗುಡಿಸುವಾಗ ಆಕಸ್ಮಿಕವಾಗಿ ಕಟ್ಟಡದಿಂದ ಕೆಳಗೆ ಬಿದ್ದಿದ್ದಾರೆ.
ತಕ್ಷಣ ಮಹಿಳೆ ಶೇಷ ರಾವ್ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಅವರನ್ನು ಗುಂಟೂರು ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್)
(ವಿಡಿಯೋ ಕೃಪೆ- ಸಾಹೋ ಟಿವಿ)