VIDEO| ನೋಡುತ್ತಿದ್ದಂತೆ ತಿಮಿಂಗಿಲ ಶಾರ್ಕ್​ ಮೇಲೆ ಜಿಗಿದ ವ್ಯಕ್ತಿ: ಮುಂದೇನಾಯ್ತು ನೀವೆ ನೋಡಿ!

Shark
Published on

ರಿಯಾದ್​: ಸಮುದ್ರ ಜೀವಿ ಶಾರ್ಕ್​ ತುಂಬಾನೇ ಅಪಾಯಕಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಶಾರ್ಕ್​ ಜತೆ ತಮಾಷೆ ಮಾಡಲು ಸಹ ಯಾರೂ ಹೋಗುವುದಿಲ್ಲ. ಹೀಗಿರುವಾಗ ಇಲ್ಲೊಬ್ಬ ಅಸಾಮಿ ತಿಮಿಂಗಿಲ ಶಾರ್ಕ್ ಮೇಲೇರಿ ಸವಾರಿ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ.

ಸೌದಿ ಅರೇಬಿಯಾದ ಯಂಬು ನಗರದ ಸಮುದ್ರದಲ್ಲಿ ಝಕಿ ಅಲ್​​ ಸಬಾಹಿ ಎಂಬ ಸಾಹಸಿಗ ತನ್ನ ದೋಣಿಯ ಮೇಲೆ ಕುಳಿತು ಪ್ರಯಾಣಿಸುವಾಗ, ಸಮೀಪ ಬಂದ ತಿಮಿಂಗಿಲ ಶಾರ್ಕ್​ ಮೇಲೇರಿ ಸವಾರಿ ಮಾಡಿದ್ದಾರೆ.

ವಿಜ್ಞಾನಿಗಳು ಮತ್ತು ಪರಿಸರ ಸಂರಕ್ಷಣಾವಾದಿಗಳು ವಿರೋಧದ ನಡುವೆಯೂ ತಿಮಿಂಗಿಲ ಶಾರ್ಕ್ ಮೇಲಿನ ಸವಾರಿ ದೃಶ್ಯ ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. ಸಬಾಹಿ ಅವರು ದೈತ್ಯ ಜೀವಿಯ ಮೇಲೆ ಕುಳಿತು ಸವಾರಿ ಮಾಡುವಾಗ ವ್ಯಕ್ತಿಯೊಬ್ಬರ ಹಿನ್ನೆಲೆ ಧ್ವನಿ ಕೇಳಿದ್ದು, ತುಂಬಾ ಎಚ್ಚರ, ಅದು ನಿನ್ನನ್ನು ನುಂಗಿಬಿಡಬಹುದು ಎಂದಿದ್ದಾರೆ.

ಇನ್ನು ಸಬಾಹಿ ಸಾಹಸಕ್ಕೆ ಅನೇಕರು ಕಾಮೆಂಟ್​ ಮಾಡಿದ್ದು, ಆತ ದಿಟ್ಟ ವ್ಯಕ್ತಿ, ದೇವರೇ ಆತನನ್ನು ಕಾಪಾಡು ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಿ ಸಾಕಷ್ಟು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆದರೆ, ಸೌದಿ ಆಡಳಿತ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. (ಏಜೆನ್ಸೀಸ್​) (ವಿಡಿಯೋ ಕೃಪೆ: ಡೈಲಿ ಮೇಲ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net