ತಂಗಿಗೆ 20 ರೂ. ಕೊಟ್ಟು ಅಕ್ಕನ ಮೇಲೆ ಎರಗಿದ ಕಾಮುಕ

Child Rape (1)
Published on

ಮಹರಾಷ್ಟ್ರ:  ಅಪರಿಚಿತ ವ್ಯಕ್ತಿಯೊಬ್ಬ 9 ವರ್ಷದ ಬಾಲಕಿಯ ಮೇಲೆ ಅತ್ಯಚಾರ ಎಸಗುವಾಗ ಜತೆಗೆ ಇದ್ದ ಈಕೆಯ ಐದು ವರ್ಷದ ಸಹೋದರಿಯನ್ನು ಸುಮ್ಮನೆ ಇರುವಂತೆ  20  ರೂ. ನೀಡಿದ್ದಾನೆ. ಈ ಘಟನೆ ನಡೆದು 24 ಗಂಟೆಗಳ ನಂತರವೂ ಆರೋಪಿಗಳ ಸುಳಿವಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಪಾರ್ಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ನಡೆದಿದ್ದೇನು?: ಈ ಹೆಣ್ಣುಮಕ್ಕಳ ಕುಟುಂಬವು ಮೂರು ತಿಂಗಳ ಹಿಂದೆ ನಾಗ್ಪುರಕ್ಕೆ ಬಂದು ನೆಲೆಸಿತ್ತು. ಈ ಇಬ್ಬರು ಹೆಣ್ಣುಮಕ್ಕಳ ಪೋಷಕರು ಕೆಲಸಕ್ಕಾಗಿ ದೂರ ಹೋಗುತ್ತಾರೆ. ಹುಡುಗಿಯರು ಹಗಲಿನಲ್ಲಿ ಇಬ್ಬರೇ ಇರುತ್ತಾರೆ. ಈ ವಿಚಾರ ತಿಳಿದ ವ್ಯಕ್ತಿಯೊರ್ವ ಪೋಷಕರು ಮನೆಯಲ್ಲಿದ್ದಾರೆಯೇ ಎಂದು ಕೇಳುವ ನೆಪದಲ್ಲಿ ಸಹೋದರಿಯರ ಬಾಡಿಗೆ ಮನೆಗೆ ಪ್ರವೇಶಿಸಿದ. 9 ವರ್ಷದ ಬಾಲಕಿ ಹಾಗೂ ಜತೆಗೆ 5 ವರ್ಷದ ಪುಟ್ಟ ಬಾಲಕಿ ಮಾತ್ರ ಮನೆಯಲ್ಲಿ ಇರುವುದನ್ನು ಗಮನಿಸಿದ್ದಾನೆ.

ಇದೇ ಒಳ್ಳೆಯ ಸಮಯ ಎಂದು ಭಾವಿಸಿದ ಈ ಕಾಮುಕ 9 ವರ್ಷದ ಬಾಲಕಿ ಮೇಲೆ ಎರಗಿದ್ದಾನೆ. ಅಕ್ಕನ ಜತೆಗೆ ಇದ್ದ ಬಾಲಕಿಗೆ ಗಲಾಟೆ ಮಾಡಬೇಡ... ಸುಮ್ಮನೆ ಇರು ಎಂದು ಕೈಗೆ 20 ರೂ. ಇಟ್ಟು ಹಣದ ಆಮಿಷ ಒಡ್ಡಿದ್ದಾನೆ. ಇತ್ತು 9ರ ಬಾಲಕಿಯ ಲೈಂಗಿಕ ದೌರ್ಜನ್ಯ ಎಸಗಿ ತರಾತುರಿಯಲ್ಲಿ ಹೊರಟು ಹೋಗಿದ್ದಾನೆ.

ಬಾಲಕಿ ತನ್ನ ಹೆತ್ತವರು ಕೆಲಸದಿಂದ ಹಿಂದಿರುಗಿದಾಗ ತನಗಾದ ಕಷ್ಟವನ್ನು ವಿವರಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ. ಪೋಷಕರು ಪಾರ್ಡಿ ಪೊಲೀಸ್ ಠಾಣೆಗೆ ಧಾವಿಸಿದ್ದು, ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ.

ಪರೀಕ್ಷೆಯು ಅತ್ಯಾಚಾರವನ್ನು ದೃಢಪಡಿಸಿತು ಮತ್ತು ಅಪ್ರಾಪ್ತಳ ಒಳ ಉಡುಪುಗಳ ಮೇಲೆ ರಕ್ತದ ಕಲೆಗಳನ್ನು ಹೊಂದಿದ್ದಳು. 5 ವರ್ಷದ ಸಹೋದರಿಯ ಮಾಹಿತಿಯ ಆಧಾರದ ಮೇಲೆ, ಮರಾಠಿ ಮಾತನಾಡುವ ಶಂಕಿತ ಆರೋಪಿಯು ಹಣೆಯ ಮೇಲೆ 'ತಿಲಕ'ವನ್ನು ಹೊಂದಿದ್ದಾನೆ ಎನ್ನುವ ಮಾಹಿತಿ ಮೇಲೆ ಪೊಲೀಸರು ಕಾಮುಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net