ಛೋಟೆ ಪಂಡಿತ್‌ನ ಲುಕ್​​ ಮರುಸೃಷ್ಟಿಸಿದ ಉರ್ಫಿ ಜಾವೇದ್‌ಗೆ ಜೀವ ಬೆದರಿಕೆ..!

uu
Published on

ಸೋಷಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ಭೂಲ್ ಭುಲೈಯಾ ಚಿತ್ರದ ರಾಜ್‌ಪಾಲ್ ಯಾದವ್ ಅವರ ಲುಕನ್ನ ಮರುಸೃಷ್ಟಿಸಿದ್ದಾರೆ.


ಭೂಲ್ ಭುಲೈಯಾ ಚಿತ್ರದ 'ಛೋಟೆ ಪಂಡಿತ್' ಪಾತ್ರವನ್ನು ಮರುಸೃಷ್ಟಿಸಿದ್ದಕ್ಕಾಗಿ ತನಗೆ ಜೀವ ಬೆದರಿಕೆ ಇದೆ ಎಂದು ಉರ್ಫಿ ಹೇಳಿಕೊಂಡಿದ್ದಾರೆ. ಉರ್ಫಿ ತನಗೆ ಬಂದ ಬೆದರಿಕೆಯ ಸ್ಕ್ರೀನ್​ಶಾಟನ್ನ ಸೋಷಿಯಲ್​​​ ಮೀಡಿಯಾಗಳಲ್ಲಿ ಹಂ.ಚಿಕೊಂಡಿದ್ದಾಳೆ.
ಉರ್ಫಿ ಧಾರ್ಮಿಕ ಭಾವನೆಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ಕೊಲೆ ಬೆದರಿಕೆಯನ್ನ ಹಾಕಲಾಗಿದೆ.


ಉರ್ಫಿ ಜಾವೇದ್ ತನ್ನ ಹ್ಯಾಲೋವೀನ್​ಗಾಗಿ ವಿನ್ಯಾಸಗೊಳಿಸಿದ್ದ ಡ್ರೆಸ್​​ ಇದಾಗಿದೆ. ಭೂಲ್ ಭುಲೈಯಾ" ಚಿತ್ರದಲ್ಲಿ ರಾಜ್‌ಪಾಲ್ ಯಾದವ್ ಅವರ ಪಾತ್ರವಾದ ಛೋಟೆ ಪಂಡಿತ್‌ನ ಲುಕ್​​​​ ಕಾಪಿ ಮಾಡೋಕೆ ಮುಂದಾದ ಉರ್ಫಿ ಜಾವೆದ್​​​, ತನ್ನ ಮುಖಕ್ಕೆ ಕೆಂಪು ಬಣ್ಣ ಬಳಿದುಕೊಂಡಳು, ಕೆಂಪು ಟಾಪ್‌ ಧರಿಸಿದ್ದಾಳೆ.


ಉರ್ಫಿ ತಾನು ಧರಿಸುವ ಉಡುಪಿನಿಂದಾಗಿ ಕೊಲೆ ಬೆದರಿಕೆಗಳನ್ನ ಎದುರಿಸುತ್ತಿರೋದು ಹೊಸದೇನಲ್ಲ. ಆಕೆಗೆ ಈ ಹಿಂದೆಯೂ ಸಾಕಷ್ಟು ಬೆದರಿಕೆಗಳು ಬಂದಿದ್ದವು. ಡಿಸೆಂಬರ್ 2022 ರಲ್ಲಿ, ಮುಂಬೈನಲ್ಲಿ ವಾಸಿಸುತ್ತಿದ್ದ ನವೀನ್ ಗಿರಿ ಎಂಬ ವ್ಯಕ್ತಿ ಉರ್ಫಿಗೆ ಅತ್ಯಾಚಾರ ಮತ್ತು ಜೀವ ಬೆದರಿಕೆಯನ್ನು ಕಳುಹಿಸಿದ್ದಕ್ಕಾಗಿ ಆತನನ್ನು ಬಂಧಿಸಲಾಗಿತ್ತು. 354 (ಎ) ಲೈಂಗಿಕ ಕಿರುಕುಳ ಹಾಗೂ ಇತರೆ ಸೆಕ್ಷನ್​​ಗಳ ಅಡಿಯಲ್ಲಿ ಆತನ ಮೇಲೆ ದೂರನ್ನೂ ದಾಖಲಿಸಲಾಗಿತ್ತು.


ಸದ್ಯ ಉರ್ಫಿ ತನ್ನ ವೇಷಭೂಷಣದ ವಿಚಾರಕ್ಕೆ ಮತ್ತೆ ಕೊಲೆ ಬದರಿಕೆ ಎದುರಿಸುವಂಣತಾಗಿದ್ದು, ಸದ್ಯ ಆಕೆ ಈ ಕೊಲೆ ಬೆದರಿಕೆಯ ಸ್ಕ್ರೀನ್​ಶಾಟನ್ನ ಎಕ್ಸ್​​(ಟ್ವಿಟ್ಟರ್​​)ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net