ಹನುಮಾನ್ ಚಾಲೀಸಾ ಪಠಣ; ಕಾಂಗ್ರೆಸ್ಸಿಗರ ಸವಾಲಿಗೆ ತಿರುಗೇಟು ಕೊಟ್ಟ ಶೋಭಾ ಕರಂದ್ಲಾಜೆ

Shobha Kharandlaje
Published on

ಬೆಂಗಳೂರು: ಹನುಮಾನ್ ಚಾಲೀಸಾ ಪಠಣ ಮಾಡಿ ನಮ್ಮ ಭಕ್ತಿಯನ್ನು ತೋರಿಸಿದ್ದೇವೆ. ನಿಮಗೆ ಹನುಮಾನ್ ಚಾಲೀಸಾ ಬರುತ್ತದೆಯಾ ಎಂದು ಸಾವಲೆಸೆದಿದ್ದರು. ಅವರ ಸವಾಲನ್ನು ಸ್ವೀಕರಿಸಿ ಇಂದು ರಾಜ್ಯದಾದ್ಯಂತ ಹನುಮಾನ್ ಚಾಲೀಸಾ ಪಠಣ ಮಾಡಿದ್ದೇವೆ. ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಾವೆಲ್ಲ ಬಜರಂಗಿಗಳು, ಆಂಜನೇಯನ ಭಕ್ತರು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕಾಂಗ್ರೆಸ್​ಗೆ ತಿರುಗೇಟು

ಮಲ್ಲೇಶ್ವರದ ಶ್ರೀರಾಮ ಮಂದಿರದಲ್ಲಿ ಹನುಮಾನ್ ಚಾಲೀಸಾ ಪಠಣದ ಬಳಿಕ ಶೋಭಾ ಕರಂದ್ಲಾಜೆ ಮಾತನಾಡುತ್ತಾ, ನಾಳೆಯಿಂದ ಮನೆ ಮನೆಯಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡುತ್ತಾರೆ. ಭೂತ ಪಿಶಾಚಿ ಓಡಿಸುವ ಉಲ್ಲೇಖ ಹನುಮಾನ ಚಾಲೀಸಾದಲ್ಲಿದೆ. ನಾಳೆಯಿಂದ ಎಲ್ಲರೂ ಭೂತ ಪಿಶಾಚಿಗಳನ್ನು ಹೊಡಿಸುವ ಕೆಲಸ ಮಾಡುತ್ತಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್​​ಗೆ ತಿರುಗೇಟು ಕೊಟ್ಟರು.

ಆಂಜನೇಯ ನಮಗೆ ಭಕ್ತಿಯ ವಿಚಾರ

ಆಂಜನೇಯನ ಅಪ್ಪ ಯಾರು, ಅಮ್ಮ ಯಾರು ಎಂದು ಗೊತ್ತಿಲ್ಲದ ಕಾಂಗ್ರೆಸ್ ನಾಯಕರು ಬಜರಂಗಿಯ ಭಕ್ತರಿಗೆ ಸವಾಲು ಹಾಕಿದ್ದರು. ಬಜರಂಗದಳವನ್ನು ಬ್ಯಾನ್ ಮಾಡುತ್ತೇವೆ ಎಂದು ಹೇಳಿದ್ದರು. ಅದಕ್ಕಾಗಿ ಇಂದು ಹನುಮಾನ್ ಚಾಲೀಸಾ ಪಠಣ ಮಾಡಿದ್ದೇವೆ. ಕಾಂಗ್ರೆಸ್‌ನವರಿಗೆ ಆಂಜನೇಯ ರಾಜಕಾರಣದ ವಿಚಾರವಾದರೆ, ನಮಗಿದು ಭಕ್ತಿಯ ವಿಚಾರ. ಒಂದು ಸಮುದಾಯವನ್ನು ಓಲೈಸುವ ನಿಟ್ಟಿನಲ್ಲಿ ಕಾಂಗ್ರೆಸ್‌ನವರು ಬಜರಂಗದಳವನ್ನು ಬ್ಯಾನ್ ಮಾಡುವ ವಿಚಾರಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net