More

    ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಹಿಂದು ಸಂಘಟನೆಗಳು; ರಾಜ್ಯದ ವಿವಿಧೆಡೆ ಹನುಮಾನ್ ಚಾಲೀಸಾ ಪಠಣ

    ಬೆಂಗಳೂರು: ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದು ಹೇಳಿರುವುದು ಬಿಜೆಪಿ ಹಾಗೂ ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹಿಂದು ಸಂಘಟನೆಗಳು ಇಂದು ಸಂಜೆ 7 ಗಂಟೆಗೆ ರಾಜ್ಯದ ವಿವಿಧೆಡೆ ಹನುಮಾನ್ ಚಾಲೀಸಾ ಪಠಿಸಲು ಕರೆ ನೀಡಿತ್ತು. ಇದೀಗ ರಾಜಧಾನಿಯ ಹಲವು ಆಂಜನೇಯ ದೇವಾಲಯಗಳಲ್ಲಿ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಣೆ ಮಾಡಿದ್ದಾರೆ.

    ಹನುಮಾನ್ ಚಾಲೀಸಾ ಪಠಣೆ

    ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಾಲಯದಲ್ಲಿ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಪ್ರಶಾಂತ್ ಸಂಬರಗಿ ಸೇರಿದಂತೆ ಹಿಂದು ಸಂಘಟನೆ ಕಾರ್ಯಕರ್ತರು ಒಟ್ಟಾಗಿ ಹನುಮಾನ್ ಚಾಲೀಸಾ ಪಠಣ ಮಾಡಿದ್ದಾರೆ. ಈ ವೇಳೆ ದೇವಾಲಯದ ಆವರಣದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.

    ಇದನ್ನೂ ಓದಿ: ಮುಂದಿನ 6 ದಿನಗಳಲ್ಲಿ ಹಿಂದುಗಳು ಏನೆಂಬುದನ್ನು ತೋರಿಸುತ್ತೇವೆ; ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಚಕ್ರವರ್ತಿ ಸೂಲಿಬೆಲೆ

    ದೇವಾಲಯದ ಒಳಗೆ ರಾಜಕೀಯ ತರಬೇಡಿ

    ಗಾಳಿ ಆಂಜನೇಯ ದೇವಾಲಯದ ಒಳಗಡೆ ಹನುಮಾನ್ ಚಾಲೀಸಾ ಪಠಣ ಮಾಡಲು ದೇವಸ್ಥಾನದ ಆಡಳಿತ ಮಂಡಳಿ ಅವಕಾಶ ನಿರಾಕರಿಸಿದೆ. ದೇವಾಲಯ ಒಳಗಡೆ ರಾಜಕೀಯ ತರಬೇಡಿ ಎಂದು ಆಡಳಿತ ಮಂಡಳಿ ತಿಳಿಸಿದೆ. ಹನುಮಾನ್ ಚಾಲೀಸಾ ಪಠಣ ಮಾಡಬೇಕು ಅಂದರೆ ವಿಡಿಯೋ ಚಿತ್ರೀಕರಣ ಮಾಡಬೇಡಿ. ನೀವು ಮಾತ್ರ ಬೇಕಾದರೆ ಬಂದು ಭಕ್ತಿಯಿಂದ ಚಾಲೀಸಾ ಪಠಣ ಮಾಡಿ ಎಂದು ಆಡಳಿತ ಮಂಡಳಿ ಸೂಚಿಸಿದೆ. ಕೊನೆಗೆ ದೇವಾಲಯದ ಹೊರಭಾಗದಲ್ಲಿರುವ ಹನುಮನ ವಿಗ್ರಹದ ಮುಂದೆ ಚಾಲೀಸಾ ಪಠಣೆ ಮಾಡಿದ್ದಾರೆ.

    ಇದನ್ನೂ ಓದಿ: ಇನ್ಮುಂದೆ ಎಲ್‌ಕೆಜಿ ಪ್ರವೇಶಕ್ಕೆ 4 ವರ್ಷ ವಯೋಮಿತಿ ನಿಗದಿ; ಪಾಲಕರಿಂದ ವಿರೋಧ

    ರಾಜ್ಯದಾದ್ಯಂತ ಅಭಿಯಾನ

    ಭಜರಂಗದಳ ನಿಷೇಧ ವಿಚಾರವಾಗಿ ಬೀದರ್​ನ‌ ಭಾಲ್ಕಿಯಲ್ಲಿ ಭಜರಂಗದಳ ಕಾರ್ಯಕರ್ತರು ಬಾಲಾಜಿ ಮಂದಿರನಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರದಲ್ಲಿ ಅಭಯ ಆಂಜುನೇಯ ದೇವಾಲಯದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಹನುಮಾನ ಚಾಲೀಸ್ ಪಠಣ ಅಭಿಯಾನ ಆರಂಭವಾಗಿದೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts