

ಚಿತ್ರದುರ್ಗ: ವಿಎಚ್‌ಪಿ -ಬಜರಂಗಳ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿ ಬೃಹತ್ ಶೋಭಾಯಾತ್ರೆ ನಗರದಲ್ಲಿ ಸೆ.17ರಂದು ಶ್ರದ್ಧಾ,ಭಕ್ತಿ,ಅದ್ದೂರಿ ಹಾಗೂ ಸಡಗರ-ಸಂಭ್ರಮಗಳೊಂದಿಗೆ ನೆರವೇರಲಿದೆ ಎಂದು ಬಜರಂಗದಳದ ಶಿವಮೊಗ್ಗ ವಿಭಾಗೀಯ ಸಂಯೋಜಕ ಎಸ್.ಆರ್.ಪ್ರಭಂಜನ್ ಹೇಳಿದರು.
ನಗರದ ಸಮಿತಿ ಉತ್ಸವದ ವೀರ ಸಾರ್ವಕರ್‌ಮಂಟಪದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,ಲಕ್ಷಾಂತರ ಜನರು ಭಾಗವಹಿಸುವ ಈ ಯಾತ್ರೆಗೆ ಅಂದು ಬೆಳಗ್ಗೆ 9.50ಕ್ಕೆ ವಿಎಚ್‌ಪಿ ಅಖಿಲ ಭಾರತೀಯ ಸಹಕಾರ‌್ಯದರ್ಶಿ ಅಂಬರೀಶ್‌ಸಿಂಗ್ ಚಾಲನೆ ನೀಡಲಿದ್ದಾರೆ. ನಾಸಿಕ್‌ಡೋಲು, ಚಂಡೆ ಸಹಿತ 15ಕ್ಕೂ ಹೆಚ್ಚು ಕಲಾ ತಂಡಗಳ ಸಾವಿರಾರು ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.
ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ,ಶ್ರೀ ಶಿವಲಿಂಗಾನಂದ ಸ್ವಾಮೀಜಿ,ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ,ಶ್ರೀ ಈಶ್ವರಾನಂದಪುರಿ ಸ್ವಾಮೀಜಿ,ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ,ಶ್ರೀ ಪುರುಷೋತ್ತ ಮಾ ನಂದ ಪುರಿ ಸ್ವಾಮೀಜಿ,ಶ್ರೀಬಸವ ಮಾಚೀದೇವ ಸ್ವಾಮೀಜಿ,ಶ್ರೀ ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಶ್ರೀ ಸೇವಾಲಾಲ್ ಸ್ವಾಮೀಜಿ,ಶ್ರೀ ಬ್ರಹ್ಮ ನಿಷ್ಠಾನಂದ ಸ್ವಾಮೀಜಿ,ಶ್ರೀ ಶಾಂತ ವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ನಗರದೇವತೆಗೆಳಿಂದ ಮಗನ ದರ್ಶನ
ಚಿತ್ರದುರ್ಗ ನಗರ ದೇವತೆಗಳು 13ರಂದು ಮಂಟಪಕ್ಕೆ ಭೇಟಿ ನೀಡಿ ಮಗನ(ಗಣೇಶ)ದರ್ಶನ ಪಡೆಯಲಿವೆ. ಸಿಹಿನೀರು ಹೊಂಡ ದಲ್ಲಿ ಎಲ್ಲ ದೇವತೆಗಳಿಗೆ ಪೂಜೆ ಸಲ್ಲಿಸಿದ ಬಳಿಕ ಅದ್ದೂರಿ ಮೆರವಣಿಗೆ ಮೂಲಕ ದೇವತೆಗಳನ್ನು ಮಂಟಪಕ್ಕೆ ಕರೆ ತರಲಾಗುತ್ತದೆ. ಅಲ್ಲಿ ಎರಡು ದಿನ ದೇವತೆಗಳ ದರ್ಶನಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಲಾಗುವುದು.
14ರಂದು ನಾನಾ ಹೋಮಗಳನ್ನು ಮಾಡಲಾಗುವುದು. 15ರಂದು ನಗರದಲ್ಲಿ ಬೃಹತ್ ಬೈಕ್ ರ‌್ಯಾಲಿ ನಡೆಯಲಿದೆ. ಅಂದು ಬೆಳಗ್ಗೆ 10ಗಂಟೆಗೆ ಕನಕ ವೃತ್ತದಿಂದ ಆರಂಭ ವಾಗುವ ರ‌್ಯಾಲಿ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಮಾಪನಗೊಳ್ಳಲಿದೆ. ಶೋಭಾ ಯಾತ್ರೆಯಲ್ಲಿ ಡಿಜೆ ಅಳವಡಿಸುವ ಕುರಿತು ಪೊಲೀಸರೊಂದಿಗೆ ಚರ್ಚೆ ನಡೆದಿದೆ ಎಂದರು. ಸಮಿತಿ ಅಧ್ಯಕ್ಷ ವಿಫುಲ್ ಜೈನ್,ಬದ್ರಿನಾಥ್, ಷಡಾಕ್ಷರಪ್ಪ,ಶರವಣ ಮತ್ತಿತರ ಪ್ರಮುಖರು ಇದ್ದರು.
----