ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧಕ್ಕೆ ಶಿವಸೇನೆ ಒತ್ತಾಯ

Masjid
Published on

ಮುಂಬೈ: ಶಬ್ದ ಮಾಲಿನ್ಯ ತಗ್ಗಿಸಲು ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಬೇಕು ಎಂದು ಶಿವಸೇನೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಶಿವಸೇನೆಯ ಮುಖವಾಣಿ ‘ಸಾಮ್ನಾ’ ಪತ್ರಿಕೆಯಲ್ಲಿ ಸಂಪಾದಕೀಯದಲ್ಲಿ ಈ ಆಗ್ರಹ ಮಾಡಲಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಹೇಳಿದೆ. ಮುಸ್ಲಿಂ ಮಕ್ಕಳಿಗಾಗಿ ‘ಆಜಾನ್’ ಎಂಬ ವಾಚನ ಕಾರ್ಯಕ್ರಮ ನಡೆಸಬೇಕು ಎಂದು ಶಿವಸೇನೆಯ ಮುಂಬೈ ದಕ್ಷಿಣ ವಿಭಾಗದ ಪ್ರಮುಖರಾಗಿರುವ ಪಾಂಡುರಂಗ ಸಕ್ಪಾಲ್ ನೀಡಿದ್ದ ಸಲಹೆ ವಿವಾದವೆಬ್ಬಿಸಿದ ಬೆನ್ನಲ್ಲೇ ಶಿವಸೇನೆ ಈ ಬೇಡಿಕೆ ಮುಂದಿಟ್ಟಿದೆ.

ಶಿವಸೇನೆ ನಾಯಕರ ‘ಆಜಾನ್’ ಪ್ರಸ್ತಾಪಕ್ಕೆ ಬಿಜೆಪಿ ನಾಯಕರು ವಿರೋಧಿಸುತ್ತಿರುವುದು ಅಕ್ಷಮ್ಯ. ದೆಹಲಿಯ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ‘ಪಾಕಿಸ್ತಾನಿ ಪ್ರೇರಿತ ಉಗ್ರಗಾಮಿಗಳು’ ಎಂದು ಆರೋಪಿಸುತ್ತಿರುವ ರೀತಿಯಲ್ಲೇ ಪಾಂಡುರಂಗ ಸಕ್ಪಾಲ್ ಮೇಲೆ ಟೀಕೆಗಳನ್ನು ಮಾಡಲಾಗಿದೆ ಎಂದು ಬಿಜೆಪಿ ವಿರುದ್ಧ ಶಿವಸೇನೆ ಕಿಡಿಕಾರಿದೆ. ಈ ವಿಷಯ ವನ್ನು ನಾವು ರಾಜಕೀಯಗೊಳಿಸುವುದಿಲ್ಲ. ದೇಶದಲ್ಲಿ 22 ಕೋಟಿ ಮುಸ್ಲಿಂ ಜನಸಂಖ್ಯೆಯಿದೆ ಎಂದೂ ಸಾಮ್ನಾದಲ್ಲಿ ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net