

ಬೆಂಗಳೂರು: ಶಿವರಾಜ್ ಕುಮಾರ್ ದಂಪತಿ, ರಾಚೇನಹಳ್ಳಿ 348 ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ.
ಬ್ಯಾಟರಾಯನಪುರ ಕ್ಷೇತ್ರದಲ್ಲಿರುವ ರಾಚೇನಹಳ್ಳಿ ಕನ್ನಡ ಕಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ಪತ್ನಿ ಗೀತಾ ಹಾಗೂ ಮಗಳ ಜತೆ ಆಗಮಿಸಿ ಮತದಾನ ಮಾಡಿದ್ದಾರೆ.
ರಾಚೇನಹಳ್ಳಿಯ ವಿದ್ಯಾ ಸಂಚಯನಿ ಶಾಲೆಗೆ ಆಗಮಿಸಿದ ಹ್ಯಾಟ್ರಿಕ್ ಹೀರೋ ಶಿವಣ್ಣ, ಮತದಾನ ಕರ್ತವ್ಯ ಪೂರೈಸಿದ ನಂತರ ಜನತೆಗೆ ಮತದಾನದ ಮಹತ್ವವನ್ನು ಹೇಳಿದ್ದಾರೆ. "ಯುತ್ಸ್ ಎಲ್ಲಾ ಬಂದು ಮತದಾನ ಮಾಡಿ. ಒಂದು ವೋಟ್ನಿಂದ ಒಳ್ಳೆ ವ್ಯಕ್ತಿಯನ್ನ ಆಯ್ಕೆ ಮಾಡಲು ಸಾಧ್ಯ. ನಾವಿಬ್ಬರೂ ವೋಟ್ ಮಾಡಿದ್ದೇವೆ. ದಯವಿಟ್ಟು ಎಲ್ಲರೂ ವೋಟ್ ಮಾಡಿ ಕರ್ತವ್ಯ ನಿರ್ವಹಿಸಿ.
ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಮಾಡಿದರೆ ಒಳ್ಳೆಯ ಅಭ್ಯರ್ಥಿ ಆಯ್ಕೆಯಾಗ್ತಾರೆ. ಯುವಕರು ಈ ದಿನವನ್ನು ವ್ಯರ್ಥ ಮಾಡದೇ ನಿಮ್ಮ ಮತವನ್ನು ಬಳಸದೇ ಇರಬೇಡಿ" ಎಂದು ಶಿವಣ್ಣ ಕರೆ ನೀಡಿದರು.