Mahaan - ಮಹಾನ್ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಶಿವಣ್ಣ

Mahaan Shivanna
Mahaan Shivanna
Published on
Mahaan -
ನಟ ಶಿವರಾಜಕುಮಾರ್​ 63ರ ಹರೆಯದರಲ್ಲೂ ಕನ್ನಡ ಚಿತ್ರರಂಗದ ಅತ್ಯಂತ ಬಿಜಿ ನಟ. ಈಗಾಗಲೇ ಅವರು ನಟಿಸಿರುವ ಪ್ಯಾನ್​ ಇಂಡಿಯಾ "ಪೆದ್ದಿ' ಬಿಡುಗಡೆಯಾಗಿದ್ದು, ಅದರ ಜತೆಗೆ "ಬೇಲ್​', "ಜೈಲರ್​ 2', "666 ಆಪರೇಷನ್​ ಡ್ರೀಮ್​ ಥಿಯೇಟರ್​', "ಡ್ಯಾಡ್​', "ಎ ಫಾರ್​ ಆನಂದ್​', "ಗುಮ್ಮಡಿ ನರಸಯ್ಯ', "ಉತ್ತರಕಾಂಡ' ಸೇರಿ ಇನ್ನೂ ಕೆಲ ಚಿತ್ರಗಳು ವಿವಿಧ ಹಂತದಲ್ಲಿವೆ. ಇನ್ನು ಉಳಿದ ಆರು ತಿಂಗಳಲ್ಲಿ ಅವರು ನಟಿಸಿರುವ ಮೂರು ಚಿತ್ರಗಳು ತೆರೆಗೆ ಬರುವ ನಿರೀಕ್ಷೆಯಿದೆ. ಇದೆಲ್ಲದರ ನಡುವೆಯೇ ಶಿವರಾಜಕುಮಾರ್​ ಪಿ.ಸಿ. ಶೇಖರ್​ ನಿರ್ದೇಶಿಸುತ್ತಿರುವ, ವಿಜಯ್​ ರಾಘವೇಂದ್ರ ನಾಯಕನಾಗಿರುವ "ಮಹಾನ್​' ಚಿತ್ರದಲ್ಲೂ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ವಕೀಲನ ಪಾತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೆ ಅವರ ಲುಕ್​ ರಿವೀಲ್​ ಮಾಡಲಾಗಿದೆ. ನಿರ್ದೇಶಕ ಶೇಖರ್​, ""ಮಹಾನ್​' ರೈತರ ಕುರಿತ ಕಥಾಹಂದರ ಹೊಂದಿರುವ ಚಿತ್ರ. ಇದರಲ್ಲಿ ಬರುವ ಪ್ರತಿ ಪಾತ್ರಕ್ಕೂ ಪ್ರಾಮುಖ್ಯವಿದೆ. ಮನೆಯಲ್ಲಿ ನಾವೇನಾದರೂ ತಪ್ಪು ಮಾಡಿದರೆ ನಮಗೆ ತಂದೆ-ತಾಯಿ ಬುದ್ಧಿ ಹೇಳುತ್ತಾರೆ. ಅದೇ ರೀತಿಯ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾದಾಗ, ಅಲ್ಲಿನ ತೊಂದರೆಗಳನ್ನು ತಿದ್ದಲು ಮಹಾನ್​ ವ್ಯಕ್ತಿಯ ಅಗತ್ಯವಿರುತ್ತದೆ. ಅಂತಹ ಪಾತ್ರದಲ್ಲಿ ಡಾ. ಶಿವರಾಜಕುಮಾರ್​ ಅಭಿನಯಿಸಿದ್ದಾರೆ. ಶಿವಣ್ಣರಿಗೆ ಆ್ಯಕ್ಷನ್​-ಕಟ್​ ಹೇಳುವ ನನ್ನ ಬಹುದಿನಗಳ ಆಸೆ ಈ ಚಿತ್ರದ ಮೂಲಕ ನೆರವೇರಿದೆ' ಎಂದು ಸಂತಸ ಹಂಚಿಕೊಳ್ಳುತ್ತಾರೆ. ವಿಜಯ್​ ರಾಘವೇಂದ್ರ, ಶಿವರಾಜಕುಮಾರ್​ ಜತೆ ದೇವರಾಜ್​, ರಾಧಿಕಾ ನಾರಾಯಣ್​, ನಮ್ರತಾ ಗೌಡ, ವರ್ಷ ಬೊಳ್ಳಮ್ಮ, ಕಿರಣ್​ ಶ್ರೀನಿವಾಸ್​, ಮಿತ್ರ, ರಮೇಶ್​ ಇಂದಿರ, ರಮೇಶ್​ ಭಟ್​, ಶರತ್​ ಲೋಹಿತಾಶ್ವ, ಅವಿನಾಶ್​, ರಂಗಾಯಣ ರು ತಾರಾಗಣದಲ್ಲಿದ್ದಾರೆ.

ಮಾಸ್​ ಲೀಡರ್​ ಜತೆ ಚಿನ್ನಾರಿ ಮುತ್ತ

ಈ ಹಿಂದೆಯೇ ದೊಡ್ಮನೆ ಕುಡಿಗಳಾದ ಶಿವರಾಜಕುಮಾರ್​ ಮತ್ತು ವಿಜಯ್​ ರಾಘವೇಂದ್ರ ಕೆಲ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಶಿವಣ್ಣ ನಾಯಕನಾಗಿದ್ದ "ಅರಳಿದ ಹೂವುಗಳು' (1991), "ಜಗಮೆಚ್ಚಿದ ಹುಡುಗ' (1993) ಚಿತ್ರಗಳಲ್ಲಿ ವಿಜಯ್​ ಬಾಲನಟನಾಗಿ ಕಾಣಿಸಿಕೊಂಡಿದ್ದರು. ನಂತರ "ರಿಷಿ' (2005) ಚಿತ್ರದಲ್ಲಿ ಇಬ್ಬರೂ ಅಣ್ಣ-ತಮ್ಮಂದಿರಾಗಿ ಮಿಂಚಿದ್ದರು. ನಂತರ ಶಿವಣ್ಣ ನಾಯಕನಾಗಿದ್ದ "ಭಜರಂಗಿ' (2013) ಚಿತ್ರದ "ಬಾಸು ನಮ್​ ಬಾಸು' ಹಾಡಿನಲ್ಲಿ ವಿಜಯ್​ ರಾವೇಂದ್ರ ಕೂಡ ಕಾಣಿಸಿಕೊಂಡಿದ್ದರು. "ಮಾಸ್​ ಲೀಡರ್​' ಮತ್ತು "ಶ್ರೀಕಂಠ' (2017) ಚಿತ್ರಗಳಲ್ಲೂ ಶಿವಣ್ಣ ಜತೆ ಮುಖ್ಯ ಭೂಮಿಕೆಯಲ್ಲಿ ವಿಜಯ್​ ರಾಘವೇಂದ್ರ ತೆರೆ ಹಂಚಿಕೊಂಡಿದ್ದರು. ಇದೀಗ ಒಂಭತ್ತು ವರ್ಷಗಳ ನಂತರ "ಮಹಾನ್​' ಮೂಲಕ ದೊಡ್ಮನೆ ಕುಡಿಗಳು ಮತ್ತೆ ಒಂದಾಗಿರುವುದು ನಿರೀೆ ಹೆಚ್ಚಿಸಿದೆ.

ಕೋಟ್​:

ರೈತಜೀವನವೇ ಶ್ರೇಷ್ಠ ಜೀವನ, ಸೈನಿಕರಷ್ಟೇ ರೈತರೂ ಮುಖ್ಯ, ರೈತರನ್ನೂ ಗುರುತಿಸಬೇಕು, ಅವರಿಗೂ ಪ್ರಾಮುಖ್ಯ ನೀಡಬೇಕು ಎಂದು ಹೇಳುವ ಚಿತ್ರವಿದು. ಸಾಕಷ್ಟು ಓದಿ, ರೀಸರ್ಚ್​ ಮಾಡಿ ಹಲವು ನೈಜ ಟನೆಗಳು, ವ್ಯಕ್ತಿಗಳಿಂದ ಸ್ಫೂರ್ತಿ ಪಡೆದಿರುವ ಕಥೆ. ನನ್ನ ಹಿಂದಿನ "ರಾಗಾ' ಚಿತ್ರದಂತೆಯೇ "ಮಹಾನ್​' ಕೂಡ ಒಂದು ಪೇಂಟಿಂಗ್​ನಂತೆ ಮೂಡಿಬಂದಿದೆ. ಕಮರ್ಷಿಯಲ್​ ಅಂಶಗಳೊಂದಿಗೆ ಹಳ್ಳಿಯ ಸೊಬಗನ್ನು ವೈಭವೀಕರಿಸಿದ್ದೇನೆ. ದೃಶ್ಯವೈಭವವಿದೆ. - ಪಿ.ಸಿ.ಶೇಖರ್​, ನಿರ್ದೇಶಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net