ಮಧು ಮಾತ್ರವಲ್ಲ ಬೇಳೂರು ಪರವೂ ಶಿವರಾಜಕುಮಾರ್ ಚುನಾವಣಾ ಪ್ರಚಾರ

Belur Shivarajkumar
Published on

ಶಿವಮೊಗ್ಗ: ಸೊರಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ನಿನ್ನೆ ಆನವಟ್ಟಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ನಟ ಶಿವರಾಜಕುಮಾರ್ ಇಂದು ಬೇಳೂರು ಗೋಪಾಲಕೃಷ್ಣ ಪರವಾಗಿಯೂ ಪ್ರಚಾರ ಕೈಗೊಂಡಿದ್ದಾರೆ.

ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಪರ ಇಂದು ಶಿವಮೊಗ್ಗದ ಹೊಸನಗರ ತಾಲೂಕಿನ ರಿಪ್ಪನ್​ಪೇಟೆಯಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಅವರು, ಪತ್ನಿ ಗೀತಾ ಜೊತೆ ರೋಡ್ ಶೋನಲ್ಲೂ ಭಾಗಿಯಾದರು. 'ಎಲ್ಲೋ ಜೋಗಪ್ಪ ನಿನ್ನ ಅರಮನೆ' ಹಾಗೂ 'ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ' ಹಾಡುಗಳನ್ನು ಹಾಡಿದ ಶಿವರಾಜಕುಮಾರ್, ಅಭಿಮಾನಿಗಳನ್ನು ರಂಜಿಸಿದರು.

ಹೊಸನಗರದ ಗವಟೂರಿನಿಂದ ರಿಪ್ಪನ್​ಪೇಟೆವರೆಗೂ ತೆರೆದ ವಾಹನದಲ್ಲಿ ಸಾಗಿದ ಗೀತಾ-ಶಿವರಾಜಕುಮಾರ್​ ರೋಡ್​ ಶೋನಲ್ಲಿ, ಸಾವಿರಾರು ಕಾರ್ಯಕರ್ತರು ಬೈಕ್​ನಲ್ಲಿ ಜೊತೆಯಾದರು. ಶಿವಣ್ಣ ದಂಪತಿ ಜೊತೆ ಮಧು ಬಂಗಾರಪ್ಪ, ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ, ಕಲಗೋಡು ರತ್ನಾಕರ್ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net