

Shivanna : ಗ್ಲೋಬಲ್ ಸ್ಟಾರ್ ರಾಮ್ ಚರಣ್ ಹೀರೋ ಆಗಿ ನಟಿಸುತ್ತಿರುವ ಪೆದ್ದಿ ಚಿತ್ರತಂಡ, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಹುಟ್ಟುಹಬ್ಬಕ್ಕೆ ಶುಭ ಕೋರಿದೆ. ಸಿನಿಮಾದಲ್ಲಿ ಗೌರ್ ನಾಯ್ಡು ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ ನಟಿಸುತ್ತಿದ್ದು, ಶಿವಣ್ಣ ಅವರ ಫಸ್ಟ್ ಲುಕ್ ಅನ್ನೂ ಬಿಡುಗಡೆ ಮಾಡಲಾಗಿದೆ. ಪೆದ್ದಿ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪವರ್ ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಖಟಕ್ ಲುಕ್, ದಪ್ಪ ಮೀಸೆ ಹಾಗೂ ರಗಡ್ ಆಗಿ ಶಿವಣ್ಣ ಕಾಣಿಸಿಕೊಂಡಿದ್ದಾರೆ.
ಉಪ್ಪೇನ ನಿರ್ದೇಶಕ ಬುಚ್ಚಿಬಾಬು ಸನಾ ನಿರ್ದೇಶನದ ಪೆದ್ದಿ ಸ್ಫೋರ್ಟ್ ಆಕ್ಷನ್ ಡ್ರಾಮಾ ಕಥಾಹಂದರವೊಂದಿದೆ. ಈ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ, ಇದು ತೆಲುಗು ಚಿತ್ರರಂಗದಲ್ಲಿ ಅವರ ಎರಡನೇ ಮಹತ್ವದ ಪಾತ್ರವಾಗಿದ್ದು, ರಾಮ್ ಚರಣ್ ಮತ್ತು ಶಿವರಾಜ್ ಕುಮಾರ್ ಅವರೊಂದಿಗೆ ಅನುಭವಿ ಕಲಾವಿದರಾದ ದಿವ್ಯೇಂದು ಶರ್ಮಾ ಮತ್ತು ಜಗಪತಿ ಬಾಬು ಪೋಷಕ ಪಾತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಎ.ಆರ್. ರೆಹಮಾನ್ ಸಂಗೀತ, ಖ್ಯಾತ ಛಾಯಾಗ್ರಾಹಕ ಆರ್. ರತ್ನವೇಲು ದೃಶ್ಯ ನಿರ್ವಹಣೆ ಸೇರಿ, ಚಿತ್ರವು ಅತ್ಯುತ್ತಮ ತಾಂತ್ರಿಕ ತಂಡವನ್ನು ಹೊಂದಿದೆ.
(ಏಜೆನ್ಸೀಸ್)
ಸದ್ಯ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷ ರಾಮ್ ಚರಣ್ ಹುಟ್ಟುಹಬ್ಬ ಅಂಗವಾಗಿ ಅಂದರೆ ಮಾರ್ಚ್ 27, 2026 ರಂದು ಬಹುಭಾಷಾಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.