5 ವರ್ಷಗಳ ಬಳಿಕ ಟಾಲಿವುಡ್​ಗೆ ಸೌತ್​ ಬ್ಯೂಟಿ! ಮಲಯಾಳಂ ನಟನ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿ? | Pooja Hegde

ವಿಜಯವಾಣಿ (47)
Published on

Pooja Hegde: ಸ್ಟೈಲಿಶ್​ ಸ್ಟಾರ್ ಅಲ್ಲು ಅರ್ಜುನ್​ ಜತೆಗೆ ‘ಅಲಾ ವೈಕುಂಠಪುರಮುಲೋ’, ‘ಡಿಜೆ ದುವ್ವಾಡ ಜಗನ್ನಾಥಂ’ ಸೇರಿದಂತೆ ಇತ್ತೀಚೆಗೆ ತೆರೆಕಂಡ ರೆಟ್ರೋ ಚಿತ್ರಗಳಲ್ಲಿ ನಟಿಸಿ, ಮಿಂಚಿ, ಅಭಿಮಾನಿಗಳಿಂದ ಸೈ ಎನಿಸಿಕೊಂಡ ಕರಾವಳಿ ಬೆಡಗಿ, ಸೌತ್​ ಬ್ಯೂಟಿ ಪೂಜಾ ಹೆಗ್ಡೆ ಸದ್ಯ ತಮ್ಮ ಮುಂಬರುವ ಚಿತ್ರಗಳ ಚಿತ್ರೀಕರಣದಲ್ಲಿ ಸಖತ್ ಬಿಜಿಯಾಗಿದ್ದಾರೆ.

ಇತ್ತೀಚೆಗಷ್ಟೇ ತಮಿಳು ನಟ ಸೂರ್ಯ ಜತೆಗೆ ರೆಟ್ರೋ ಚಿತ್ರದಲ್ಲಿ ಕಾಣಿಸಿಕೊಂಡ ಪೂಜಾ, ತಮ್ಮ ಪಾತ್ರ ಹಾಗೂ ಸರಳ ಅಭಿನಯದಿಂದಲೇ ಸಿನಿಪ್ರಿಯರ ಹೃದಯ ಗೆದ್ದಿದ್ದಾರೆ. ಈ ಕುರಿತು ನೆಟ್ಟಿಗರು ಕೂಡ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ, ಅನಿಸಿಕೆ ಮತ್ತು ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದರು. ಸದ್ಯ ತಮ್ಮ ಮುಂದಿನ ಚಿತ್ರಗಳ ಕೆಲಸಗಳಲ್ಲಿ ತೊಡಗಿರುವ ನಟಿ, ಇದೀಗ ಐದು ವರ್ಷಗಳ ಬಳಿಕ ಟಾಲಿವುಡ್​ಗೆ ರೀ-ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ತೆಲುಗು ಚಿತ್ರರಂಗದಿಂದ ಸಿನಿ ಕರಿಯರ್​ ಆರಂಭಿಸಿದ ಸೌತ್​​ ಬ್ಯೂಟಿ, ಈಗ ಮಲಯಾಳಂನ ಸ್ಟಾರ್​ ನಟನೊಂದಿಗೆ ತೆಲುಗು ಅಂಗಳಕ್ಕೆ ಮರುಳುತ್ತಿರುವುದು ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. 2024ರಲ್ಲಿ ತೆರೆಕಂಡ ಮಹೇಶ್ ಬಾಬು ಅಭಿನಯದ 'ಗುಂಟೂರು ಕಾರಂ' ಚಿತ್ರದಲ್ಲಿ ನಾಯಕಿಯಾಗಿ ಪೂಜಾ ನಟಿಸಬೇಕಿತ್ತು. ಆದರೆ, ಅದು ಅಂದುಕೊಂಡಂತೆ ನಡೆಯಲಿಲ್ಲ. ಅಲ್ಲಿಂದ ತಮಿಳು, ಬಾಲಿವುಡ್​ ಚಿತ್ರಗಳತ್ತ ಗಮನ ಹರಿಸಿದ ಪೂಜಾ ಹೆಗ್ಡೆ, ಈಗ ಲವ್​ಸ್ಟೋರಿ ಚಿತ್ರದ ಮೂಲಕ ಟಾಲಿವುಡ್​ಗೆ ಕಮ್​ಬ್ಯಾಕ್​ ಮಾಡಲಿದ್ದಾರೆ ಎನ್ನಲಾಗಿದೆ.

ಮಾಲಿವುಡ್​ ನಟ ದುಲ್ಕರ್ ಸಲ್ಮಾನ್ ಜೊತೆ ತೆಲುಗು ಚಿತ್ರವೊಂದರಲ್ಲಿ ನಟಿಸಲು ಪೂಜಾ ಮಾತುಕತೆಯಲ್ಲಿ ತೊಡಗಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ. ಇದೊಂದು ನವೀರಾದ ಪ್ರೇಮಕಥೆಯಾಗಿದ್ದು, ರವಿ ಎಂಬ ಹೊಸ ನಿರ್ದೇಶಕರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಇದು ಅವರ ಚೊಚ್ಚಲ ನಿರ್ದೇಶನ ಎಂಬುದು ಗಮನಾರ್ಹ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net