ವಿಜಯ್​ 'ದಳಪತಿ 69' ಸಿನಿಮಾದಲ್ಲಿ ಶಿವಣ್ಣ! ತಮಿಳಿನಲ್ಲಿ ಮತ್ತೆ ಕಮಾಲ್​​ ಮಾಡಲಿದ್ದಾರೆ ಹ್ಯಾಟ್ರಿಕ್ ಹೀರೋ Shiva Rajkumar

Shiva Rajkumar
Published on

ಬೆಂಗಳೂರು: ಶಿವರಾಜಕುಮಾರ್​ ನಟನೆಯ ಭೈರತಿ ರಣಗಲ್​ ಸಿನಿಮಾ ಇದೇ ಗುರುವಾರ (ನ.14) ಬಿಡುಗಡೆಯಾಗಲಿದೆ. ಇದೇ ಖುಷಿಯಲ್ಲಿ ಇರುವ ಶಿವಣ್ಣ (Shiva Rajkumar) ಸಂದರ್ಶನವೊಂದರಲ್ಲಿ ವಿಜಯ್​ ದಳಪತಿ 69 ಸಿನಿಮಾದಲ್ಲಿ ನನಗೊಂದು ಬಹುದೊಡ್ಡ ಪಾತ್ರ ನೀಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ತಮಿಳು ನಟ ವಿಜಯ್​ ಅವರ ಜತೆ ಸಿನಿಮಾ ಇದೆ. ವಿಜಯ್​ ಅದ್ಭುತ ನಟ ಮತ್ತು ಒಳ್ಳೆಯ ವ್ಯಕ್ತಿತ್ವ ಹೊಂದಿದ ಮನುಷ್ಯ. ರಾಜಕೀಯದಲ್ಲಿ ಕಾಲಿಟ್ಟಿದ್ದು, ಅವರ ಮಹತ್ವಾಕಾಂಕ್ಷೆ ಈಡೇರಲಿ ಎಂದು ವಿಜಯ್​ ಬಗ್ಗೆ ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೂಪರ್​ ಸ್ಟಾರ್​ ರಜನಿಕಾಂತ್​ ಜತೆ 'ಜೈಲರ್' ಮತ್ತು ಧನುಷ್​ ಅಭಿನಯದ 'ಕ್ಯಾಪ್ಟನ್​ ಮಿಲ್ಲರ್​'​ ಚಿತ್ರದಲ್ಲಿ ಶಿವಣ್ಣ ಈ ಹಿಂದೆ ನಟಿಸಿದ್ದರು. ಈಗ ಮತ್ತೊಮ್ಮೆ ವಿಜಯ್​ ದಳಪತಿ ಜತೆ ಸ್ಕ್ರಿನ್​ ಶೇರ್​ ಮಾಡಿಕೊಳ್ಳಲಿದ್ದಾರೆ.

ವಿಜಯ್​ ಅಭಿನಯಸುತ್ತಿರುವ ಈ ಚಿತ್ರಕ್ಕೆ ತಾತ್ಕಾಲಿಕವಾಗಿ 'ದಳಪತಿ 69' ಎಂದು ಹೆಸರು ಇಡಲಾಗಿದೆ. ಕೆ.ವಿಎನ್​ ಪ್ರೊಡಕ್ಷನ್​ ನಿರ್ಮಾಣವಾಗುತ್ತಿರು ಈ ಚಿತ್ರಕ್ಕೆ ಎಚ್​.ವಿನೋತ್​ ನಿರ್ದೇಶಿಸಲಿದ್ದಾರೆ. ಪೂಜಾ ಹೆಗ್ಡೆ ನಾಯಕ ನಟಿಯಾಗಿ ಬಣ್ಣ ಹಚ್ಚಲಿದ್ದು, ಬಾಬಿ ಡಿಯೋಲ್​, ಪ್ರಕಾಶ್​ ರಾಜ್​, ನರೇನ್​, ಗೌತಮ್​ ಮೆನನ್​, ಪ್ರಿಯಾಮಣಿ ಪೋಷಕ ಪಾತ್ರದಲ್ಲಿ ನಟಿಸಲಿದ್ದಾರೆ. ಚಿತ್ರಕ್ಕೆ ಅನಿರುದ್ದ್ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಈ ಚಿತ್ರ 2025 ರ ಡಿಸೆಂಬರ್​ನಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗಿದೆ.

ಇನ್ನು ವಿಜಯ್​ ದಳಪತಿ ಇತ್ತೀಚಿಗಷ್ಟೇ 'ಟಿವಿಪಿ' ಪಕ್ಷ ಸ್ಥಾಪಿಸುವುದರ ಮೂಲಕ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೇ, ಪಕ್ಷದ ಬೃಹತ್​ ಬಹಿರಂಗ ಸಭೆಯಲ್ಲಿ ಚಿತ್ರರಂಗಕ್ಕೆ ಗುಡ್​ ಬೈ ಹೇಳಿರುವುದಾಗಿ ವಿಜಯ್​ ತಿಳಿಸಿದ್ದರು. ಆದರೆ, ಶಿವಣ್ಣ ದಳಪತಿ ಚಿತ್ರದ ಬಗ್ಗೆ ತಿಳಿಸಿದ್ದರಿಂದ, ವಿಜಯ್ ಮತ್ತು ಶಿವಣ್ಣ ಅಭಿಮಾನಿಗಳು ತಮ್ಮ ನೆಚ್ಚಿನ ನಟರನ್ನು ಮತ್ತೊಮ್ಮೆ ಸಿನಿ ಪರದೆ ಮೇಲೆ ಕಣ್ತುಂಬಿಕೊಳ್ಳಬಹುದು ಎಂಬ ಖುಷಿಯಲಿದ್ದಾರೆ. ಅಲ್ಲದೆ, ವಿಜಯ್​ ಅವರ ಕೊನೆ ಸಿನಿಮಾ ಇದೇ ಆಗಿದೆ ಎಂದೇ ಆನೇಕ ಕಡೆ ವಿಶ್ಲೇಷಿಸಲಾಗಿದೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net