70 ವರ್ಷದ ನಟನ ಮೇಲೆ 31 ವರ್ಷದ ನಟಿಗೆ ಲವ್​! Shivangi Verma ಇದೊಂದು ಲವ್ ಸ್ಟೋರಿ..ಎಂದ್ರು ನೆಟ್ಟಿಗರು

Shivangi Verma
Published on

 ಮುಂಬೈ:  ( Shivangi Verma )  31 ವರ್ಷದ ಬಾಲಿವುಡ್ ನಾಯಕಿ ಶಿವಂಗಿ ವರ್ಮಾ 70 ವರ್ಷದ ಗೋವಿಂದ್ ನಾಮದೇವ್ ಎನ್ನುವ ಹಿರಿಯ ನಟನನ್ನು ಪ್ರೀತಿಸುತ್ತಿದ್ದಾಳೆ. ಅವರೊಂದಿಗಿನ ಫೋಟೋವನ್ನು ಸೋಶಿಯಲ್​​  ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಲವಾಗಿ ಸುದ್ದಿಯಾಗಿದ್ದಾರೆ.

31 ವರ್ಷದ ನಟಿ ಶಿವಂಗಿ ವರ್ಮಾ ಅವರು ಜನಪ್ರಿಯ ನಟ ಗೋವಿಂದ್ ನಾಮದೇವ್ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಫೋಟೋವನ್ನು ಶೇರ್ ಮಾಡುತ್ತಾ, "ಪ್ರೀತಿಗೆ ವಯಸ್ಸಿಲ್ಲ, ಮಿತಿಯಿಲ್ಲ" ಎಂದು ಬರೆದಿದ್ದಾರೆ. ಈ ಫೋಟೋವನ್ನು ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಕ್ಕಾಗಿ ನೆಟಿಜನ್‌ಗಳು ಟ್ರೋಲ್ ಮಾಡುತ್ತಿದ್ದಾರೆ.

ಹಣವೇ ಮುಖ್ಯ .. ನೀವಿಬ್ಬರೂ ಪ್ರೀತಿಸುತ್ತಿದ್ದೀರಿ ಸರಿ... ನೀವಿಬ್ಬರೂ ಮದುವೆಯಾಗಲಿದ್ದೀರಾ..?.. ಹಣವಿದ್ದರೆ ವಯಸ್ಸು, ಮಿತಿ ಇಲ್ಲ ಎಂದು ನೆಟ್ಟಿಗರು ಕಾಮೆಂಟ್​​ ಮಾಡುವ ಮೂಲಕವಾಗಿ ಟ್ರೋಲ್ ಮಾಡುತ್ತಿದ್ದಾರೆ. ಆದರೆ ಮತ್ತೊಂದೆಡೆ ಶಿವಾಂಗಿಯ ಪೋಸ್ಟ್ ಕೇವಲ ಪ್ರಚಾರದ ಸ್ಟಂಟ್ ಆಗಿದೆ ಎಂದು ಕೂಡ ಹೇಳಲಾಗುತ್ತಿದೆ.

ಇವರಿಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ಬರಲಿದೆ ಎನ್ನಲಾಗುತ್ತಿದೆ. ಶಿವಂಗಿ ಮತ್ತು ಗೋವಿಂದ್ ನಾಮದೇವ್ ತಮ್ಮ ಮೇಲೆ ಬರುತ್ತಿರುವ ಟ್ರೋಲಿಂಗ್‌ಗೆ ಪ್ರತಿಕ್ರಿಯಿಸಲಿಲ್ಲ. ಗೋವಿಂದ್ ನಾಮದೇವ್ ಅವರು ಬಾಲಿವುಡ್ ಜನಪ್ರಿಯ ನಟರಾಗಿದ್ದು, ಅವರು ಅನೇಕ ಚಲನಚಿತ್ರಗಳಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸಿದ್ದಾರೆ. 'ಬ್ಯಾಂಡಿಟ್ ಕ್ವೀನ್', 'ಸರ್ಫರೋಶ್' ಮತ್ತು 'ಸತ್ಯ' ಮುಂತಾದ ಸಿನಿಮಾಗಳ ಮೂಲಕ ಅವರು ಪ್ರಸಿದ್ಧರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net