ಶಿವಮೂರ್ತಿ ನಿಧನ ರೈತರಿಗೆ ಆಘಾತ: ಬಸವರಾಜಪ್ಪ ಕಂಬನಿ

raita sangha
ಶಿವಮೊಗ್ಗ ರೈತ ಸಂಘದ ಕಚೇರಿಯಲ್ಲಿ ಎಸ್.ಶಿವಮೂರ್ತಿ ಸ್ಮರಣಾರ್ಥ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು. ಎಚ್.ಆರ್.ಬಸವರಾಜಪ್ಪ, ಡಾ.ಬಿ.ಎಂ.ಚಿಕ್ಕಸ್ವಾಮಿ, ಇ.ಬಿ.ಜಗದೀಶ್, ಎಂ.ಮಂಜಪ್ಪ, ಟಿ.ಎಂ.ಚಂದ್ರಪ್ಪ, ಎಂ.ಡಿ.ನಾಗರಾಜ್ ಇತರರಿದ್ದರು.
Published on

ಶಿವಮೊಗ್ಗ: ಕಳೆದ 30 ವರ್ಷಗಳಿಂದ ರೈತ ಸಂಘದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿ ಜಿಲ್ಲಾಧ್ಯಕ್ಷರಾಗಿದ್ದ ಎಸ್.ಶಿವಮೂರ್ತಿ ರೈತರಪರ ಅಪಾರ ಕಾಳಜಿ ಹೊಂದಿದ್ದರು. ಅವರ ನಿಧನದಿಂದ ಸಂಘಟನೆ ಹಾಗೂ ರೈತರಿಗೆ ದೊಡ್ಡ ಆಘಾತವಾಗಿದೆ ಎಂದು ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.

ಶಿವಮೂರ್ತಿ ನಿಧನದ ಹಿನ್ನೆಲೆಯಲ್ಲಿ ಮಂಗಳವಾರ ರೈತ ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ರೈತ ಸಂಘಟನೆಯಲ್ಲಿ ಗ್ರಾಮ, ತಾಲೂಕು, ಜಿಲ್ಲಾ ಪದಾಧಿಕಾರಿಯಾಗಿ ಅವರು ಕಾರ್ಯನಿರ್ವಹಿಸಿದ್ದರು. ಎಲ್ಲ ರೈತಪರ ಹೋರಾಟಗಳಲ್ಲಿ ಕೈಜೋಡಿಸುತ್ತಿದ್ದರು. ರೈತರು ಹಾಗೂ ಜನಸಾಮಾನ್ಯರ ಬಗ್ಗೆ ಅವರಿಗೆ ಅಪಾರ ಕಾಳಜಿಯಿತ್ತು ಎಂದರು.
ರೈತ ಮುಖಂಡರಾದ ಡಾ. ಬಿ.ಎಂ ಚಿಕ್ಕಸ್ವಾಮಿ, ಟಿ.ಎಂ.ಚಂದ್ರಪ್ಪ, ಈಶಣ್ಣ, ಇ.ಬಿ.ಜಗದೀಶ್, ಪಿ.ಡಿ.ಮಂಜಪ್ಪ, ಕೆ.ರಾಘವೇಂದ್ರ, ಎಂ.ಮಹೇಶ್ವರಪ್ಪ, ಜಯಣ್ಣ, ಎಂ.ಮಂಜಪ್ಪ, ಪಿ.ಶೇಖರಪ್ಪ, ಗುರುಶಾಂತ, ಎಂ.ಡಿ.ನಾಗರಾಜ್ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net