ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಶಿವಮೊಗ್ಗದ ನವಮಿ

india book of record s.r.navami
Published on

ಶಿವಮೊಗ್ಗ: ನಗರದ ಗಾಂಧಿಬಜಾರ್ ನಿವಾಸಿ ಎಸ್.ಆರ್.ಗಣೇಶ್ ನಾಗ್ ಮತ್ತು ಎನ್.ವಿಜಯಾ ದಂಪತಿ ಪುತ್ರಿ 2.2 ವರ್ಷದ ಎಸ್.ಆರ್.ನವಮಿ ಜ್ಞಾಪಕ ಶಕ್ತಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆ ಆಗಿದ್ದಾಳೆ. 14 ವಿವಿಧ ವಿಷಯಗಳನ್ನು ಸರಾಗವಾಗಿ ಹೇಳುವ ಮೂಲಕ ವಿಶೇಷ ಸಾಧನೆ ಮಾಡಿದ್ದಾಳೆ.

ಶಿವಮೊಗ್ಗ ಜಿಲ್ಲೆಯ 9 ಆಕಾರಗಳು, 7 ಉಪ ಜಿಲ್ಲೆ (ತಾಲೂಕು)ಗಳು, 12 ರಾಶಿಚಕ್ರ ಚಿಹ್ನೆಗಳು, 9 ರಾಶಿಚಕ್ರ ಕಲ್ಲುಗಳು, 20 ವೃತ್ತಿಗಳು, ಕನ್ನಡ ವರ್ಣಮಾಲೆಯ 48 ಅಕ್ಷರಗಳು, 16 ಹಣ್ಣುಗಳು, 26 ದೇಹದ ಭಾಗಗಳು, 15 ವಾಹನಗಳು, 8 ಬಣ್ಣಗಳು, 14 ದೇಶೀಯ ಮತ್ತು 16 ಕಾಡು ಪ್ರಾಣಿಗಳನ್ನು ಗುರುತಿಸಿ, ಹೇಳುವ ಮೂಲಕ ಐಬಿಆರ್ ಸಾಧಕಿ ಬಿರುದು ಪಡೆದಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net