ಸಾಂಸ್ಕೃತಿಕ ಅರಿವು ಮೂಡಿಸುವ ದೇಶೀಯ ಕಲೆ ಯಕ್ಷಗಾನ

22 tth patla
ಯಕ್ಷಧ್ರುವ ಪಟ್ಲ ೌಂಡೇಷನ್ ಟ್ರಸ್ಟ್ ಕಮ್ಮರಡಿಯ ವಾರ್ಷಿಕೋತ್ಸವದಲ್ಲಿ ಹರಿಕಥೆ ವೆಂಕಟೇಶ ದಾಸರು ಹಾಗೂ ಶ್ರಮಜೀವಿ ಆನಂದ ಪೂಜಾರಿ ಅವರನ್ನು ಗೌರವಿಸಲಾಯಿತು. ಡಾ. ಪ್ರಕಾಶ್ ಕಮ್ಮರಡಿ, ಪಟ್ಲ ಸತೀಶ್ ಶೆಟ್ಟಿ ಇತರರಿದ್ದರು.
Published on

ತೀರ್ಥಹಳ್ಳಿ: ಭಾರತೀಯ ಸಾಂಸ್ಕೃತಿಕ ಪರಂಪರೆ ಅರಿವು ಮೂಡಿಸಲು ಅಪ್ಪಟ ದೇಶೀಯ ಕಲೆ ಯಕ್ಷಗಾನವು ಅತ್ಯಂತ ಶ್ರೇಷ್ಠ ಮಾಧ್ಯಮವಾಗಿದೆ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಪ್ರಕಾಶ್ ಕಮ್ಮರಡಿ ಹೇಳಿದರು.

ಯಕ್ಷಧ್ರುವ ಪಟ್ಲ ೌಂಡೇಷನ್ ಟ್ರಸ್ಟ್ ಕಮ್ಮರಡಿಯ 3ನೇ ವಾರ್ಷಿಕೋತ್ಸವ ಅಂಗವಾಗಿ ಕಮ್ಮರಡಿಯ ಸುಭಾಷ್‌ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಏರ್ಪಡಿಸಿದ್ದ ಶನೈಶ್ಚರ ಮಹಾತ್ಮೆ ಯಕ್ಷಗಾನ ಪ್ರದರ್ಶನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಯಕ್ಷಗಾನ ಅಪ್ಪಟ ದೇಶೀಯ ಕಲೆಯಾಗಿದ್ದು, ದೇಶದ ಸಾಂಸ್ಕೃತಿಕ ಹಿರಿಮೆಯ ಸಂಪತ್ತಾಗಿದೆ ಎಂದು ತಿಳಿಸಿದರು.

ಯಕ್ಷಧ್ರುವ ಪಟ್ಲ ೌಂಡೇಷನ್ ಟ್ರಸ್ಟ್ ಸ್ಥಾಪಕ, ಯಕ್ಷಗಾನ ಭಾಗವತ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಭಾರತದ ಸಂಸ್ಕೃತಿಯ ಬೇರನ್ನು ಉಳಿಸಲು ೌಂಡೇಷನ್ ನಿರಂತರವಾಗಿ ಶ್ರಮಿಸುತ್ತಿದ್ದು, ಈವರೆಗೆ 16 ಕೋಟಿ ರೂ. ವೆಚ್ಚದಲ್ಲಿ ಸಂಕಷ್ಟದಲ್ಲಿರುವ ಯಕ್ಷಗಾನ ಹರಿಕಥೆ, ಕಂಬಳ, ದೈವ ಪಾತ್ರಿ ಹುಲಿವೇಷ ಮುಂತಾದ ಜಾನಪದ ಕಲೆಗಳ ಕಲಾವಿದರ ಬದುಕಿಗೆ ಭದ್ರತೆ ಒದಗಿಸಿದೆ. ಕರೊನಾ ವೇಳೆ ನೂರಾರು ಕಲಾವಿದರ ಕುಟುಂಬಗಳಿಗೆ ನೆರವಾಗಿದೆ. ಕಲೆ ಉಳಿಸಿ ಬೆಳೆಸಲು ಸಹಸ್ರಾರು ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದಲ್ಲಿ ತರಬೇತುದಾರರನ್ನು ನೇಮಿಸಿ ಉಚಿತವಾಗಿ ಯಕ್ಷಗಾನ ತರಬೇತಿ ನೀಡುತ್ತಿದ್ದೇವೆ ಎಂದರು.

ಪತ್ರಕರ್ತ ನಗರ ರಾಘವೇಂದ್ರ ಮಾತನಾಡಿ, ಕಲಾವಿದರ ಬದುಕಿಗೆ ಸ್ವಾಭಿಮಾನದ ಬದುಕು ನೀಡಿರುವ ಯಕ್ಷಧ್ರುವ ಪಟ್ಲ ೌಂಡೇಷನ್ ಟ್ರಸ್ಟ್ ವೈದ್ಯಕೀಯ ವೆಚ್ಚ, ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು, 80ಕ್ಕೂ ಹೆಚ್ಚು ಕಲಾವಿದರಿಗೆ ಮನೆ ನಿರ್ಮಿಸಿಕೊಟ್ಟಿರುವುದು ಗಮನಾರ್ಹ ಸಂಗತಿ ಎಂದು ಹೇಳಿದರು. ಕಮ್ಮರಡಿ ಘಟಕದ ಗೌರವಾಧ್ಯಕ್ಷ ಕಿಮ್ಮನೆ ಆದಿತ್ಯ, ಸತೀಶ್ ರೈ, ಕರಾವಳಿ ಪೊಲೀಸ್ ಪಡೆ ಮುಖ್ಯಸ್ಥ ಮಿಥುನ್‌ಕುಮಾರ್, ಶೇಷಾದ್ರಿ ಭಟ್ ಅರಮನೆತೋಟ, ಶೇಖರ್, ರಾಜಶೇಖರ್, ಶಿಕ್ಷಕ ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net