ತ್ರಿಣಿವೆ ಸಂಘದ ಅಧ್ಯಕ್ಷರಾಗಿ ವಿದ್ಯಾಧರ ಆಯ್ಕೆ

26hos2p thrinive
ತ್ರಿಣಿವೆ ಸಹಕಾರ ಸಂಘದ ಅಧ್ಯಕ್ಷ ಗುರುಶಕ್ತಿ ವಿದ್ಯಾಧರ ಮತ್ತು ಉಪಾಧ್ಯಕ್ಷ ಲಕ್ಷ್ಮಣ್ ಗೌಡ ಅವರನ್ನು ಸನ್ಮಾನಿಸಲಾಯಿತು. ಎನ್.ಆರ್.ವರುಣ್, ಆರ್.ರಾಜಕುಮಾರ್, ಟಿ.ಎನ್.ಶ್ರೀಪತಿ, ರಾಜಶ್ರೀ ಎಸ್.ರಾವ್, ಜಿ.ಎನ್.ಸುಧೀರ್, ಹಾಲಮ್ಮ, ವಿಜಯಲಕ್ಷ್ಮೀ ಇತರರಿದ್ದರು.
Published on

ಹೊಸನಗರ: ತಾಲೂಕಿನ ನಾಗರಕೊಡಿಗೆಯ ತ್ರಿಣಿವೆ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಗುರುಶಕ್ತಿ ವಿದ್ಯಾಧರ ಮತ್ತು ಉಪಾಧ್ಯಕ್ಷರಾಗಿ ಎಸ್.ಡಿ.ಲಕ್ಷ್ಮಣ್ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದ ಎಲ್ಲ 12 ನಿರ್ದೇಶಕರು ಅವಿರೋಧ ಆಯ್ಕೆಯಾದರು. ಚುನಾವಣೆ ಪ್ರಕ್ರಿಯೆಯಲ್ಲಿ ಗುರುಶಕ್ತಿ ವಿದ್ಯಾಧರ್ ನಾಲ್ಕನೇ ಬಾರಿ ಅಧ್ಯಕ್ಷರಾಗಿ, ಲಕ್ಷ್ಮಣ್ ಗೌಡ ಮೂರನೇ ಬಾರಿ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.

ಸಾಲಗಾರರ ಕ್ಷೇತ್ರದಿಂದ ಎನ್.ಆರ್.ವರುಣ್, ಆರ್.ರಾಜಕುಮಾರ್, ಟಿ.ಎನ್.ಶ್ರೀಪತಿ, ರಾಜಶ್ರೀ ಎಸ್. ರಾವ್, ಜಿ.ಎನ್.ಸುಧೀರ್, ಹಾಲಮ್ಮ, ವಿಜಯಲಕ್ಷ್ಮೀ, ಎಸ್.ಎನ್.ಗುರುರಾಜ, ಎಸ್.ಎಂ.ವಿನಾಯಕ, ಎಚ್.ಪಿ.ಉದಯಗೌಡ, ಲಕ್ಷ್ಮಣ್ ಗೌಡ, ಸಾಲಗಾರರಲ್ಲದ ಕ್ಷೇತ್ರದಿಂದ ಗುರುಶಕ್ತಿ ವಿದ್ಯಾಧರ, ಅವಿರೋಧ ಆಯ್ಕೆಯಾದರು. ಎಸ್.ಎಂ.ವಿನಾಯಕ, ವಿಜಯಲಕ್ಷ್ಮೀ, ಉದಯ ಗೌಡ, ಗುರುರಾಜ ನೂತನ ನಿರ್ದೇಶಕರಾಗಿದ್ದಾರೆ.

ತ್ರಿಣಿವೆ ಸಹಕಾರ ಸಂಘದ ನೂತನ ಅಧ್ಯಕ್ಷ, ಶಿಮುಲ್ ಅಧ್ಯಕ್ಷ ಗುರುಶಕ್ತಿ ವಿದ್ಯಾಧರ್ ಮಾತನಾಡಿ, 75 ವರ್ಷಗಳಿಂದ ಸಂಘದಲ್ಲಿ ಒಮ್ಮೆಯೂ ಚುನಾವಣೆ ನಡೆಯದೇ ಪ್ರತಿ ಬಾರಿ ಅವಿರೋಧವಾಗಿ ಆಡಳಿತ ಮಂಡಳಿ ರಚನೆಯಾಗುತ್ತಿರುವುದು ರಾಜ್ಯದಲ್ಲಿಯೇ ವಿಶೇಷ ಸಾಧನೆ ಎಂದು ಹೇಳಿದರು.

1949ರಲ್ಲಿ 1,900 ಷೇರು ಬಂಡವಾಳದೊಂದಿಗೆ ಆರಂಭಗೊಂಡ ಸಂಘ ಪ್ರಸ್ತುತ 90 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿದೆ. 28 ಕೋಟಿ ರೂ. ಠೇವಣಿ ಸಂಗ್ರಹಿಸಿ, 25 ಕೋಟಿ ರೂ. ಸಾಲ ನೀಡಿದೆ. ಬೆಳೆ ಸಾಲ, ಕೃಷಿ ಸಾಲ, ವಾಹನ ಸಾಲ, ಅಡಮಾನ ಸಾಲ, ಖಾತೆ ಮೇಲಿನ ಸಾಲ ಸೇರಿ ವಿವಿಧ ಬಗೆ ಸಾಲ ಸೌಲಭ್ಯಗಳನ್ನು ನೀಡಿ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.

ಚುನಾವಣಾಧಿಕಾರಿಯಾಗಿ ತೋಟಗಾರಿಕೆ ಸಹಾಯಕ ನಿರ್ದೇಶಕ ಕರಿಬಸವನಾಯ್ಕ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಗ್ರಾಮಸ್ಥರಾದ ಗಣೇಶ್‌ಮೂರ್ತಿ, ಬಸಪ್ಪಗೌಡ, ಸಂಘದ ಮಾಜಿ ನಿರ್ದೇಶಕ ಮೂಡಬಾಗಿಲು ರಮಾನಂದ, ಸದಾನಂದ, ಶಶಿಕುಮಾರ್, ಸಾಲಗೇರಿ ಗಣಪತಿ ಭಟ್, ತೊಗರೆ ಪ್ರಸಾದ್ ಭಟ್, ಹರೀಶ್‌ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net