ಮರ ಬಿದ್ದು ಇಬ್ಬರಿಗೆ ಗಾಯ

18sor1
ಸೊರಬ ತಾಲೂಕಿನ ಶಿರಾಳಕೊಪ್ಪ-ಉಳವಿ ರಸ್ತೆಯಲ್ಲಿ ಕ್ಯಾಂಟರ್ ಮೇಲೆ ಮರ ಬಿದ್ದಿರುವುದು.
Published on

ಸೊರಬ: ತಾಲೂಕಿನ ಕರ್ಜಿಕೊಪ್ಪ ಗ್ರಾಮದ ಬಳಿ ಶಿರಾಳಕೊಪ್ಪ-ಉಳವಿ ರಸ್ತೆಯಲ್ಲಿ ಬುಧವಾರ ಬೃಹತ್ ಗಾತ್ರದ ಮರ ಕ್ಯಾಂಟರ್ ಮೇಲೆ ಬಿದ್ದು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಹಿರೇಕೆರೂರು ತಾಲೂಕಿನ ಹದ್ರಿಹಳ್ಳಿ ಗ್ರಾಮದ ಹನುಮಂತಪ್ಪ ಮತ್ತು ವೀರೇಶ್ ಗಾಯಗೊಂಡಿದ್ದು, ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಸಾಗರಕ್ಕೆ ರವಾನಿಸಲಾಗಿದೆ.

ಹಿರೇಕೆರೂರಿನಿಂದ ಉಳವಿ ಗ್ರಾಮಕ್ಕೆ ಗೊಬ್ಬರ ತುಂಬಲು ಕ್ಯಾಂಟರ್ ಹೊರಟಿತ್ತು. ಬಿದ್ದುಹೋಗುವ ಸ್ಥಿತಿಯಲ್ಲಿರುವ ಮರಗಳನ್ನು ಕಡಿಯಬೇಕು ಎಂದು ಅರಣ್ಯ ಇಲಾಖೆಗೆ ಸ್ಥಳೀಯರು ಹಾಗೂ ವಾಹನ ಸವಾರರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net