

ಸಾಗರ: ಉತ್ತಮ ಕೆಲಸ ಮಾಡುವವರಿಗೆ ವಿವಿಧ ಸಹಕಾರ ಸಂಸ್ಥೆಗಳಲ್ಲಿ ಅವಕಾಶ ಕಲ್ಪಿಸಲಾಗುತ್ತಿದ್ದು, ನಂಬಿಕೆ ಮತ್ತು ವಿಶ್ವಾಸದಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಎಪಿಎಂಸಿ ಪ್ರಾಂಗಣದಲ್ಲಿ ಟಿಎಪಿಎಂಸಿಎಸ್‌ಗೆ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಲೋಕನಾಥ್ ಬಿಳಿಸಿರಿ, ಉಪಾಧ್ಯಕ್ಷ ಮಂಜಪ್ಪ ಅವರನ್ನು ಸನ್ಮಾನಿಸಿ ಮಾತನಾಡಿ, ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ಅಭಿವೃದ್ಧಿಗೆ ಎಲ್ಲ ರೀತಿ ಸಹಕಾರ ನೀಡಲಾಗುವುದು. ಡಿಸಿಸಿ ಬ್ಯಾಂಕ್ ಮೂಲಕವೂ ಬೆಂಬಲ ನೀಡಲಾಗುವುದು. ಸಾಗರದಲ್ಲಿ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಎಲ್ಲರೂ ಉತ್ತಮ ಕೆಲಸ ಮಾಡಬೇಕು ಎಂದು ತಿಳಿಸಿದರು.
ಲೋಕನಾಥ್ ಬಿಳಿಸಿರಿ ಮಾತನಾಡಿ, ರೈತರು ಹಿತಕ್ಕಾಗಿ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು. ಚೇತನ್‌ರಾಜ್ ಕಣ್ಣೂರು, ಸೋಮಶೇಖರ ಲ್ಯಾವಿಗೆರೆ, ದಿನೇಶ್, ಎಚ್.ಎಂ.ರವಿಕುಮಾರ್, ಕೆ.ಹೊಳೆಯಪ್ಪ, ಚಂದ್ರಪ್ಪ, ರೂಪಾ ರಮೇಶ್, ಶ್ರೀನಿವಾಸ್, ವೀರೇಶ್ ಬರೂರು, ರಂಗನಾಥ್, ಜ್ಯೋತಿ ಸ್ವಾಮಿ, ರಾಜು ಪಟೇಲ್ ಇತರರಿದ್ದರು.