ದೇಶಭಕ್ತರಿಗೆ ಜನ್ಮ ನೀಡಿದ ಪುಣ್ಯನೆಲ

26 skp 2
ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆಯಲ್ಲಿ ಶಿಕಾರಿಪುರದ ಈಸೂರಿನಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹುತಾತ್ಮರ ಸ್ಮಾರಕವನ್ನು ಸ್ವಚ್ಛಗೊಳಿಸಿದರು. ವೀರನಗೌಡ, ಪ್ರವೀಣ್ ಬೆಣ್ಣೆ, ಲೋಹಿತನಾಯ್ಕ, ನಿರಂಜನ್ ತೊಗರ್ಸಿ ಇತರರಿದ್ದರು.
Published on

ಶಿಕಾರಿಪುರ: ಕಾರ್ಗಿಲ್ ವಿಜಯ ನಮ್ಮ ಸೈನಿಕರ ಸಮರ್ಪಣಾ ಹೋರಾಟದ ಸುದಿನ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಬೆಣ್ಣೆ ಹೇಳಿದರು.

ಕಾರ್ಗಿಲ್ ವಿಜಯ ದಿವಸ ಹಿನ್ನೆಲೆಯಲ್ಲಿ ಶಿಕಾರಿಪುರ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಈಸೂರು ಗ್ರಾಮದಲ್ಲಿ ಹುತಾತ್ಮರ ಸ್ಮಾರಕ ಸ್ವಚ್ಛಗೊಳಿಸಿದರು. ನಂತರ ವೀರ ಯೋಧರಿಗೆ ಗೌರವ ಸಲ್ಲಿಸಿ ಮಾತನಾಡಿ, ದೇಶದಲ್ಲಿ ಮೊದಲ ಬಾರಿ ಸ್ವಾತಂತ್ರೃ ಘೋಷಿಸಿಕೊಂಡ ಗ್ರಾಮ ಈಸೂರು. ದೇಶಭಕ್ತರಿಗೆ ಜನ್ಮ ನೀಡಿದ ಪುಣ್ಯನೆಲ ಎಂದು ತಿಳಿಸಿದರು.

ಕಾರ್ಗಿಲ್ ಯುದ್ಧ ಭಾರತದತ್ತ ಜಗತ್ತಿನ ಗಮನ ಸೆಳೆಯುವಂತೆ ಮಾಡಿತು. ನಮ್ಮ ಸೈನಿಕರು ಹೋರಾಡಿ ಅನೇಕರು ವೀರ ಹುತಾತ್ಮರಾದರು ಎಂದರು. ಯುವ ಮೋರ್ಚಾ ತಾಲೂಕು ಅಧ್ಯಕ್ಷ ವೀರಣ್ಣ ಗೌಡ, ಪ್ರಧಾನ ಕಾರ್ಯದರ್ಶಿ ಲೋಹಿತನಾಯ್ಕ, ನಿರಂಜನ್ ತೊಗರ್ಸಿ, ಪಿಎಲ್‌ಡಿ ಬ್ಯಾಂಕ್ ಸದಸ್ಯರಾದ ಜಗದೀಶ್, ಸುರೇಶ್, ಗಿರೀಶ್, ಪ್ರಶಾಂತ, ರಾಜು, ಮಂಜು, ಚಂದ್ರು ಬಿಳಕಿ, ಹಾಲೇಶ್, ಸುದೀಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net