ಸುಣ್ಣದಹಳ್ಳಿಯಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ

15bdvt1
ಭದ್ರಾವತಿ ಸುಣ್ಣದಹಳ್ಳಿ ಶ್ರೀ ವೀರಾಂಜನೇಯಸ್ವಾಮಿ ರಥೋತ್ಸವವು ಶನಿವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
Published on

ಭದ್ರಾವತಿ: ತಾಲೂಕಿನ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಜಯಘೋಷಗಳೊಂದಿಗೆ ಅದ್ದೂರಿಯಾಗಿ ಜರುಗಿತು. ಮಧ್ಯಾಹ್ನ 1.30ಕ್ಕೆ ವಿವಿಧ ಬಣ್ಣಗಳಿಂದ ಅಲಂಕೃತಗೊಳಿಸಲಾಗಿದ್ದ ರಥದಲ್ಲಿ ಶ್ರೀ ಆಂಜನೇಯ ಸ್ವಾಮಿ ರಜತ ಉತ್ಸವಮೂರ್ತಿ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸುವುದರ ಮೂಲಕ ರಥೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ನೂರಾರು ಭಕ್ತರು ಜೈ ಶ್ರೀರಾಮ್, ಶ್ರೀ ರಾಮ, ಜಯರಾಮ, ಜಯ ಜಯ ರಾಮ ಎಂದು ಕೂಗುತ್ತಾ ರಥವನ್ನೆಳೆದು ಭಕ್ತಿ ಸಮರ್ಪಿಸಿದರು. ಭಕ್ತರು ರಥಕ್ಕೆ ಉತ್ತುತ್ತಿ, ಕಾಳುಮೆಣಸು, ಬಾಳೆಹಣ್ಣುಗಳನ್ನು ಎಸೆಯುವುದರ ಮೂಲಕ ಹರಕೆ ತೀರಿಸಿದರು. ರಥವನ್ನು ದೇವಸ್ಥಾನದ ಪ್ರಾಂಗಣದಿಂದ ಮುಖ್ಯದ್ವಾರದವರೆಗೆ ಎಳೆದು ತಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರಿಗೆ ಸಮಿತಿಯಿಂದ ಪಾನಕ, ಮಜ್ಜಿಗೆ, ಕಲ್ಲುಸಕ್ಕರೆ ನೀಡಲಾಯಿತು. ನಂತರ ಅನ್ನಸಂತರ್ಪಣೆ ನಡೆಸಲಾಯಿತು.

ಸುಣ್ಣದಹಳ್ಳಿ, ಮಾವಿನಕೆರೆ, ಎರೆಹಳ್ಳಿ, ತಾಷ್ಕೆಂಟ್‌ನಗರ, ಮಾರುತಿನಗರ, ಬಸಾಪುರ, ಬಾರಂದೂರು, ಕಾರೇಹಳ್ಳಿ, ಕಾಗದನಗರ ಹಳೇನಗರ ಸೇರಿದಂತೆ ನೂರಾರು ಗ್ರಾಮಸ್ಥರು ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆಯಿಂದ ರಾತ್ರಿವರೆಗೂ ಭಕ್ತರು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net