ಮಣ್ಣಿನ ಪರೀಕ್ಷೆ ಮಾಡಿಸುವುದು ಅವಶ್ಯ

24 TTH 02
ತೀರ್ಥಹಳ್ಳಿಯ ಹೆದ್ದೂರಿನಲ್ಲಿ ಏರ್ಪಡಿಸಿದ್ದ ಕೃಷಿ ಮಾಹಿತಿ ಕಾರ್ಯಾಗಾರವನ್ನು ರೈತರು ಉದ್ಘಾಟಿಸಿದರು. ನವೀನ್ ಹೆದ್ದೂರು, ಡಾ. ರವಿರಾಜ ಶೆಟ್ಟಿ, ಡಾ. ಅಂಜನ್‌ಕುಮಾರ್ ಇತರರಿದ್ದರು.
Published on

ತೀರ್ಥಹಳ್ಳಿ: ಅಡಕೆ ಬೆಳೆಗೆ ತಗುಲಿರುವ ರೋಗಗಳು ಉಲ್ಭಣಗೊಳ್ಳುತ್ತಿರುವುದಕ್ಕೆ ಪೋಷಕಾಂಶ ಕೊರತೆ ಸೇರಿದಂತೆ ಇನ್ನಿತರ ಪ್ರಮುಖ ಕಾರಣಗಳಿವೆ ಎಂದು ಹೆದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನವೀನ್ ಹೆದ್ದೂರು ಹೇಳಿದರು.

ಹೆದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನೆ ಕೇಂದ್ರದಿಂದ ತೀರ್ಥಹಳ್ಳಿ ಹೆದ್ದೂರಿನಲ್ಲಿ ಆಯೋಜಿಸಿದ್ದ ಬೋರ್ಡೊ ದ್ರಾವಣ ತಯಾರಿಕೆ, ಬಳಕೆ, ಅಡಕೆ ಮತ್ತು ಕಾಳುಮೆಣಸು ಬೇಸಾಯ, ನಿರ್ವಹಣೆ ಕುರಿತ ಕೃಷಿ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ರೈತರು ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಅಗತ್ಯವಿದೆ. ತಾಂತ್ರಿಕ ಪ್ರಗತಿ, ಸಂಶೋಧನಾ ಆಧಾರಿತ ಅಭ್ಯಾಸಗಳನ್ನು ಒಳಗೊಂಡಿರುವ ವೈಜ್ಞಾನಿಕ ಕೃಷಿಯು ಕೃಷಿಯಲ್ಲಿ ಉತ್ಪಾದಕ ಮತ್ತು ಸುಸ್ಥಿರ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ತೋಟಗಳ ಮಣ್ಣನ್ನು ಪರೀಕ್ಷಿಸಿ ಅದರ ಆಧಾರದಲ್ಲಿ ಗೊಬ್ಬರ ನೀಡಬೇಕು. ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಮಣ್ಣಿನ ಪರೀಕ್ಷೆ ಮಾಡಿಸಬೇಕು ಎಂದರು.

ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್ ಮಾತನಾಡಿ, ರೈತರು ಸಸ್ಯ ಸಂರಕ್ಷಣಾ ಔಷಧಗಳು, ರಸಗೊಬ್ಬರ ಮತ್ತು ಸಾವಯವ ಗೊಬ್ಬರಗಳನ್ನು ನೋಂದಾಯಿತ ಕೀಟನಾಶಕ ವಿತರಕರ ಬಳಿ ಖರೀದಿಸಬೇಕು ಎಂದರು. ಕೃಷಿ ಮತ್ತು ತೋಟಗಾರಿಕೆ ಸಂಶೋಧನೆ ಕೇಂದ್ರದ ಮುಖ್ಯಸ್ಥ ಡಾ. ರವಿರಾಜ ಶೆಟ್ಟಿ ಹಾಗೂ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಅಂಜನ್‌ಕುಮಾರ್, ಕಾರ್ಯಾಗಾರದಲ್ಲಿ ನೂರಾರು ರೈತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net