

ಹೊಸನಗರ: ಮಕ್ಕಳ ಪ್ರಗತಿಗೆ ಸಹಪಠ್ಯ ಚಟುವಟಿಕೆಗಳು ಅವಶ್ಯ ಎಂದು ಕುವೆಂಪು ವಿದ್ಯಾಸಂಸ್ಥೆ ಆಡಳಿತಧಿಕಾರಿ ಸೊನಲೆ ಶ್ರೀನಿವಾಸ್ ಹೇಳಿದರು.
ಮಕ್ಕಳಿಗೆ ಸಹಪಠ್ಯ ಬೋಧನೆ ಅಂಗವಾಗಿ ಕುವೆಂಪು ವಿದ್ಯಾಶಾಲೆ ಸಭಾಂಗಣದಲ್ಲಿ ಜಿಲ್ಲಾ ಬಾಲಭವನ ಇಲಾಖೆ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಇದರಿಂದ ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಹಕಾರಿಯಾಗುತ್ತದೆ ಎಂದರು.
ಬಾಲಭವನದ ಮಂಜುಳಾ, ಸಾಗರ ಸಖಿ ಕೇಂದ್ರದ ಮುಖ್ಯಸ್ಥೆ ಪ್ರೇಮಾ, ಹೊಸನಗರ ಆರೋಗ್ಯ ಇಲಾಖೆಯ ಕರಿಬಸಮ್ಮ, ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಭವ್ಯಾ, ಚಾಕ್ಷುಷಾ ಸೊನಲೆ, ನಾಗೇಂದ್ರ, ತಾರಾಮತಿ, ನೇತ್ರಾವತಿ ಇದ್ದರು. ವಿದ್ಯಾರ್ಥಿಗಳು ವಿವಿಧ ಕಲಾ ಪ್ರಕಾರ ಮತ್ತು ಕುವೆಂಪು ವಿರಚಿತ ಗೀತೆಗಳನ್ನು ಪ್ರಸ್ತುತಪಡಿಸಿದರು.