

ಆನಂದಪುರ: ಪಟ್ಟಣದ ಪೊಲೀಸ್ ಠಾಣೆ ಎಸ್‌ಐ ಯುವರಾಜ್ ಕಂಬಳಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸನ್ಮಾನಿಸಿ ಬೀಳ್ಕೊಟ್ಟರು.
ಕನ್ನಡ ರಕ್ಷಣಾ ವೇದಿಕೆ ಅಪ್ಪು ಸೇನೆ ಜಿಲ್ಲಾಧ್ಯಕ್ಷ ಗುರುಪ್ರಸಾದ್ ಮಾತನಾಡಿ, ಎರಡು ವರ್ಷಗಳಿಂದ ಯುವರಾಜ್ ಕಂಬಳಿ ಅವರು ಸೇವೆ ಸಲ್ಲಿಸಿದ್ದು, ಎಲ್ಲರೊಂದಿಗೆ ಆತ್ಮೀಯವಾಗಿ ಇದ್ದು, ಪ್ರಾಮಾಣಿಕರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು. ಪರೋಪಕಾರ ಮತ್ತು ಸಮಾಜಸೇವೆ ನಡೆಸುವವರನ್ನು ಬೆಂಬಲಿಸುತ್ತಿದ್ದರು ಎಂದು ತಿಳಿಸಿದರು.
ಅಪ್ಪು ಸೇನೆ ಪದಾಧಿಕಾರಿಗಳಾದ ಇರುವಕ್ಕಿ ಪುಟ್ಟಸ್ವಾಮಿ, ಎಸ್.ಎಂ.ಮಂಜು, ವೀರೇಶ ಮಡವಳ್ಳಿ ಇತರರಿದ್ದರು.