ಮೂಗುಡ್ತಿಯಲ್ಲಿ ಆರ್‌ಎಸ್‌ಎಸ್ ಪಥ ಸಂಚಲನ

9 RPT 1
ರಿಪ್ಪನ್‌ಪೇಟೆ ಸಮೀಪದ ಮೂಗುಡ್ತಿ ಪ್ರಮುಖ ರಸ್ತೆಗಳಲ್ಲಿ ಗಣವೇಷದೊಂದಿಗೆ ಸ್ವಯಂ ಸೇವಕರು ಪಥ ಸಂಚಲನ ನಡೆಸಿದರು.
Published on

ರಿಪ್ಪನ್‌ಪೇಟೆ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಅಂಗವಾಗಿ ಹೆದ್ದಾರಿಪುರ ಮಂಡಲದ ಮೂಗುಡ್ತಿಯಲ್ಲಿ ಸ್ವಯಂ ಸೇವಕರು ಪಥಸಂಚಲನ ನಡೆಸಿದರು.

ಸಭಾ ಕಾರ್ಯಕ್ರಮದಲ್ಲಿ ಬೌದ್ಧಿಕ್ ಪ್ರಮುಖ ಲೋಹಿತಾಶ್ವ ಕೇದಿಗೆರೆ ಮಾತನಾಡಿ, ಜನಸೇವೆಯೊಂದಿಗೆ ಪ್ರಾರಂಭವಾದ ಸಂಘ 100 ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ದೇಶದ ಎಲ್ಲ ಗ್ರಾಮಗಳಲ್ಲಿ ಅಸ್ತಿತ್ವವನ್ನು ಸ್ಥಾಪಿಸಿದೆ. ರಾಷ್ಟ್ರೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತಿದ್ದು, ಜನರು ಸಂಘ ಶಾಖೆಯಲ್ಲಿ ಪಾಲ್ಗೊಂಡು ಶ್ರೇಷ್ಠ ಭಾರತ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.

ಮೂಗುಡ್ತಿ ಪ್ರಮುಖ ರಸ್ತೆಗಳಲ್ಲಿ ಗಣವೇಷದೊಂದಿಗೆ ಸ್ವಯಂಸೇವಕರು ಪಥ ಸಂಚಲನ ನಡೆಸಿದರು. ಶಾಮಸುಂದರ್, ಅಶ್ವಥ್, ಕಿರಣ್, ಆದರ್ಶ, ವಿನಯ್, ವಿಶುಕುಮಾರ್, ರಾಘು, ಅರುಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net