ಶಿವಮೊಗ್ಗ ಗಲಭೆ ಪ್ರಕರಣ: 60 ಮಂದಿಯ ಬಂಧನ, 24 ಎಫ್​ಐಆರ್ ದಾಖಲು

arrest
Published on

ಶಿವಮೊಗ್ಗ: ಭಾನುವಾರ ಸಂಜೆ ನಗರದ ಹೊರವಲಯದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟದ ಬಳಿಕ ಪ್ರಕ್ಷಬ್ಧ ಪರಿಸ್ಥಿತಿ ಉಂಟಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗ ಮತ್ತಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ.

ರಾಗಿಗುಡ್ಡದಲ್ಲಿನ ಈ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರಗತಿಯ ತನಿಖೆ ನಡೆಸುತ್ತಿರುವ ಪೊಲೀಸರು ಇದುವರೆಗೆ ಒಟ್ಟು 24 ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ. ಮಾತ್ರವಲ್ಲ, 60 ಜನರ ಬಂಧನ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತರ ಪೈಕಿ ಕೆಲವು ಆರೋಪಿಗಳನ್ನು ಚಿತ್ರದುರ್ಗ ಜೈಲಿಗೆ, ಕೆಲವು ಆರೋಪಿಗಳನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಬಂಧಿತರಿಂದ ಒಂದು ಕಾರು, ಒಂದು ತ್ರಿಚಕ್ರ ವಾಹನ, ಎರಡು ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಶಿವಮೊಗ್ಗ ಎಸ್​ಪಿ ಜಿ.ಕೆ.ಮಿಥುನ್ ಕುಮಾರ್​ ತಿಳಿಸಿದ್ದಾರೆ.

ಈ ಗಲಭೆಯಲ್ಲಿ ಏಳು ಮನೆಗಳ ಗಾಜು ಪುಡಿಪುಡಿ ಆಗಿದೆ. ಆದರೆ ಬೆಳಗ್ಗೆಯಿಂದ ಇಲ್ಲಿಯವರೆಗೂ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ. 144 ಸೆಕ್ಷನ್ ಇರುವ ಕಾರಣ ಅಹಿತಕರ ಘಟನೆ ನಡೆಯುತ್ತಿಲ್ಲ ಎಂದು ಎಸ್​ಪಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net