ವಚನಗಳಲ್ಲಿ ಮಾನವೀಯ ಮೌಲ್ಯ ಪ್ರತಿಪಾದನೆ

1skp1 ಪುಷ್ಪಾರ್ಚನೆ
ಶಿಕಾರಿಪುರ ಪಟ್ಟಣದಲ್ಲಿ ನವೀಕೃತಗೊಂಡ ಅಕ್ಕಮಹಾದೇವಿ ಪಾರ್ಕ್ ಉದ್ಘಾಟನೆಯಲ್ಲಿ ಶಾಸಕ ಬಿ.ವೈ.ವಿಜಯೇಂದ್ರ ಹಾಗೂ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು. ಕೆ.ಎಸ್.ಗುರುಮೂರ್ತಿ, ಶೈಲಾ ಮಡ್ಡಿ, ಶಿವಾನಂದಪ್ಪ ಇತರರಿದ್ದರು.
Published on

ಶಿಕಾರಿಪುರ: ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿ ಎತ್ತಿದ ಮಹಾಶರಣೆ ಅಕ್ಕಮಹಾದೇವಿ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಪಟ್ಟಣದ ಶಿರಾಳಕೊಪ್ಪ ವೃತ್ತದಲ್ಲಿ ನವೀಕೃತಗೊಂಡ ಶರಣೆ ಅಕ್ಕಮಹಾದೇವಿ ಪಾರ್ಕ್ ಉದ್ಘಾಟಿಸಿ ಮಾತನಾಡಿ, ಅನುಭವ ಮಂಟಪದಲ್ಲಿ ಅಕ್ಕನಿಗೆ ವಿಶಿಷ್ಟವಾದ ಸ್ಥಾನವಿತ್ತು. ಮೌಢ್ಯಗಳನ್ನು ವಿರೋಧಿಸಿ ವಚನಗಳ ಮೂಲಕ ಸಮಾಜಕ್ಕೆ ಸಂದೇಶ ನೀಡಿದರು. ಮಾನವೀಯ ಮೌಲ್ಯ, ಸ್ತ್ರೀ ಸ್ವಾತಂತ್ರೃದ ವಾಸ್ತವ ಅಂಶಗಳನ್ನು ಸಾರಿದರು ಎಂದು ತಿಳಿಸಿದರು.

ವಚನಕಾರರ ಕಾಲಘಟ್ಟದಲ್ಲಿ ಶರಣೆ ಅಕ್ಕಮಹಾದೇವಿಯ ದಿಟ್ಟ ನಡೆ ಎಂದೆಂದಿಗೂ ಪ್ರಸ್ತುತ. ಒಂದೊಂದು ವಚನಗಳಲ್ಲೂ ಮಹತ್ತರ ಜೀವನ ಸಂದೇಶಗಳಿವೆ. ಅಕ್ಕಮಹಾದೇವಿ ವಚನಗಳು ಪ್ರತಿ ಮನೆಯಲ್ಲಿರಬೇಕು. ಅವರ ಸಾಮಾಜಿಕ ಚಿಂತನೆಗಳು ಜನಮನ ತಲುಪಬೇಕು. ಬಿ.ವೈ.ವಿಜಯೇಂದ್ರ ಶಾಸಕ

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಅಕ್ಕನ ಜನ್ಮಸ್ಥಳ ಉಡುಗಣಿಯನ್ನು ದೆಹಲಿ ಅಕ್ಷರಧಾಮ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. 65 ಅಡಿ ಎತ್ತರದ ಅಕ್ಕಮಹಾದೇವಿ ಕಂಚಿನ ಪುತ್ಥಳಿ ನಿರ್ಮಿಸಿದ್ದು, 50ಕ್ಕೂ ಹೆಚ್ಚು ಶರಣ ಶರಣೆಯರ ಮೂರ್ತಿ ನಿರ್ಮಿಸಲಾಗಿದೆ. ಬೋಟಿಂಗ್ ಇತ್ಯಾದಿ ಕಾಮಗಾರಿಗಳು ನಡೆಯುತ್ತಿವೆ ಎಂದರು.

ಅನುದಾನ ಬರದಿರುವ ಕಾರಣ ಸಂಬಂಧಿಸಿದ ಸಚಿವರೊಂದಿಗೆ ಅನುದಾನ ಬಿಡುಗಡೆಗೆ ಚರ್ಚಿಸಿದ್ದೇನೆ. ಉಡುಗಣಿ ತಾಲೂಕಿನ ಅದ್ಭುತ ಪ್ರವಾಸಿ ತಾಣವಾಗಲಿದೆ. ಶಿವಮೊಗ್ಗ-ತಡಸ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವುದರಿಂದ ಪ್ರವಾಸಿಗರ ಆಕರ್ಷಣೆ ಕೇಂದ್ರವಾಗಿ ಉಡುಗಣಿ ಜನಮನ ಸೆಳೆಯಲಿದೆ ಎಂದು ತಿಳಿಸಿದರು.

ಶರಣರು ನುಡಿದಂತೆ ನಡೆದವರು. ಕಾಯಕ, ದಾಸೋಹ, ಸಹಬಾಳ್ವೆ ಸಂದೇಶ ಸಾರಿದರು. ಅವರ ಚಿಂತನೆ ಸಮಾಜಮುಖಿ ಆಗಿದ್ದವು. ಶರಣರ ಚಿಂತನೆಗಳು ಸದಾ ಪ್ರಸ್ತುತವಾಗಿರುತ್ತವೆ ಎಂದರು. ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ದೊಡ್ಡಪೇಟೆ ವೀರಶೈವ ಸಮಾಜದ ಅಧ್ಯಕ್ಷ ಶಿವಾನಂದಪ್ಪ, ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ, ಉಪಾಧ್ಯಕ್ಷೆ ರೂಪಾ ಮಂಜುನಾಥ್, ಸದಸ್ಯರಾದ ರೇಣುಕಸ್ವಾಮಿ, ಪ್ರಶಾಂತ್ ಜೀನಳ್ಳಿ, ಪಾಲಾಕ್ಷಪ್ಪ, ಲಕ್ಷ್ಮೀ ಮಹಾಲಿಂಗಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್.ಬಸವರಾಜ್, ಮಾಜಿ ಅಧ್ಯಕ್ಷ ಚನ್ನವೀರಪ್ಪ, ಸಂತೋಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net