ಉತ್ತಮ ಸೇವೆ ನೀಡುವುದರಿಂದ ಪ್ರಗತಿ ಸಾಧ್ಯ

27sgr2
ಸಾಗರ ಟೌನ್‌ಹೌಸ್ ಬಿಲ್ಡಿಂಗ್ ಸೊಸೈಟಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಗರದ ಗಣಪತಿ ಬ್ಯಾಂಕ್ ಅಧ್ಯಕ್ಷ ಆರ್.ಶ್ರೀನಿವಾಸ್, ಉಪಾಧ್ಯಕ್ಷ ವಿ.ಶಂಕರ್ ಅವರನ್ನು ಅಭಿನಂದಿಸಲಾಯಿತು. ಕೆ.ಸತೀಶ್, ಬಸವರಾಜ್, ಎಸ್.ಬಿ.ರಘುನಾಥ್ ಇತರರಿದ್ದರು.
Published on

ಸಾಗರ: ಗೃಹ ನಿರ್ಮಾಣ, ದುರಸ್ತಿಗೆ ಸಾಲ ಸೌಲಭ್ಯ ಕೊಡುವ ಏಕೈಕ ಸಂಸ್ಥೆ ಹೌಸ್ ಬಿಲ್ಡಿಂಗ್ ಸೊಸೈಟಿಯಾಗಿದ್ದು, ಉತ್ತಮ ಕಾರ್ಯ ನಿರ್ವಹಣೆ ಜತೆಗೆ ಲಾಭದಾಯಕವಾಗಿ ಜಿಲ್ಲೆಯಲ್ಲಿ ಹೆಸರು ಮಾಡಿದೆ ಎಂದು ಗಣಪತಿ ಬ್ಯಾಂಕ್ ಅಧ್ಯಕ್ಷ ಆರ್.ಶ್ರೀನಿವಾಸ್ ಹೇಳಿದರು.

ಸಾಗರ ಟೌನ್‌ಹೌಸ್ ಬಿಲ್ಡಿಂಗ್ ಸೊಸೈಟಿಯಲ್ಲಿ ಸಂಸ್ಥೆಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಉತ್ತಮ ಸೇವೆ ನೀಡಿದಾಗ ಗ್ರಾಹಕರು ಸಂಸ್ಥೆ ಜತೆ ಉತ್ತಮ ಬಾಂಧವ್ಯ ಇರಿಸಿಕೊಳ್ಳುತ್ತಾರೆ. ಸಾಗರದಲ್ಲಿ ಗಣಪತಿ ಬ್ಯಾಂಕ್ ಮತ್ತು ಹೌಸ್ ಬಿಲ್ಡಿಂಗ್ ಸೊಸೈಟಿ ಷೇರುದಾರ ಸದಸ್ಯರಿಗೆ ಉತ್ತಮ ಸೇವೆ ನೀಡುತ್ತಿವೆ ಎಂದು ತಿಳಿಸಿದರು.

ಹೌಸ್ ಬಿಲ್ಡಿಂಗ್ ಸೊಸೈಟಿ ಅಧ್ಯಕ್ಷ ಕೆ.ಸತೀಶ್ ಮಾತನಾಡಿ, ಎಲ್ಲರ ಸಹಕಾರ ಇದ್ದಾಗ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ. ಆಡಳಿತ ಮಂಡಳಿ ಸೊಸೈಟಿ ಅಭಿವೃದ್ಧಿಗೆ ಮಾಗದರ್ಶನ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಮನೆ ನಿರ್ಮಾಣ, ರಿಪೇರಿ, ಬೇರೆ ಬೇರೆ ಕ್ಷೇತ್ರದಲ್ಲೂ ಸೇವೆ ವಿಸ್ತರಿಸುವ ಉದ್ದೇಶವಿದೆ ಎಂದರು.

ಗಣಪತಿ ಬ್ಯಾಂಕ್ ಅಧ್ಯಕ್ಷ ಆರ್.ಶ್ರೀನಿವಾಸ್, ಉಪಾಧ್ಯಕ್ಷ ವಿ.ಶಂಕರ್ ಅವರನ್ನು ಸನ್ಮಾನಿಸಲಾಯಿತು. ಬಸವರಾಜ್, ಎಸ್.ಬಿ.ರಘುನಾಥ್, ಉಮೇಶ್ ಹಿರೇನೆಲ್ಲೂರು, ಗೋಪಾಲ, ಸುಜಾತಾ, ಉಷಾ, ಪ್ರಮೋದ್, ಚಂದ್ರು, ನಾಗಪ್ಪ, ಪದ್ಮನಾಭ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net