

ಆಯನೂರು: ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಡಿ ಸಾಂತ್ವನ ಟ್ರಸ್ಟ್‌ನಿಂದ ಸಮೀಪದ ಮಲೇಶಂಕರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡಕ್ಕೆ ಬಣ್ಣ ಹಚ್ಚಲಾಯಿತು.
ಮಕ್ಕಳಿಗೆ ಟ್ರಸ್ಟ್‌ನಿಂದ ಇದೇ ಸಂದರ್ಭ ನೋಟ್‌ಬುಕ್ ವಿತರಿಸಲಾಯಿತು. ಶಾಲಾ ಆವರಣದಲ್ಲಿ ವಿವಿಧ ಸಸಿಗಳನ್ನು ನೆಡಲಾಯಿತು.
ಟ್ರಸ್ಟ್ ಸದಸ್ಯರಾದ ಅಭಿಲಾಶ್ ಮರಿಯಪ್ಪ, ವಿನಯ್ ಕೆ. ಪ್ರಕಾಶ್, ಮಧು, ವಿನಯ್ ಮಲೇಶಂಕರ, ಪ್ರದೀಪ್, ರಂಜಿತ್, ಶಿವಮೊಗ್ಗ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್, ಮೆಸ್ಕಾಂ ಕುಂಸಿ ವಿಭಾಗ ಸದಸ್ಯ ನಾಗರಾಜ್ ಇತರರಿದ್ದರು.