ಬಿಳಗಲ್ಲೂರು ಸಂಘಕ್ಕೆ ಮೋಹನ್‌ಕುಮಾರ್ ಅಧ್ಯಕ್ಷ

27kgl01
ಬಿಳಗಲ್ಲೂರು ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಸಮಿತಿ ಅಧ್ಯಕ್ಷ ಮೋಹನ್‌ಕುಮಾರ್ ಬಿದರೂರು ಅವರನ್ನು ಸನ್ಮಾನಿಸಲಾಯಿತು. ವೀರರಾಜಯ್ಯ ಜೈನ್, ಉಮೇಶ್ ಕೆಮ್ಮಣ್ಣಗಾರು, ಟಿ.ಸಿ.ಅರುಣ್‌ಕುಮಾರ್ ಇತರರಿದ್ದರು.
Published on

ಕಾರ್ಗಲ್: ಬಿಳಗಲ್ಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಮೋಹನ್‌ಕುಮಾರ್ ಹಾಗೂ ನಿರ್ದೇಶಕರು ಅಧಿಕಾರ ಸ್ವೀಕರಿಸಿದರು. ಮೋಹನ್‌ಕುಮಾರ್ ಅಧ್ಯಕ್ಷತೆಯಲ್ಲಿ ಮೊದಲ ಸಭೆ ನಡೆಸಲಾಯಿತು.

ಸಂಘದ ಉಪಾಧ್ಯಕ್ಷ ಉಮೇಶ್ ಕೆಮ್ಮಣ್ಣಗಾರು, ನಿರ್ದೇಶಕರಾದ ಟಿ.ಸಿ.ಅರುಣ್‌ಕುಮಾರ್, ಜಿ.ಉಮೇಶ್, ಕೃಷ್ಣಮೂರ್ತಿ, ಅಣ್ಣಾದೊರೆ ಯಡ್ಡಳ್ಳಿ, ಪ್ರಶಾಂತ್, ಶ್ರೀನಾಥ್, ಜಗನ್ನಾಥ, ಪುಷ್ಪಲತಾ ಹಾಗೂ ಮಂಜುಳಾ ಹೆನ್ನಿ, ಕನ್ನಪ್ಪ ಇಂದ್ರೋಡಿಮನೆ, ಮಹಾವೀರ ಜಾಲಿಗದ್ದೆ, ಸೊಸೈಟಿ ಕಾರ್ಯದರ್ಶಿ ನೀಲಕಂಠ, ಪ್ರಮುಖರಾದ ವಡನಬೈಲು ಶ್ರೀ ಕ್ಷೇತ್ರ ಬಳೆ ಪದ್ಮಾವತಿ ಅಮ್ಮನ ದೇವಾಲಯದ ಧರ್ಮದರ್ಶಿ ವೀರರಾಜಯ್ಯ ಜೈನ್, ನವೀನ್ ಜೈನ್, ರವೀಂದ್ರ, ನಾಗರತ್ನಾ, ಪೂರ್ಣಪ್ರಜ್ಞಾ, ಲೋಕರಾಜ್ ಜೈನ್, ರುಕ್ಮಿಣಿ, ನಾಗರಾಜ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net