ಸರ್ಕಾರಿ ಶಾಲೆಗಳು ಪ್ರಗತಿ ಹೊಂದಲಿ

4sor4
ಸೊರಬ ತಾಲೂಕಿನ ಬಂದಿಗೆ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಗೆ ಸೊರಬ ರೋಟರಿ ಕ್ಲಬ್‌ನಿಂದ ಶಾಲೆಗೆ ಉಚಿತವಾಗಿ ಆಲ್ಮೇರಾ ಹಾಗೂ ಕುರ್ಚಿಗಳನ್ನು ನೀಡಲಾಯಿತು. ಡಾ. ಎಚ್.ಇ.ಜ್ಞಾನೇಶ್, ನಿರಂಜನ ಕುಪ್ಪಗಡ್ಡೆ, ಡಾ. ನಾಗರಾಜ್ ಇತರರಿದ್ದರು.
Published on

ಸೊರಬ: ಪ್ರತಿ ಮಗುವಿಗೂ ಉತ್ತಮ ಶಿಕ್ಷಣ ದೊರೆಯಬೇಕು ಎಂದು ಸೊರಬ ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಡಾ. ಎಚ್.ಇ.ಜ್ಞಾನೇಶ್ ಹೇಳಿದರು.

ತಾಲೂಕಿನ ಬಂದಿಗೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸೊರಬ ರೋಟರಿ ಕ್ಲಬ್‌ನಿಂದ ಉಚಿತವಾಗಿ ಆಲ್ಮೇರಾ ಹಾಗೂ ಕುರ್ಚಿಗಳನ್ನು ವಿತರಿಸಿ ಮಾತನಾಡಿ, ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದಾಗ ಪ್ರಗತಿ ಸಾಧ್ಯ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದ್ದರೂ ಖಾಸಗಿ ಶಾಲೆ ವ್ಯಾಮೋಹ ಹೆಚ್ಚಿದೆ. ಉನ್ನತ ಹುದ್ದೆ ಅಲಂಕರಿಸಿದವರಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಲ್ಲರಿಗೂ ಏಕರೂಪದ ಶಿಕ್ಷಣ ಸಿಗುವಂತೆ ಆಗಬೇಕು ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳು ಪ್ರಗತಿ ಹೊಂದಬೇಕು. ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಹೆಚ್ಚು ಒತ್ತು ನೀಡುವುದರಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ರೋಟರಿ ಸಂಸ್ಥೆ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ನೆರವು ನೀಡುತ್ತಿದೆ ಎಂದರು.

ಸೊರಬ ರೋಟರಿ ಕ್ಲಬ್ ಅಧ್ಯಕ್ಷ ನಿರಂಜನ ಕುಪ್ಪಗಡ್ಡೆ, ನಿಕಟಪೂರ್ವ ಅಧ್ಯಕ್ಷ ಡಾ. ನಾಗರಾಜ್, ಕೃಷ್ಣಪ್ಪ ಓಟೂರು, ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣಪ್ಪ, ಉಪಾಧ್ಯಕ್ಷೆ ಜಾನಕಿ, ಸದಸ್ಯರಾದ ಸುಜಾತಾ, ಪಂಕಜಾ, ದಾಕ್ಷಾಯಿಣಿ, ನಾಗರತ್ನಾ, ಸರೋಜಾ, ಪ್ರಮೀಳಾ, ಗಂಗಾಧರ, ಬಿ.ಜಿ.ಷಣ್ಮುಖ, ವೀರಭದ್ರಪ್ಪ, ಬಿ.ಶಿವಾನಂದ, ಮುಖ್ಯಶಿಕ್ಷಕ ಮಹೇಶ, ಶಿಕ್ಷಕಿ ಅನಿತಾ ಮೇಸ್ತ, ಬಿಆರ್‌ಸಿ ಶಿವಕುಮಾರ, ಮಂಜಪ್ಪ, ದುರ್ಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net