ಗ್ರಂಥಾಲಯಗಳ ಸಂರಕ್ಷಣೆ ಅವಶ್ಯಕ

13bdvt2
ಭದ್ರಾವತಿ ತಾಪಂ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಗ್ರಂಥಪಾಲಕರ ದಿನಾಚರಣೆಯಲ್ಲಿ ಎಂ.ಗಂಗಣ್ಣ, ಕೆ.ಎಸ್.ಮಾಲಾ, ಉಪೇಂದ್ರ, ಸುರೇಶ್, ಮಹೇಶ್ವರ ನಾಯ್ಕ ಇತರರಿದ್ದರು.
Published on

ಭದ್ರಾವತಿ: ಗ್ರಂಥಾಲಯಗಳ ಬೆಳವಣಿಗೆಯಲ್ಲಿ ಗ್ರಂಥಪಾಲಕರ ಜವಾಬ್ದಾರಿ ದೊಡ್ಡದು ಎಂದು ತಾಪಂ ಇಒ ಎಂ.ಗಂಗಣ್ಣ ಹೇಳಿದರು.

ಗ್ರಂಥಪಾಲಕ ಎಸ್.ಆರ್.ರಂಗನಾಥನ್ ಅವರ ಜನ್ಮ ದಿನಾಚರಣೆ ಅಂಗವಾಗಿ ತಾಪಂ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಂಥಾಲಯಗಳ ಅಗತ್ಯ ಪ್ರತಿ ವ್ಯಕ್ತಿಗೂ ಮುಖ್ಯವಾಗಿದೆ. ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ಧಿಸುತ್ತದೆ. ಇಡೀ ವಿಶ್ವದ ಮಾಹಿತಿ ದೇಶದ ಇತಿಹಾಸದ ಪರಿಚಯವಾಗುತ್ತದೆ. ಅಂತಹ ಗ್ರಂಥಾಲಯಗಳ ಸಂರಕ್ಷಣೆ ಗ್ರಂಥ ಪಾಲಕರ ಮೇಲಿದೆ ಎಂದು ತಿಳಿಸಿದರು.

ಯರೇಹಳ್ಳಿ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕಿ ಕೆ.ಎಸ್.ಮಾಲಾ ಮಾತನಾಡಿ, ಎಸ್.ಆರ್.ರಂಗನಾಥನ್ ಅವರು ಮೊಟ್ಟಮೊದಲ ಗ್ರಂಥಪಾಲಕರಾಗಿ ಗ್ರಂಥಾಲಯಗಳಿಗೆ ಪಂಚಸೂತ್ರಗಳನ್ನು ರೂಪಿಸುವ ಮೂಲಕ ವರ್ಗೀಕರಣ ಮತ್ತು ಸೂಚೀಕರಣಗಳನ್ನು ಗ್ರಂಥಾಲಯಗಳಿಗೆ ಅಳವಡಿಸಿದ್ದರು ಎಂದರು.

ತಾಪಂ ಅಧಿಕಾರಿಗಳಾದ ಉಪೇಂದ್ರ, ಸುರೇಶ್, ಮಹೇಶ್ವರ ನಾಯ್ಕ, ವಿವಿಧ ಗ್ರಂಥಾಲಯಗಳ ಮೇಲ್ವಿಚಾರಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net