ಮುಖ್ಯಪೇದೆಗೆ ಎಸ್‌ಪಿಯಿಂದ ಪ್ರಶಂಸನಾ ಪತ್ರ

11 HHR P 06 (1)
ಹೊಳೆಹೊನ್ನೂರು ಪೊಲೀಸ್ ಮುಖ್ಯ ಪೇದೆ ಎಚ್.ವಿ.ಆನಂದ್ ಅವರಿಗೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಪ್ರಶಂಸನಾ ಪತ್ರ ವಿತರಿಸಿದರು. ಎಸ್.ವಿ.ದಿಲೀಪ್ ಇದ್ದರು.
Published on

ಹೊಳೆಹೊನ್ನೂರು: ಸಮೀಪದ ಮುಸ್ಲಿಂ ಕ್ಯಾಂಪ್‌ನಲ್ಲಿ ಮನೆ ಮನೆ ಪೊಲೀಸ್ ಭೇಟಿ ವೇಳೆ ಪಾಲಕತ್ವದಿಂದ ವಂಚಿತರಾಗಿದ್ದ ಇಬ್ಬರು ಮಕ್ಕಳಿಗೆ ಆಶ್ರಯ ಕಲ್ಪಿಸುವ ಸಂಬಂಧ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯನ್ನು ಮುಖ್ಯ ಪೇದೆ ಎಚ್.ವಿ.ಆನಂದ್ ಸಂಪರ್ಕಿಸಿದ್ದರು.

ಡಾನ್ ಬಾಸ್ಕೋ ಸಂಸ್ಥೆಯಲ್ಲಿ ಮಕ್ಕಳಿಗೆ ಆಶ್ರಯ ಕಲ್ಪಿಸಲು ನೆರವಾದ ಎಚ್.ವಿ.ಆನಂದ್ ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಪ್ರಶಂಸನಾ ಪತ್ರ ವಿತರಿಸಿದರು. ಎಸ್.ವಿ.ದಿಲೀಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net