ಎಲ್ಲರಲ್ಲೂ ಇರಲಿ ಸಾಮಾಜಿಕ ಕಳಕಳಿ

5sor1..
ಸೊರಬದ ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಡಾ. ಎಚ್.ಇ.ಜ್ಞಾನೇಶ್ ಮಾತನಾಡಿದರು. ರಾಮಪ್ಪ, ತಿಪ್ಪಯ್ಯಸ್ವಾಮಿ, ಶಾಂತಕುಮಾರಿ, ಬಿ.ಆರ್.ಸುಬ್ಬರಾಜು ಇತರರಿದ್ದರು.
Published on

ಸೊರಬ: ಜೀವನದಲ್ಲಿ ಪ್ರತಿಯೊಬ್ಬರೂ ದಾನ, ಧರ್ಮದ ಮೂಲಕ ಸಾಮಾಜಿಕ ಜವಾಬ್ದಾರಿ ಅರಿತು ಮುನ್ನಡೆಯಬೇಕು ಎಂದು ಸಮಾಜ ಸೇವಕ ಡಾ. ಎಚ್.ಇ.ಜ್ಞಾನೇಶ್ ಹೇಳಿದರು.

ಪಟ್ಟಣದ ಹೊಸಪೇಟೆ ಬಡಾವಣೆಯ ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ಶಾಲೆಗೆ ಬೆಂಗಳೂರಿನ ಅಂಬಾ ಸಂಸ್ಥೆಯು ಕಂಪ್ಯೂಟರ್‌ಗಳ ಕೊಡುಗೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮಾಜಿಕ ಜವಾಬ್ದಾರಿ ಎಲ್ಲರಲ್ಲಿ ಮೂಡಿದಾಗ ನೆಮ್ಮದಿ ವಾತಾವರಣ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.

ದಾನಿಗಳು, ಸಂಘಸಂಸ್ಥೆಗಳು ಒಳ್ಳೆಯ ಉದ್ದೇಶ ಹೊಂದಿ ನೀಡುವ ವಸ್ತುಗಳು ಸದ್ಬಳಕೆ ಆಗಬೇಕು. ಅಂಗವಿಕಲ ಮಕ್ಕಳಿಗೆ ಜ್ಞಾನ ನೀಡುವುದು ಶಿಕ್ಷಕರಿಗೆ ಸವಾಲಿದ್ದಂತೆ. ಅವರನ್ನು ಪೋಷಣೆ ಮಾಡಿ ಸಮಾಜಕ್ಕೆ ಉತ್ತಮ ಪ್ರಜೆಯಾಗಿ ರೂಪಿಸಬೇಕು ಎಂದರು.

ಬೆಂಗಳೂರಿನ ಅಂಬಾ ಸಂಸ್ಥೆ 20 ಕಂಪ್ಯೂಟರ್‌ಗಳನ್ನು ಸಂಸ್ಥೆಗೆ ದಾನವಾಗಿ ನೀಡಿತು. ಸಂಸ್ಥೆ ಕಾರ್ಯದರ್ಶಿ ರಾಮಪ್ಪ, ತಿಮ್ಮಯ್ಯ ಸ್ವಾಮಿ, ಶಾಂತಕುಮಾರಿ, ಬಿ.ಆರ್.ಸುಬ್ಬರಾಜು, ಎಸ್.ಎಂ.ನೀಲೇಶ್, ಪುಟ್ಟರಾಜು, ರವೀಂದ್ರ, ಗಾಯತ್ರಿ ನಾಯ್ಕ, ಮಂಗಳಾ ಪೂಜಾರಿ, ಸುವರ್ಣಾ, ಪಲ್ಲವಿ ನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net