ಮುಖಂಡರು ಮರಾಠ ಸಮಾಜದ ಅಭಿವೃದ್ಧಿಗೆ ಶ್ರಮಿಸಿ

12 HHR P 05
ಶಿವಮೊಗ್ಗ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಸಂಘ, ಜಿಲ್ಲಾ ಮರಾಠ ಸಮಾಜದಿಂದ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಜಗದೀಶ್ ಅವರನ್ನು ಸನ್ಮಾನಿಸಲಾಯಿತು. ಯಶವಂತರಾವ್ ಘೋರ್ಪಡೆ, ಸಚಿನ್ ಸಿಂಧ್ಯಾ, ಕೃಷ್ಣೋಜಿ ರಾವ್ ಇತರರಿದ್ದರು.
Published on

ಹೊಳೆಹೊನ್ನೂರು: ಮರಾಠ ಸಮಾಜದ ಮುಖಂಡರು ರಾಜಕೀಯದಲ್ಲಿ ಪ್ರಮುಖ ಹುದ್ದೆಗಳನ್ನು ಪಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಮರಾಠ ಸಮಾಜದ ಮುಖಂಡ ಯಶವಂತ ರಾವ್ ಘೋರ್ಪಡೆ ಹೇಳಿದರು.

ಶಿವಮೊಗ್ಗ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಸಂಘ, ಜಿಲ್ಲಾ ಮರಾಠ ಸಮಾಜದಿಂದ ಬುಧವಾರ ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಜಗದೀಶ್‌ಗೆ ಸನ್ಮಾನಿಸಿ ಮಾತನಾಡಿ, ಜಿಲ್ಲೆಯಲ್ಲಿ ಮರಾಠ ಸಮುದಾಯದ ಜನಸಂಖ್ಯೆ ಹೆಚ್ಚಿದೆ. ಕೆಲ ತಾಲೂಕುಗಳಲ್ಲಿ ಮರಾಠ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಬಿಜೆಪಿ ರಾಷ್ಟ್ರೀಯ ನಾಯಕರು ಮರಾಠ ಸಮುದಾಯವನ್ನು ಪರಿಗಣಿಸಿ ಜಿಲ್ಲಾ ಮಟ್ಟದಲ್ಲಿ ಪ್ರಮುಖ ಹುದ್ದೆ ನೀಡಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.

ಸಮುದಾಯದ ಮುಖಂಡರು ವಿವಿಧ ರಾಜಕೀಯ ಪಕ್ಷಗಳು ಸೇರಿ ಸಹಕಾರ ರಂಗದಲ್ಲೂ ಮುಂಚೂಣಿಯಲ್ಲಿದ್ದಾರೆ. ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಮಾಜದ ಪ್ರಮುಖರನ್ನು ಗುರುತಿಸಿ ಟಿಕೆಟ್ ನೀಡುವುದೂ ಸೇರಿ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದರು.

ಸೇವಾ ಸಂಘದ ಅಧ್ಯಕ್ಷ ಸಚಿನ್ ಸಿಂಧ್ಯಾ, ಬಾಳೋಜಿ ಕೃಷ್ಣೋಜಿ ರಾವ್, ಗೀತಾ ಸತೀಶ್, ದೇವರಾಜ್ ಶಿಂಧೆ, ರಮೇಶ್, ದೇವೇಂದ್ರಪ್ಪ, ಕವಿತಾ ರಾವ್, ರಾಮಚಂದ್ರ ರಾವ್, ಕೃಷ್ಣಮೂರ್ತಿ, ಕಿರಣ್, ರಾಜಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net